‘ಯಾವುದೇ ದೇಶದಲ್ಲಿ ಸಾಮಾನ್ಯವಾಗಿ ವ್ಯಾಪಾರದ ಕೇಂದ್ರವಾಗಿರುವ ನಗರಗಳೆಂದರೆ ಝಗಮಗಿಸುವ ವಿದ್ಯುತ್ ದೀಪಗಳ ಬೆಳಕಿರುವ ಅಂಗಡಿಗಳು, ಸರಕು-ಸಾಗಾಟ ವಾಹನಗಳ ಓಡಾಟ, ಬ್ಯಾಂಕಿನ ಶಾಖೆಗಳ ವಹಿವಾಟು ಇಂತಹ ದೃಶ್ಯಗಳು ಕಣ್ಣೆದುರಿಗೆ ಬರುತ್ತವೆ; ಆದರೆ ಹೆಚ್ಚುಕಡಿಮೆ ವಿದ್ಯುಚ್ಛಕ್ತಿಯಿಲ್ಲದ, ಬ್ಯಾಂಕುಗಳ ಶಾಖೆಗಳಿಲ್ಲದೆ, ಬಂದೂಕು, ಪಿಸ್ತೂಲು ಇತ್ಯಾದಿಗಳ ಸದ್ದಿನಿಂದ ಪ್ರತಿಧ್ವನಿಸುವ ಮತ್ತು ಅಮೇರಿಕನ್ ಡಾಲರ್‌ಗಳಲ್ಲಿ ಎಲ್ಲ ವ್ಯವಹಾರ ನಡೆಯುವ ವ್ಯಾಪಾರದ ಒಂದು ಕೇಂದ್ರವಿದೆ ಎಂದರೆ ಆಶ್ಚರ್ಯವೇ ಆಗಬಹುದು. ಅಂತಹ ಒಂದು ಕೇಂದ್ರ ಪಾಕಿಸ್ತಾನದ ವಾಯುವ್ಯ ಗಡಿಭಾಗದ ಪ್ರಾಂತದಲ್ಲಿ ಪೇಶಾವರದ ದಕ್ಷಿಣಕ್ಕೆ ೨೫ ಕಿಲೋಮೀಟರ್ ಅಂತರದಲ್ಲಿದೆ. ಇಲ್ಲಿ ಶಸ್ತ್ರಾಸ್ತ್ರಗಳ ಅನಧಿಕೃತ ವ್ಯಾಪಾರ ಬಹಿರಂಗವಾಗಿ ನಡೆಯುತ್ತದೆ. ಮಧ್ಯ-ಪೂರ್ವದಲ್ಲಿನ ಭಯೋತ್ಪಾದಕರನ್ನು ಹಿಡಿದು ಉತ್ತರ ಐಯರ್ಲ್ಯಾಂಡನ ಭಯೋತ್ಪಾದಕರ ವರೆಗೆ ಅನೇಕ ದೇಶಿ ಮತ್ತು ವಿದೇಶಿ ಗ್ರಾಹಕರು ಶಸ್ತ್ರಾಸ್ತ್ರಗಳ ಖರೀದಿಗಾಗಿ ಇಲ್ಲಿ ಬರುತ್ತಾರೆ. ಈ ಕೇಂದ್ರದ ಹೆಸರು ‘ದಾರಾ ಆದಮ ಖೇಲ’ ! ಮರಳುಗಾಡಿನ, ಮರುಭೂಮಿಯ ಮೇಲಿರುವ ಈ ಹಳ್ಳಿಯು ಅತ್ಯಂತ ಅವ್ಯವಸ್ಥಿತ.
ಈ ಹಳ್ಳಿಯು ಅಂತರರಾಷ್ಟ್ರೀಯ ಭಯೋತ್ಪಾದಕರಿಗಾಗಿ ಶಸ್ತ್ರಗಳನ್ನು ಖರೀದಿಸುವ ಪ್ರಮುಖ ವ್ಯಾಪಾರ ಕೇಂದ್ರವಾಗಿವೆ. ಈ ಹಳ್ಳಿಯಲ್ಲಿ ಒಂದೇ ಒಂದು ಮುಖ್ಯ ರಸ್ತೆಯಿದೆ. ಅದರ ಎರಡೂ ಬದಿಗಳಲ್ಲಿ ಶಸ್ತ್ರಾಸ್ತ್ರ ಮಾರಾಟದ ಅಂಗಡಿಗಳು, ಅಂದರೆ ಗೂಡಂಗಡಿಗಳಿವೆ.
೧. ಇದು ಇಡೀ ಜಗತ್ತಿನಲ್ಲಿ ಮತ್ತು ವಿದೇಶಗಳಲ್ಲಿ ತಯಾರಾದ (ಫಾರಿನ್ ಮೇಡ್) ಚಿಕ್ಕ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಸ್ಥಳವಾಗಿದೆ
ಶಸ್ತ್ರಾಸ್ತ್ರಗಳ ಮಾರಾಟದ ಅಂಗಡಿಗಳು ಹೊರಗಿನಿಂದ ಆಕರ್ಷಕವಿಲ್ಲದಿದ್ದರೂ, ಒಳಗಡೆ ಮಾತ್ರ ಜಗತ್ತಿನಲ್ಲಿನ ಚಿಕ್ಕ ಚಿಕ್ಕ ಶಸ್ತ್ರಾಸ್ತ್ರಗಳು ಅಂಗಡಿಗಳಲ್ಲಿ ತುಂಬಿ ತುಳುಕುತ್ತಿರುತ್ತವೆ. ರಷ್ಯಾದ ‘ಕಲಾನಕಾವ್’, ಅಮೇರಿಕನ್ ‘ಎಂ ೧೬’, ಇಟಾಲಿಯನ್ ‘ಬೆರೆಟ್ಟಾ’, ಇಸ್ರೈಲ್‌ನ ‘ಉಝೀ’ ಈ ಬಂದೂಕುಗಳು ಮತ್ತು ಪಿಸ್ತೂಲುಗಳು, ಹಾಗೆಯೇ ನಡೆಯುವಾಗ ಕೈಯಲ್ಲಿ ಹಿಡಿಯುವ ಕೋಲಿನಲ್ಲಿ ಅಡಗಿರುವ ಪಿಸ್ತೂಲು, ಬಾಲ್‌ಪಾಯಿಂಟ್ ಪೆನ್‌ನಲ್ಲಿ (ಲೇಖನಿಯಲ್ಲಿ) ಅಡಗಿರುವ ಪಿಸ್ತೂಲು ಇತ್ಯಾದಿ ಅತ್ಯದ್ಭುತವಾದ ಶಸ್ತ್ರಾಸ್ತ್ರಗಳೂ ಇಲ್ಲಿ ಲಭ್ಯವಿವೆ. ಅದರಲ್ಲಿನ ಕೆಲವು ಅಸಲಿ ವಿದೇಶಿ ಆಗಿರುತ್ತವೆ ಮತ್ತು ಇನ್ನೂ ಕೆಲವು ಶಸ್ತ್ರಾಸ್ತ್ರಗಳು ನಕಲಿ ಆಗಿರುತ್ತವೆ.
೨. ಜಗತ್ತಿನಾದ್ಯಂತ ನೂರಾರು ಗ್ಯಾಲನ್ ರಕ್ತವನ್ನು ಹರಿಸುವ ಮೃತ್ಯುವಿನ ಭೀಕರ ಅಪರಾಧದ ಮಾರುಕಟ್ಟೆ
ಅಫಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಈ ಹಳ್ಳಿಯು ಮೊದಲು ಸೋವಿಯಟ್ ಸೈನ್ಯದ ವಿರುದ್ಧ ಹೋರಾಡುವ ಅಫಘಾನ ಮುಜಾಹಿದ್ದೀನ ಗನಿಮಾಗಳ ಶಸ್ತ್ರಾಸ್ತ್ರ ಖರೀದಿಯ ಉಗ್ರಾಣವೇ ಆಗಿತ್ತು. ಅದನ್ನು ಈಗ ಅಂತರರಾಷ್ಟ್ರೀಯ ‘ಶಸ್ತ್ರಾಸ್ತ್ರ ವ್ಯಾಪಾರ ಕೇಂದ್ರ’ ಎಂದು ಗುರುತಿಸಲಾಗುತ್ತದೆ. ಹಳ್ಳಿಯ ಮುಖ್ಯ ರಸ್ತೆಯ ಹಿಂದೆ ಚಿಕ್ಕ ಚಿಕ್ಕ ಬೀದಿಗಳಲ್ಲಿ ವಿದೇಶಿ ಶಸ್ತ್ರಾಸ್ತ್ರಗಳ ಉತ್ತಮ ನಕಲು ಮಾಡುವ ಅಸಂಖ್ಯಾತ ‘ಗೃಹಕೈಗಾರಿಕೆ’. ಯಾವುದಾದರೂ ಶಸ್ತ್ರ ಒಪ್ಪಿಗೆಯಾದರೆ, ಗಿರಾಕಿಯು (ಖರೀದಿಸುವವನು) ಅಂಗಡಿಯ ಹೊರಗೆ ಬಂದು ಗುಂಡುಗಳನ್ನು ಹಾರಿಸಿ ಅದನ್ನು ಪರಿಶೀಲಿಸುತ್ತಾನೆ ಮತ್ತು ಬಳಿಕ ವ್ಯವಹಾರ ಪೂರ್ಣವಾಗುತ್ತದೆ. ಪ್ರತಿ ೨-೩ ನಿಮಿಷಗಳಿಗೊಮ್ಮೆ ಯಾವುದಾದರೊಂದು ಅಂಗಡಿಯ ಅಂಗಳದಲ್ಲಿ ಗಾಳಿಯಲ್ಲಿ ಇಂತಹ ಫೈರಿಂಗ್ ಆಗುತ್ತಿರುತ್ತದೆ. ಈ ಸದ್ದಿನ ರೂಢಿ ಎಲ್ಲರಿಗೂ ಎಷ್ಟೊಂದು ಆಗಿದೆಯೆಂದರೆ, ಮಲಗಿರುವ ನಾಯಿಯೂ ಈ ಸದ್ದಿನಿಂದ ಏಳುವುದಿಲ್ಲ. ಇದು ಜಗತ್ತಿನಾದ್ಯಂತ ನೂರಾರು ಗ್ಯಾಲನ್ (೧ ಗ್ಯಾಲನ್ ಅಂದರೆ ೩.೭೯ ಲೀಟರ್) ರಕ್ತವನ್ನು ಹರಿಸುವ ಮೃತ್ಯುವಿನ ಭೀಕರ ಅಪರಾಧಗಳ ಮಾರುಕಟ್ಟೆ ಆಗಿದೆ.
೩. ಕಾಶ್ಮೀರದ ಮೇಲೆ ಆಕ್ರಮಣ ಮಾಡುವ ಭಯೋತ್ಪಾದಕರು ‘ದಾರಾ’ದಿಂದಲೇ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಾರೆ, ಅಲ್ಲದೇ ಇಲ್ಲಿ ಚಿಕ್ಕ ತೋಪು, ಅಮೇರಿಕನ್ ತಯಾರಿಕೆಯ ‘ಸ್ಟಿಂಗರ್’ ಕ್ಷಿಪಣಿಗಳೂ ಮಾರಾಟವಾಗುತ್ತವೆ
ಸ್ವತಃ ಪಾಕಿಸ್ತಾನವೂ ಈ ಮಾರುಕಟ್ಟೆಯ ಹಿಡಿತದಿಂದ ಹೊರತಾಗಿಲ್ಲ. ಕೇವಲ ಕರಾಚಿಯಲ್ಲಿಯೇ ‘ದಾರಾ’ದಿಂದ ಖರೀದಿಸಿದ ಏಳು ಸಾವಿರ ‘ಏಕೆ-೪೭’ ರೈಫಲ್ ಭಯೋತ್ಪಾದಕರ ಕೈಯಲ್ಲಿವೆ. ಪಂಜಾಬ ಮತ್ತು ಸಿಂಧ್‌ನಲ್ಲಿ ‘ರಕ್ತದ ಹೊಳೆಯನ್ನು ಹರಿಸುವ’ ಶಸ್ತ್ರಾಸ್ತ್ರಗಳ ಉಗಮ ‘ದಾರಾ ಆದಮ ಖೇಲ’ವೇ ಆಗಿದೆ. ಕಾಶ್ಮೀರದಲ್ಲಿ ಭಾರತೀಯ ನಾಗರಿಕರ ಮೇಲೆ ಮತ್ತು ಸೈನ್ಯದ ಮೇಲೆ ಆಕ್ರಮಣ ನಡೆಸಲು ಕಾಶ್ಮೀರಿ ಭಯೋತ್ಪಾದಕರು ‘ದಾರಾ’ದಿಂದಲೇ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಾರೆ. ಇಲ್ಲಿನ ಕಾರ್ಮಿಕರು ‘೨ ರಿಂದ ೩ ವಾರಗಳಲ್ಲಿ ‘ಉತ್ತಮ’ ದೇಶಿ ನಕಲಿ ಶಸ್ತ್ರವನ್ನು ತಯಾರಿಸಬಲ್ಲದು, ಎಂದು ‘ದಾರಾ’ ಅಂಗಡಿಯವರು ಹೇಳುತ್ತಾರೆ ಮತ್ತು ಅದು ಸತ್ಯವೂ ಆಗಿದೆ. ಅಲ್ಲಿಯ ಅಂಗಡಿಯವರು ಕೇವಲ ಚಿಕ್ಕ ಶಸ್ತ್ರಾಸ್ತ್ರಗಳ ನಿರ್ಮಾಣದಲ್ಲಿಯೇ ಸಿಲುಕಿಲ್ಲ. ಅವರು ತಮ್ಮ ಅನಧಿಕೃತ ವ್ಯಾಪಾರವನ್ನು ವಿವಿಧ ರೀತಿಯಲ್ಲಿ ಬೆಳೆಸಿದ್ದಾರೆ. ಈ ಅಂಗಡಿಯವರು ಈಗ ಚಿಕ್ಕ ತೋಪುಗಳು, ವಿಮಾನಗಳನ್ನು ಧ್ವಂಸಗೊಳಿಸುವ ತೋಪು ಮತ್ತು ಹ್ಯಾಂಡ ಗ್ರೆನೇಡ್‌ಗಳನ್ನು ಮಾರಾಟ ಮಾಡುವುದಷ್ಟೇ ಅಲ್ಲ, ಅಮೇರಿಕನ್ ತಯಾರಿಕೆಯ ‘ಸ್ಟಿಂಗರ್’ ವಿಮಾನ ಧ್ವಂಸಗೊಳಿಸುವ ಕ್ಷಿಪಣಿಗಳನ್ನು ಕೂಡ ಮಾರುತ್ತಾರೆ. ಆ ಗೂಡಂಗಡಿಗಳಿಗೆ ‘ಏಶಿಯಾ ಆರ್ಮ್ಸ ಸ್ಟೋರ್ಸ್’ ಮುಂತಾದ ಭರ್ಜರಿ ಹೆಸರುಗಳು ಕೂಡ ಇವೆ ಮತ್ತು ಅವುಗಳ ಮಾಲೀಕರು ಗ್ರಾಹಕರಿಗೆ ಪ್ರಚಾರವೆಂದು ‘ವಿಸಿಟಿಂಗ್ ಕಾರ್ಡ್’ನೊಂದಿಗೆ ಮಾಹಿತಿಪತ್ರವನ್ನು ಕೂಡ ಕೊಡುತ್ತಾರೆ.
ಈ ಶಸ್ತ್ರಾಸ್ತ್ರಗಳ ಮಾರಾಟದಿಂದ ಪ್ರತಿವರ್ಷ ಸಾವಿರಾರು ನಿರಪರಾಧಿ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ, ಈ ಬಗ್ಗೆ ಅಂಗಡಿಯವರಿಗೆ ದುಃಖವೆನಿಸುತ್ತದೆಯೇ ? ಖಂಡಿತವಾಗಿಯೂ ಇಲ್ಲ. ಸಾಮಾನ್ಯವಾಗಿ ಒಬ್ಬ ಅಂಗಡಿಯವನು ವರ್ಷದಲ್ಲಿ ಸರಾಸರಿ ೧ ಸಾವಿರ ಬಂದೂಕುಗಳನ್ನು ಮಾರುತ್ತಾನೆ. ಮೂಲ ಸ್ವರೂಪದ (ಓರಿಜಿನಲ್) ‘ಏಕೆ-೪೭’ (ಇವುಗಳನ್ನು ಸೋವಿಯತ್‌ನ ಮೃತ ಸೈನಿಕರಿಂದ ತೆಗೆದುಕೊಳ್ಳಲಾಗಿತ್ತು) ಇದನ್ನು ಸುಮಾರು ೩೨೦ ಅಮೇರಿಕನ್ ಡಾಲರ್‌ಗಳಿಗೆ ಮಾರಾಟ ಮಾಡಲಾಗುತ್ತದೆ. ಅದನ್ನೇ ‘ದಾರಾ’ದಲ್ಲಿ ತಯಾರಿಸಲಾದ ಅದೇ ‘ಕಾರ್ಯಕ್ಷಮತೆ’ ಹೊಂದಿರುವ ನಕಲಿ ಕೇವಲ ೫೦ ಡಾಲರ್‌ಗಳಿಗೆ ಮಾರಾಟ ಮಾಡಲಾಗುತ್ತದೆ. ಖರೀದಿ-ಮಾರಾಟ ಎಲ್ಲವೂ ಅಮೇರಿಕನ್ ಡಾಲರ್‌ಗಳಲ್ಲಿಯೇ ನಡೆಯುತ್ತದೆ. ಗ್ರಾಹಕರ ಬಳಿ ಇತರೆ ಯಾವುದಾದರೂ ಚಲನ ಇದ್ದರೆ, ಕಳ್ಳ ಸಂತೆಯಲ್ಲಿ ಸಿಗುವ ದರದಲ್ಲಿ ಅದನ್ನು ಡಾಲರ್‌ಗಳಲ್ಲಿ ಪರಿವರ್ತಿಸಿ ಕೊಡುವ ‘ಫೊರೆಕ್ಸ್ ಡೀಲರ್ಸ’ ಅಂದರೆ ವಿದೇಶಿ ಚಲನಗಳ ವ್ಯಾಪಾರಿಗಳೂ ಅಲ್ಲಿದ್ದಾರೆ. ಆ ವ್ಯಾಪಾರಗಳೂ ಅನಧಿಕೃತವಾಗಿರುತ್ತವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
೪. ಬಂದೂಕು ಮತ್ತು ಪಿಸ್ತೂಲುಗಳು ಇವೇ ‘ದಾರಾ’ನ ನಿವಾಸಿಗಳ ‘ಆಭರಣಗಳು’ ಮತ್ತು ಪ್ರತ್ಯಕ್ಷದಲ್ಲಿ ಗಡಿಸಲುಗಳಲ್ಲಿ ವಾಸಿಸುವ ದಾರಾವಾಸಿಗಳ ಹಾಸಿಗೆಯ ಕೆಳಗೆ ಅಮೇರಿಕನ್ ಡಾಲರ್‌ಗಳ ನೋಟುಗಳ ಬಂಡಲ್ ಇರುವುದು
ಖೈಬರ ಖಿಂಡಿಯ ಹತ್ತಿರದ ‘ದಾರಾ’ ಹಳ್ಳಿಯ ಇತಿಹಾಸವು ನೂರಾರು ವರ್ಷಗಳ ಗುಂಪುಗಳ ಯಾದವಿ ಕಲಹವು ರಕ್ತದಿಂದ ಸಾರಿಸಲ್ಪಟ್ಟಿದೆ. ಅಲ್ಲಿ ಕೇವಲ ಗುಂಪಿನ ಮುಖ್ಯಸ್ಥನ ರಾಜ್ಯ ನಡೆಯುತ್ತದೆ. ಪ್ರಾದೇಶಿಕ ಅಥವಾ ರಾಷ್ಟ್ರೀಯ ಸರಕಾರದ ಅಸ್ತಿತ್ವ ಹೆಸರಿಗೂ ಅಲ್ಲಿ ಇಲ್ಲ. ಪಾಕಿಸ್ತಾನದ ಸಂವಿಧಾನ, ಕಾನೂನು, ನ್ಯಾಯವ್ಯವಸ್ಥೆ ಅಲ್ಲಿ ನಡೆಯುವುದಿಲ್ಲ. ಪಾರಂಪರಿಕ ಮುಸಲ್ಮಾನ ಗುಂಪುಗಳ ಪದ್ಧತಿಯಂತೆ ನ್ಯಾಯವ್ಯವಸ್ಥೆ ನಡೆಯುತ್ತದೆ. ಆಶ್ಚರ್ಯದ ವಿಷಯವೆಂದರೆ ಶಸ್ತ್ರಾಸ್ತ್ರಗಳ ಇಷ್ಟು ದೊಡ್ಡ ಭಂಡಾರವಿದ್ದರೂ ಅವರಲ್ಲಿ ಜಗಳಗಳು ಆಗುವುದಿಲ್ಲ. ಅವರು ಅಪ್ಪಿತಪ್ಪಿ ಯಾವಾಗಲಾದರೊಮ್ಮೆ ಹೊಡೆದಾಡುತ್ತಾರೆ, ಕಾರಣ ಪ್ರತಿಯೊಬ್ಬರ ಬಳಿಯೂ ಶಸ್ತ್ರಗಳಿರುತ್ತವೆ ಮತ್ತು ‘ಗುಂಡಿಗೆ ಗುಂಡಿನಿಂದಲೇ ಉತ್ತರ ಸಿಗುತ್ತದೆ’, ಎನ್ನುವುದು ಸ್ಪಷ್ಟವಾಗಿರುತ್ತದೆ. ಎಲ್ಲ ರೀತಿಯ ಗಡಿಪಾರು ಆಗಿರುವ ಗೂಂಡಾಗಳು ಮತ್ತು ಅಪರಾಧಿಗಳು ಇಲ್ಲಿ ಸ್ವತಂತ್ರವಾಗಿ ಓಡಾಡುತ್ತಾರೆ. ಸಲ್ವಾರ್ ಕಮೀಸ್ ಈ ವಿಶೇಷ ಪಠಾಣರ ಪೋಷಾಕು ಧರಿಸುವ ಹಳ್ಳಿಗರು ಹೆಗಲಿನ ಮೇಲೆ ೨-೩ ಬಂದೂಕುಗಳನ್ನು ಇಟ್ಟುಕೊಂಡೇ ತಿರುಗಾಡುತ್ತಾರೆ. ಕೆಲವು ‘ದಾದಾ’ಗಳು ಎರಡೂ ಕೈಗಳಲ್ಲಿ ಪಿಸ್ತೂಲುಗಳನ್ನು ಹಿಡಿದುಕೊಂಡು ತಿರುಗಾಡುತ್ತಿರುತ್ತಾರೆ; ಆದರೆ ಆ ವಾತಾವರಣದಲ್ಲಿ ಚಿಕ್ಕ ಮಕ್ಕಳು ಶಸ್ತ್ರಾಸ್ತ್ರಗಳ ಬಿಡಿಭಾಗಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ತೆಗೆದುಕೊಂಡು ಹೋಗುತ್ತಿರುತ್ತಾರೆ. ಅಲ್ಲಿಯ ಶಸ್ತ್ರಾಸ್ತ್ರಗಳ ಕಾರ್ಖಾನೆಯಲ್ಲಿ ಬಾಲಕಾರ್ಮಿಕರು ಬಹಿರಂಗವಾಗಿ ದುಡಿಯುತ್ತಾರೆ. ಬಂದೂಕು, ಪಿಸ್ತೂಲು ಇವೇ ದಾರಾದ ನಿವಾಸಿಗಳ ‘ಆಭರಣ’ಗಳಾಗಿವೆ. ದಾರಾದಲ್ಲಿ ಪ್ರತಿವರ್ಷ ಸರಾಸರಿ ೧೮ ಸಾವಿರ ಬಂದೂಕು, ಪಿಸ್ತೂಲುಗಳ ಮಾರಾಟ ಮಾಡಲಾಗುತ್ತದೆ. ಇದರೊಂದಿಗೆ ‘ಹೆರಾಯಿನ್’ ಈ ಅಮಲು ಪದಾರ್ಥದ ಕಳ್ಳ ಸಾಗಣೆಯೂ ನಡೆಯುತ್ತದೆ. ಇದರ ಪರಿಣಾಮದಿಂದ ‘ದಾರಾ’ದಲ್ಲಿನ ಗ್ರಾಮಸ್ಥರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದರೂ ಅವರ ಹಾಸಿಗೆಯ ಕೆಳಗೆ ಅಮೇರಿಕನ್ ಡಾಲರ್ ನೋಟುಗಳ ಬಂಡಲ್‌ಗಳಿರುತ್ತವೆ.
೫. ‘ದಾರಾ’ದಲ್ಲಿನ ಹೊಸ ಪೀಳಿಗೆ ‘ಕಲೆ’ಯನ್ನು ರಕ್ಷಿಸುವುದು ಮತ್ತು ದಾರಾವಾಸಿಗಳು ಹೊಸ ಶಸ್ತ್ರಗಳನ್ನು ಕಂಡು ಹಿಡಿಯುವುದು
‘ದಾರಾ’ದಲ್ಲಿರುವ ಅಂಗಡಿಯವರು ತಮ್ಮ ‘ಕಲೆ’ಯ ವಾರಸುದಾರಿಕೆಯನ್ನು ತಮ್ಮ ಮಕ್ಕಳಿಗೆ ಬಹಳ ಪ್ರೀತಿಯಿಂದ ಒಪ್ಪಿಸುತ್ತಾರೆ. ಇದಲ್ಲದೇ ಅವರು ‘ಸಂಶೋಧನೆ’ಯನ್ನೂ ಮಾಡುತ್ತಿರುತ್ತಾರೆ. ಹಾಜಿ ವಾರಿಸ ಈ ೬೦ ವರ್ಷದ ಕಾರ್ಮಿಕನು ‘ರಿವಾಲ್ವರ್’ ನಂತಹ ಕಾರ್ಯಕ್ಷಮತೆಯುಳ್ಳ ಬಂದೂಕನ್ನು ತಯಾರಿಸಿದ್ದಾನೆ. ಈ ಬಂದೂಕಿನ ಕುದುರೆಯನ್ನು ಒಮ್ಮೆ ಎಳೆದ ಕೂಡಲೇ, ಅದರಲ್ಲಿರುವ ಆರೂ ಗುಂಡುಗಳು ಒಂದರ ಹಿಂದೆ ಒಂದು ವೇಗದಿಂದ ಹೊರಗೆ ಬೀಳುತ್ತವೆ. ಆ ಸಂಶೋಧನೆಯ ‘ಪೇಟೆಂಟ್’ (ಸ್ವಾಮಿತ್ವದ ಹಕ್ಕು) ಅವನು ಹೊಂದಿದ್ದಾನೆ. ಅಂತಹ ಬಂದೂಕುಗಳನ್ನು ತಯಾರಿಸುವವರು ವಾರಿಸ್‌ನ ಹೆಸರನ್ನು ಬಂದೂಕಿನ ನಲಿಕೆಯ ಮೇಲೆ ಸಣ್ಣ ಅಕ್ಷರಗಳಲ್ಲಿ ಕೊರೆಯಬೇಕು ಮತ್ತು ವಾರಿಸ್‌ನಿಗೆ ಮಾರಾಟದ ಒಂದು ದಶಾಂಶ ಅಂದರೆ ಶೇ. ೧೦ ರಷ್ಟು ಮೊತ್ತವನ್ನು ಮನೆಗೆ ತಂದು ಕೊಡಬೇಕು. ಈ ‘ಪೇಟೆಂಟ್’ ಕಾನೂನನ್ನು ಯಾರಾದರೂ ಉಲ್ಲಂಘಿಸಿದರೆ, ಗ್ರಾಮಸ್ಥರು ಅವನನ್ನು ಯಮಪುರಿಗೆ ಕಳುಹಿಸುತ್ತಾರೆ.
ದಾರಾದಲ್ಲಿರುವ ವ್ಯಾಪಾರಿಗಳ ಮಂತ್ರವೆಂದರೆ ‘ಸರಕಾರ ಎಷ್ಟು ಅಸ್ಥಿರವೋ ಅಷ್ಟು ವ್ಯಾಪಾರ ಉತ್ತಮ !’ ಈ ವ್ಯಾಪಾರಿ ಕೇಂದ್ರವನ್ನು ಕಿತ್ತೆಸೆಯಲು ಪಾಕಿಸ್ತಾನ ಸರಕಾರ ಪ್ರಯತ್ನವನ್ನೂ ಮಾಡುವುದಿಲ್ಲ.
– ಯುದ್ಧ ಪತ್ರಕರ್ತ ದಿ. ಮಿಲಿಂದ ಗಾಡಗೀಳ (ಆಧಾರ: ‘ಪ್ರಜ್ವಲಂತ’ ಮಾಸಿಕ ನವೆಂಬರ ೧೯೯೯)
(ವರ್ಷ ೧೯೯೯ ರ ಬಳಿಕ ಈಗ ೨೧ ವರ್ಷಗಳ ಬಳಿಕ ಈ ಪರಿಸ್ಥಿತಿ ಮತ್ತಷ್ಟು ಭೀಕರವಾಗಿರಬೇಕು ಎನ್ನುವುದೂ ಅಷ್ಟೇ ಸತ್ಯ. ಇದರಿಂದ ಒಂದು ಮಹತ್ವದ ವಿಷಯ ಗಮನಕ್ಕೆ ಬರುವುದೇನೆಂದರೆ, ಭಯೋತ್ಪಾದಕರು ಮತ್ತು ಅವರಿಗೆ ಅನಧಿಕೃತವಾಗಿ ದೊರಕುವ ಯಥಾವತ್ತಾದ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಮಾರಾಟ ಕೇಂದ್ರ ಪಾಕಿಸ್ತಾನದಲ್ಲಿಯೇ ಇದೆ. ಇದರಿಂದ ಸಂಪೂರ್ಣ ಪಾಕಿಸ್ತಾನವೇ ಭಯೋತ್ಪಾದನೆಯ ಉಗಮಸ್ಥಾನವಾಗಿದ್ದು, ಭಾರತದೊಂದಿಗೆ ಜಗತ್ತಿನಾದ್ಯಂತ ಶಾಂತಿಯನ್ನು ಕಾಪಾಡಬೇಕಾಗಿದ್ದರೆ, ಪಾಕಿಸ್ತಾನವನ್ನೇ ನಾಶ ಮಾಡಬೇಕು – ಸಂಪಾದಕರು)