ಹಬೀಬನು ಮಹಿಳೆಯ ತಲೆಯ ಮೇಲೆ ಉಗೂಳಿ ಅವಮಾನ ಮಾಡಿದ ಪ್ರಕರಣ
ಮುಂಬಯಿ – ಕೇಶ ವಿನ್ಯಾಸಕಾರ ಜಾವೇದ ಹಬೀಬನು ಒಂದು ಕಾರ್ಯಕ್ರಮದ ವ್ಯಾಸಪೀಠದ ಮೇಲೆ ಓರ್ವ ಮಹಿಳೆಯ ಕೂದಲಿನಲ್ಲಿ ಉಗಳಿದ, ಈ ಬಗ್ಗೆ ಟೀಕಾಪ್ರಹಾರ ಹೆಚ್ಚಾದ ನಂತರ ಜಾವೇದ ಹಬೀಬ ಕ್ಷಮೆ ಯಾಚಿಸಿದನು; ಆದರೆ ಕೇವಲ ಕ್ಷಮೆ ಕೇಳಿದರೆ ಸಾಕಾಗುವುದಿಲ್ಲ, ಇಂತಹ ವ್ಯಕ್ತಿಯ ವಿರುದ್ಧ ದೂರು ದಾಖಲಿಸಬೇಕು. ಮತ್ತು ಜಾವೇದ ಹಬಿಬನು ಮಹಿಳೆಯ ತಲೆಯ ಮೇಲೆ ಉಗುಳಿ ಅವಮಾನ ಮಾಡಿರುವುದರಿಂದ ರಾಷ್ಟ್ರೀಯ ಮಹಿಳಾ ಆಯೋಗವು ಹಸ್ತಕ್ಷೇಪ ಮಾಡಿ ಆತನ ಮೇಲೆ ಕ್ರಮ ಕೈಗೊಳ್ಳಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತಿಸಗಡ್ ರಾಜ್ಯ ಸಂಘಟಕ ಶ್ರೀ. ಸುನಿಲ ಘನವಟ ಇವರು ಒಂದು ವಿಡಿಯೋ ಮೂಲಕ ಒತ್ತಾಯಿಸಿದ್ದಾರೆ.
ಶ್ರೀ. ಘನವಟ ತಮ್ಮ ಮಾತನ್ನು ಮುಂದುವರೆಸುತ್ತಾ, “ಜಾವೇದ್ ಹಬೀಬನ ಕೇಶ ವಿನ್ಯಾಸದ ಎಲ್ಲ ಕಂಪನಿಗಳಲ್ಲಿ ಈ ರೀತಿಯ ಉಗುಳುವ ಪ್ರಕಾರ ನಡೆಯುತ್ತಿದೆಯೇ ?, ಎಂಬುದರ ತನಿಖೆ ಆಗುವುದು ಅವಶ್ಯಕವಾಗಿದೆ. ಈ ಮೊದಲು ಮತಾಂಧರು ಊಟ, ಹಣ್ಣುಗಳು ಇದರ ಮೇಲೆ ಉಗುಳುವ ದೃಶ್ಯಗಳು ಬೆಳಕಿಗೆ ಬಂದಿದೆ. ಆದ್ದರಿಂದ ಸರಕಾರ ಇದು `ಉಗುಳು ಜಿಹಾದ’ ಆಗಿದೆಯೇ ? ಈ ಬಗ್ಗೆಯೂ ತನಿಖೆ ನಡೆಸಬೇಕು.