ಬೂಸ್ಟರ್ ಡೋಸಗಾಗಿ ಹೊಸದಾಗಿ ನೋಂದಣಿ ಮಾಡುವ ಅವಶ್ಯಕತೆ ಇಲ್ಲ ! – ಕೇಂದ್ರ ಸರಕಾರ

ನವ ದೆಹಲಿ – ಕೇಂದ್ರ ಸರಕಾರವು ಮಾಡಿರುವ ಘೋಷಣೆಯಂತೆ ದೇಶಾದ್ಯಂತ ಜನವರಿ 8 ರಿಂದ ಕೊರೋನಾ ತಡೆಗಟ್ಟುವಿಕೆಯ ಲಸಿಕೆಯ ಬೂಸ್ಟರ್ ಡೋಸ್ ನೀಡಲಾಗುವುದು. ಇದಕ್ಕಾಗಿ `ಕೊವಿನ’ ಈ ಆ್ಯಪ್‍ನಲ್ಲಿ ಹೊಸದಾಗಿ ನೋಂದಣಿ ಮಾಡುವ ಅವಶ್ಯಕತೆ ಇಲ್ಲ. ಲಸಿಕೆಯ ಎರಡು ಡೋಸ್ ತೆಗೆದುಕೊಂಡಿರುವ ನಾಗರಿಕರು ಯಾವುದೇ ಲಸಿಕೆ ಕೇಂದ್ರಕ್ಕೆ ಹೋಗಿ ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದು.