ದೆಹಲಿಯಲ್ಲಿ ಕೊರೊನಾಗೆ ಬಲಿಯಾಗಿರುವ ಜನರಲ್ಲಿ ಶೇ. ೭೫ ರಷ್ಟು ಜನರು ಲಸಿಕೆ ತೆಗೆದುಕೊಂಡಿರಲಿಲ್ಲ !

ದೆಹಲಿ – ದೇಶದಲ್ಲಿ ಕೊರೋನಾ ಸೋಂಕಿನ ರೋಗಿಗಳ ಸಂಖ್ಯೆ ದಿನೇ ದಿನೇ ವೇಗವಾಗಿ ಹೆಚ್ಚುತ್ತಿದೆ. ಕಳೆದ ೨೪ ಗಂಟೆಯಲ್ಲಿ ದೇಶದ ೨ ಲಕ್ಷ ೬೪ ಸಾವಿರಗಿಂತಲೂ ಹೆಚ್ಚಿನ ಜನರಿಗೆ ಕೊರೋನಾದ ಸೋಂಕು ತಗಲಿದೆ. ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣವು ಈಗ ಶೇ. ೧೪.೭೮ ಗಿಂತಲೂ ಹೆಚ್ಚಾಗಿದೆ. ದೆಹಲಿಯ ಇತ್ತೀಚೆಗೆ ಕೊರೋನಾದಿಂದ ಸಾವನ್ನಪ್ಪಿರುವ ಶೇ. ೭೫ ರೋಗಿಗಳು ಕೊರೋನಾದ ತಡೆಗಟ್ಟುವಿಕೆಯ ಲಸಿಕೆ ತೆಗೆದುಕೊಳ್ಳದಿರುವುದು ಬೆಳಕಿಗೆ ಬಂದಿದೆ.

ದೇಶದ ೧೫ ರಿಂದ ೧೮ ವರ್ಷದ ವಯಸ್ಸಿನ ಮಕ್ಕಳಿಗೆ ಹಮ್ಮಿಕೊಳ್ಳಲಾಗಿರುವ ಲಸಿಕೆ ಅಭಿಯಾನದಲ್ಲಿ ಯಶಸ್ಸು ಸಿಗುತ್ತಿದೆ. ಜನವರಿ ೩ ರಿಂದ ಈ ಲಸಿಕೆ ಆರಂಭವಾಗಿದ್ದೂ ೧೧ ದಿನದಲ್ಲಿ ಶೇ. ೪೨ ರಷ್ಟು ಅಂದರೆ ೩ ಕೋಟಿ ೧೪ ಲಕ್ಷ ಮಕ್ಕಳಿಗೆ ಕೊರೋನಾ ತಡೆಗಟ್ಟುವಿಕೆ ಲಸಿಕೆಯ ಮೊದಲನೇ ಡೋಸ್ ನೀಡಲಾಗಿದೆ. ಜನವರಿ ತಿಂಗಳಲ್ಲಿ ಶೇ. ೮೦ ರಿಂದ ೮೫ ರಷ್ಟು ಮಕ್ಕಳಿಗೆ ಲಸಿಕೆಯ ಮೊದಲನೇ ಡೋಸ್ ನೀಡುವ ಕೇಂದ್ರ ಸರಕಾರದ ಶ್ಯೇಯವಾಗಿದೆ.

ಅಮೇರಿಕಾದಲ್ಲಿ ಕೊರೋನಾದಿಂದ ಹಾಹಾಕಾರ : ಸೈನ್ಯ ಸಹಾಯಕ್ಕಾಗಿ ಕರೆ !


ಕೊರೋನಾ ಪೀಡಿತರ ಹೆಚ್ಚುತ್ತಿರುವ ಸಂಖ್ಯೆಯಿಂದ ಅಮೇರಿಕಾದ ಅನೇಕ ರಾಜ್ಯಗಳಲ್ಲಿ ವೈದ್ಯಕೀಯ ಸೌಕರ್ಯಗಳು ಸಂಪೂರ್ಣವಾಗಿ ಏರುಪೇರಾಗಿದೆ. ಜನವರಿ ೧೩ ರಂದು ೧ ಲಕ್ಷ ೪೨ ಸಾವಿರಕ್ಕಿಂತಲೂ ಹೆಚ್ಚಿನ ರೋಗಿಗಳು ಸಿಕ್ಕಿದ್ದಾರೆ. ಕೊರೋನದ ಅನಿಶ್ಚಿತ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರಾಧ್ಯಕ್ಷ ಜೋ ಬಾಯಡೆನ ಇವರು ಮಿಷಿಗನ್, ನ್ಯೂ ಜರ್ಸಿ, ನ್ಯೂ ಮೆಕ್ಸಿಕೋ, ನ್ಯೂಯಾರ್ಕ್, ಓಹಾಯೋ ಮತ್ತು ರಾಡ ಐಲ್ಯಾಂಡ್ ಇಲ್ಲಿಯ ಆಸ್ಪತ್ರೆಗಳಲ್ಲಿ ಸಹಾಯಕ್ಕಾಗಿ ಸೈನ್ಯವನ್ನು ಕಳಿಸಿದ್ದಾರೆ.