ಇಮ್ರಾನ್ ಖಾನ್ ಒಬ್ಬ ’ಅಂತರರಾಷ್ಟ್ರೀಯ ಭಿಕ್ಷುಕ’ನಾಗಿದ್ದು ಅವರ (ಸರಕಾರದ) ನಿರ್ಗಮನ ಪಾಕಿಸ್ತಾನದ ಸಮಸ್ಯೆಗಳಿಗೆ ಏಕೈಕ ಪರಿಹಾರವಾಗಿದೆ !

ಪಾಕಿಸ್ತಾನದ ‘ಜಮಾತ-ಎ-ಇಸ್ಲಾಮಿ’ ಈ ಪಕ್ಷದ ಮುಖಂಡ ಸಿರಾಜುಲ್ ಹಕ್ ಇವರ ಹೇಳಿಕೆ

ಲಾಹೋರ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟಿನ ದೃಷ್ಟಿಯಿಂದ ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಮಾಡಿಕೊಂಡಿರುವ ವ್ಯವಸ್ಥೆಗಳಿಂದ ಇಮ್ರಾನ್ ಖಾನ್ ’ಅಂತರರಾಷ್ಟ್ರೀಯ ಭಿಕ್ಷುಕ’ ಆಗಿದ್ದಾರೆ. ಪಾಕಿಸ್ತಾನ ಸರಕಾರ ತೈಲ ಬೆಲೆಯನ್ನು ಮತ್ತೆ ಏರಿಸಿದೆ ಮತ್ತು ದೇಶದ ಜನತೆಯು ಅಧಿಕ ಹಣದುಬ್ಬರದಿಂದ ಬಳಲುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಇಮ್ರಾನ್ ಖಾನ್ (ಸರಕಾರ) ನಿರ್ಗಮನವೊಂದೇ ಪರಿಹಾರ ಎಂದು ‘ಜಮಾತ-ಎ-ಇಸ್ಲಾಮಿ ಪಕ್ಷದ ಮುಖ್ಯಸ್ಥ ಸಿರಾಜುಲ್ ಹಕ್ ಹೇಳಿದ್ದಾರೆ. ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಚುನಾವಣೆಯ ಸಿದ್ಧತೆಯ ಬಗ್ಗೆ ಲಾಹೋರ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಅವರು ಈ ಟೀಕೆಗಳನ್ನು ಮಾಡಿದರು.

ಪಾಕಿಸ್ತಾನದ ಆರ್ಥಿಕತೆಯ ಬಿಕ್ಕಟ್ಟಿನಲ್ಲಿದ್ದು ಪಾಕಿಸ್ತಾನದ ದಿವಾಳಿತನವು ಜಗತ್ತಿಗೆ ತಿಳಿದಿದೆ. ಅಲ್ಲಿ ಹಣದುಬ್ಬರವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ, ಇದು ಮೂಲಭೂತ ಅಗತ್ಯಗಳ ಬೆಲೆಗಳು ಹೆಚ್ಚಾಗಿದೆ. ವ್ಯಾಪಾರದಲ್ಲಿಯೂ ಹಿನ್ನಡೆಯಾಗಿದೆ ಎಂದು ಹೇಳಿದರು.