ಹತನಾಗಿದ್ದ ಜಿಹಾದಿ ಭಯೋತ್ಪಾದಕನನ್ನು ಬೆಂಬಲಿಸುತ್ತಿದ್ದ ಕಾಶ್ಮೀರದ ಪತ್ರಕರ್ತನ ಬಂಧನ

ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಭಯೋತ್ಪಾದಕರೆಂದು ನಿರ್ಧರಿಸಿ ಅವರಿಗೆ ಗಲ್ಲು ಶಿಕ್ಷೆ ಆಗಬೇಕು !- ಸಂಪಾದಕರು 

ಪತ್ರಕರ್ತ ಸಜ್ಜಾದ್ ಅಹಮದಾ ಡಾರ

ಶ್ರೀನಗರ (ಜಮ್ಮು-ಕಾಶ್ಮೀರ) – ಲಷ್ಕರ್-ಎ-ತೊಯಬಾದ ಭಯೋತ್ಪಾದಕ ಸಲೀಂ ಪೈರಿನನ್ನು ಒಂದು ಚಕಮಕಿಯಲ್ಲಿ ಹತ್ಯೆ ಮಾಡಿದ ನಂತರ ಸಲೀಂನನ್ನು ಬೆಂಬಲಿಸುವ ಒಂದು ವಿಡಿಯೋ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಜ್ಜಾದ್ ಅಹಮದಾ ಡಾರ ಈ ಪತ್ರಕರ್ತನಿಗೆ ಬಾಂದಿಪೊರಾ ಜಿಲ್ಲೆಯಿಂದ ಬಂಧಿಸಿದ್ದಾರೆ. ಡಾರ ಈತ `ದಿ ಕಾಶ್ಮೀರವಾಲಾ’ ಈ ವೃತ್ತ ಜಾಲತಾಣಕ್ಕಾಗಿ ಕೆಲಸ ಮಾಡುತ್ತಿದ್ದ.

ಡಾರನು ತಯಾರಿಸಿದ ವಿಡಿಯೋದಲ್ಲಿ ಹತನಾಗಿದ್ದ ಭಯೋತ್ಪಾದಕನ ಸಂಬಂಧಿಕರು ಭಾರತದ ವಿರುದ್ಧ ಘೋಷಣೆ ಕೂಗುತ್ತಿರುವುದು ಕಾಣುತ್ತದೆ. ಇದರಲ್ಲಿ ಪಾಕಿಸ್ತಾನದ ಹಾಗೂ ಭಯೋತ್ಪಾದಕ ಜಾಕಿರ್ ಮೂಸಾನನ್ನು ಬೆಂಬಲಿಸುತ್ತಿರುವುದು ತೋರಿಸಲಾಗಿದೆ.