ಭಾಜಪ ಕಾರ್ಯಕರ್ತರಿಗೆ ಗಾಯವಾಹನಗಳಿಗೆ ಹಾನಿಪೊಲೀಸರಿಂದ ಗಾಳಿಯಲ್ಲಿ ಗುಂಡು |
* ಆಂಧ್ರಪ್ರದೇಶದಲ್ಲಿ ವೈ.ಎಸ್.ಆರ್. ಪಕ್ಷದ ಸರಕಾರವಿದೆಯೇ ಅಥವಾ ಮತಾಂಧರದ್ದು ? ಪೊಲೀಸ್ ಠಾಣೆಯಲ್ಲಿಯೇ ಮತಾಂಧರು ಜನರ ಮೇಲೆ ದಾಳಿ ಮಾಡುತ್ತಿದ್ದರೆ ಜನಸಾಮಾನ್ಯರನ್ನು ಯಾರು ರಕ್ಷಿಸುವರು ? ಇಂತಹ ಪೊಲೀಸ ದಳ ಏನು ಪ್ರಯೋಜನ ?- ಸಂಪಾದಕರು * ಕೇಂದ್ರದಲ್ಲಿನ ಭಾಜಪ ಸರಕಾರವು ಈ ಘಟನೆಯನ್ನು ಗಮನಿಸಿ ಈ ವಿಷಯದ ಬಗ್ಗೆ ಜಗನಮೋಹನ ರೆಡ್ಡಿ ಸರಕಾರವನ್ನು ವಿಚಾರಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು * ಅಕ್ರಮ ಮಸೀದಿಗಳನ್ನು ನಿರ್ಮಿಸುವ ಮತಾಂಧರ ಮೇಲೆ ಕ್ರಮ ಕೈಗೊಳ್ಳದ ಆಡಳಿತ ಮತ್ತು ಪೊಲೀಸರ ಮೇಲೆಯೂ ಕ್ರಮಕೈಗೊಳ್ಳಬೇಕು ! -ಸಂಪಾದಕರು |
ಕುರ್ನೂಲ (ಆಂಧ್ರಪ್ರದೇಶ) – ಆತ್ಮಕೂರ ನಗರದಲ್ಲಿ ಪದ್ಮಾವತಿ ಶಾಲೆಯ ಹಿಂದಿರುವ ಅಕ್ರಮ ಮಸೀದಿಯನ್ನು ವಿರೋಧಿಸಿದ್ದರಿಂದ ಮತಾಂಧರ ಗುಂಪೊಂದು ಪೊಲೀಸ್ ಠಾಣೆಯನ್ನು ಸುತ್ತುವರಿಯಿತು ಮತ್ತು ಭಾಜಪದ ಕಾರ್ಯಕರ್ತರ ಮೇಲೆ ದಾಳಿ ನಡೆಸಿತು. ಮತಾಂಧರು ಈ ಸಮಯದಲ್ಲಿ ವಾಹನಗಳಿಗೆ ಹಾನಿ ಮಾಡುತ್ತಾ ಕಲ್ಲುತೂರಾಟ ನಡೆಸಿದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ತರಲು ಗಾಳಿಯಲ್ಲಿ ಗುಂಡು ಹಾರಿಸಿದರು. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನೇಮಿಸಲಾಗಿದೆ. ಇಲ್ಲಿ ಒತ್ತಡದ ವಾತಾವರಣವಿದೆ. ಈ ದಾಳಿಯಲ್ಲಿ ಭಾಜಪದ ಕೆಲವು ನಾಯಕರು ಗಾಯಗೊಂಡಿದ್ದಾರೆ. ಈ ಘಟನೆಯ ಸಮಯದಲ್ಲಿ ಭಾಜಪದ ಜಿಲ್ಲಾಧ್ಯಕ್ಷರಾದ ಶ್ರೀಕಾಂತ ರೆಡ್ಡಿಯವರ ಹತ್ಯೆಗಾಗಿ ಪ್ರಯತ್ನಿಸಲಾಗಿರುವ ಬಗ್ಗೆ ಭಾಜಪವು ಆರೋಪಿಸಿದೆ. ಈ ಸಮಯದಲ್ಲಿ ರೆಡ್ಡಿಯವರ ವಾಹನಕ್ಕೆ ಹಾನಿ ಮಾಡಲಾಗಿದೆ.
Andhra Pradesh: Islamists attack police and BJP workers after opposition to illegal construction of mosque in Kurnoolhttps://t.co/gwZvZxftBC
— OpIndia.com (@OpIndia_com) January 9, 2022
1. ಭಾಜಪದ ರಾಜ್ಯದ ಪ್ರಧಾನ ಕಾರ್ಯದರ್ಶಿಯಾದ ವಿಷ್ಣುವರ್ಧನ ರೆಡ್ಡಿಯವರು ಮಾಹಿತಿ ನೀಡುವಾಗ, ಆತ್ಮಕೂರ ನಗರದಲ್ಲಿನ ಅಕ್ರಮ ಕಟ್ಟಡ ಕಾಮಗಾರಿಯ ಬಗ್ಗೆ ಭಾಜಪದ ನೇತಾರರು ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ ಅವರ ಸರಕಾರಕ್ಕೆ ಪ್ರಶ್ನಿಸಿತ್ತು. ಈ ಬಗ್ಗೆ ಕಾರ್ಯಕರ್ತರು ಸರಕಾರದ ಬಳಿ ಹೋಗಿ ವಿರೋಧ ವ್ಯಕ್ತಪಡಿಸಿದರು, ಆಗ ಮತಾಂಧರು ಪೊಲೀಸರ ಸಮ್ಮುಖದಲ್ಲಿ ಭಾಜಪದ ಕಾರ್ಯಕರ್ತರ ಮೇಲೆ ದಾಳಿ ನಡೆಸಿದರು. ಅವರ ವಾಹನಗಳಿಗೆ ಹಾನಿ ಮಾಡಲಾಯಿತು. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಹಾಗೂ ದುರ್ದೈವವಾಗಿದೆ. ಭಾಜಪವು ಈ ಘಟನೆಯನ್ನು ನಿಷೇಧಿಸುತ್ತದೆ.’ ಎಂದು ಹೇಳಿದರು.
2. ಈ ವಿಷಯದಲ್ಲಿ ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕರು, ‘ಕರ್ನೂಲಿನಲ್ಲಿ ಅನೇಕ ಜನರು ಹಿಂಸೆಯನ್ನು ಉದ್ರೇಕಿಸಲು ಇಚ್ಚಿಸುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಜನರನ್ನು ಉದ್ರೇಕಿಸುವವರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಪೊಲೀಸ ಅಧೀಕ್ಷಕರಿಗೆ ಆದೇಶ ನೀಡಲಾಗಿದೆ’ ಎಂದು ಹೇಳಿದರು.