ಕುಟುಂಬದ ಮೇಲಿನ ಬಲಾತ್ಕಾರದ ಆರೋಪವನ್ನು ಹಿಂಪಡೆಯಲು ಬ್ರಿಟನ್‌ನಲ್ಲಿ ಅಹಮದಿಯಾ ಧರ್ಮ ಗುರುವಿನಿಂದ ಪೀಡಿತೆ ಮಹಿಳೆಯ ಮೇಲೆ ಒತ್ತಡ !

ಆರೋಪಿಗಳನನ್ನು ಬೆಂಬಲಿಸುವವರ ಬಗ್ಗೆ ಜಗತ್ತಿನ ಎಲ್ಲಾ ಮುಸಲ್ಮಾನರು ಏಕೆ ಮೌನ ?

ಲಂಡನ – ಬಲಾತ್ಕಾರ ಪೀಡಿತೆ ಮಹಿಳೆಯು ತನ್ನ ತಂದೆ ಹಾಗೂ ಇತರ ಮೂವರ ವಿರುದ್ಧ ನೀಡಿರುವ ಬಲಾತ್ಕಾರದ ದೂರು ಹಿಂಪಡೆಯಬೇಕು ಹಾಗೂ ಈ ಬಗ್ಗೆ ಪೊಲೀಸರಲ್ಲಿ ದೂರನ್ನು ನೀಡಬಾರದು, ಅದಕ್ಕಾಗಿ ಇಲ್ಲಿಯ ಆಹಮದಿಯಾ ಧರ್ಮಗುರು ಮಿರ್ಜಾ ಮಸರುರನು ಪೀಡಿತ ಮಹಿಳೆಯ ಮೇಲೆ ಒತ್ತಡ ತರುತ್ತಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಮಸರೂರನು ವಾದದ ಸುಳಿಗೆ ಸಿಲುಕಿದ್ದಾನೆ. ಪೀಡಿತ ಮಹಿಳೆಯು ಮಸರುರ ಜೊತೆ ಸಂಚಾರ ವಾಣಿಯ ಮೂಲಕ ನಡೆದಿರುವ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ನಂತರ ಇದು ಬೆಳಕಿಗೆ ಬಂದಿರುವ ಮಾಹಿತಿ ಬ್ರಿಟನ್ನಿನ ‘ಡೈಲಿ ಮೇಲ್’ ನೀಡಿದೆ. ಬ್ರಿಟನ್ನಿನಲ್ಲಿ ಅಹಮದಿಯಾ ಸಂಪ್ರದಾಯದ ೩೦ ಸಾವಿರ ಅನುಯಾಯಿಗಳು ಇದ್ದಾರೆ.