‘ಪ್ರಧಾನಿ ಮೋದಿ ಮತ್ತು ಸಿಖ್ಕ ಇವರಲ್ಲಿ ಒಬ್ಬರನ್ನು ಆರಿಸಿ !’(ಅಂತೆ)

  • ಪ್ರಧಾನಮಂತ್ರಿಗಳ ಭದ್ರತಾ ಲೋಪದ ಪ್ರಕರಣದಲ್ಲಿ ತನಿಖೆ ನಡೆಸುವ ಸಮಿತಿಯ ಅಧ್ಯಕ್ಷೆ ಮಾಜಿ ನ್ಯಾಯಾಧೀಶೆ ಇಂದೂ ಮಲ್ಹೋತ್ರಾ ಇವರಿಗೆ ಬೆದರಿಕೆ

  • ‘ಸಿಖ್ಕ ಫಾರ ಜಸ್ಟೀಸ’ ಸಂಘಟನೆಯಿಂದ ಬೆದರಿಕೆ

  • ‘ಸಿಖ್ಕ ಫಾರ ಜಸ್ಟೀಸ’ಯಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೂ ಬೆದರಿಕೆಯ ದೂರವಾಣಿ ಕರೆ

ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯನ್ನು ಸಂಪೂರ್ಣ ನಷ್ಟಗೊಳಿಸದೇ ಇರುವುದರಿಂದಲೇ ಅವರ ದುಃಸ್ಸಾಹಸ ಹೆಚ್ಚುತ್ತಲೇ ಇದೆ, ಎನ್ನುವುದು ಇದರಿಂದ ಕಂಡು ಬರುತ್ತದೆ. ಇದನ್ನು ನಿಲ್ಲಿಸಲು ಕೇಂದ್ರ ಸರಕಾರವು ಕಠಿಣ ಕ್ರಮವನ್ನು ತೆಗೆದುಕೊಳ್ಳುವುದು ಆವಶ್ಯಕವಿದೆ !

ದೆಹಲಿ – ಪಂಜಾಬಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತಾ ಲೋಪದ ಪ್ರಕರಣದ ತನಿಖೆ ನಡೆಸುತ್ತಿರುವ ಸಮಿತಿಯ ಅಧ್ಯಕ್ಷೆ ಮಾಜಿ ನ್ಯಾಯಾಧೀಶೆ ಇಂದೂ ಮಲ್ಹೋತ್ರಾ ಇವರಿಗೆ ‘ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಖ್ಕ ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿರಿ’. ಈ ಪ್ರಕರಣದ ತನಿಖೆಯನ್ನು ಮುಂದುವರಿಸಬಾರದು. ಯಾವುದೇ ಪರಿಸ್ಥಿತಿಯಲ್ಲಿ ಈ ಪ್ರಕರಣದಲ್ಲಿ ಮಾಜಿ ನ್ಯಾಯಾಧೀಶರಿಗೆ ತನಿಖೆಯನ್ನು ಮುಂದುವರಿಸಲು ಬಿಡುವುದಿಲ್ಲ’, ಎಂದು ಬೆದರಿಕೆ ಒಡ್ಡಲಾಗಿದೆ. ಈ ಬೆದರಿಕೆ ‘ಸಿಖ್ ಫಾರ ಜಸ್ಟೀಸ’ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯು ನೀಡಿರುವುದಾಗಿ ಪ್ರಸಾರ ಮಾಧ್ಯಮಗಳಿಂದ ಹೇಳಲಾಗುತ್ತಿವೆ. ಈ ಸಂಘಟನೆಯು ಬೆದರಿಕೆ ಒಡ್ಡಿರುವ ಧ್ವನಿಸುರಳಿ(ಆಡಿಯೋ ಕ್ಲಿಪ್) ಕಳುಹಿಸಿದೆ, ಅದರಲ್ಲಿ ಮೇಲಿನ ಬೆದರಿಕೆ ಒಡ್ಡಲಾಗಿದೆ.

೧. ಒಂದು ವಾರ್ತಾಸಮೂಹ ನೀಡಿರುವ ಮಾಹಿತಿಯನುಸಾರ ಈ ಧ್ವನಿಸುರುಳಿಯಲ್ಲಿ ‘ನಾವೂ ಸರ್ವೋಚ್ಚ ನ್ಯಾಯಾಲಯದ ಎಲ್ಲ ನ್ಯಾಯವಾದಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ ಮತ್ತು ಎಲ್ಲರ ‘ಲೆಕ್ಕ’ವನ್ನು ಚುಕ್ತಾ ಮಾಡಲಾಗುವುದು. ಈ ಅಂಶ ಪ್ರಧಾನ ಮಂತ್ರಿ ಮೋದಿ ಮತ್ತು ಸಿಖ್ಕ ಇವರ ನಡುವೆ ಇತ್ತು; ಆದರೆ ನೀವು (ಇಂದೂ ಮಲ್ಹೋತ್ರಾ) ‘ಎಸ್.ಎಫ್.ಜೆ’, (ಸಿಖ್ ಫಾರ ಜಸ್ಟೀಸ) ನ ವಿರುದ್ಧ ದೂರು ದಾಖಲಿಸಿ ನಿಮ್ಮನ್ನು ಸಂಕಟಕ್ಕೆ ದೂಡಿದ್ದೀರಿ. ಈಗ ನಾವು ಸರ್ವೋಚ್ಚ ನ್ಯಾಯಾಲಯದ ಮುಸಲ್ಮಾನ ವಿರೋಧಿ ಮತ್ತು ಸಿಖ್ಕ ವಿರೋಧಿ ನ್ಯಾಯಾಧೀಶರನ್ನು ಜವಾಬ್ದಾರರನ್ನಾಗಿ ಮಾಡುತ್ತೇವೆ ಎಂದು ಹೇಳಿದೆ.

೨. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳು ಜನೇವರಿ ೧೦ ರಂದು, ಅವರಿಗೆ ಬೆದರಿಕೆಯ ದೂರವಾಣಿ ಕರೆಗಳು ಬರುತ್ತಿವೆಯೆಂದು ತಿಳಿಸಿದ್ದರು. ಇದರಲ್ಲಿ ಪ್ರಧಾನಮಂತ್ರಿ ಮೋದಿಯವರ ಭದ್ರತೆಯ ವಿಷಯವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಎತ್ತಬಾರದೆಂದು ಮತ್ತು ಅದರ ಮೇಲಿನ ಆಲಿಕೆಯಲ್ಲಿ ಸಹಾಯ ಮಾಡದೇ ಇರಲು ಬೆದರಿಕೆ ಒಡ್ಡಲಾಗಿತ್ತು.