ಕ್ಷೌರಿಕ ಜಾವೇದ್ ಹಬಿಬ ಕೇಶ ವಿನ್ಯಾಸ ಮಾಡಿಸಿ ಬಂದ ಮಹಿಳೆಯ ತಲೆಯ ಮೇಲೆ ಉಗಳಿದ !

ಭಾರತದ ಅಲ್ಲಲ್ಲಿ ಮತಾಂಧರಿಂದ ತಂದೂರಿ ರೋಟಿ ಮಾಡುವಾಗ ಅದರ ಮೇಲೆ ಉಗುಳುವುದು ಬೆಳಕಿಗೆ ಬಂದಿತ್ತು ! ಮತಾಂಧರ ಈ ವಿಕೃತ ಮಾನಸಿಕತೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ಕಾನೂನಿನ ಮಾರ್ಗದಿಂದ ವಿರೋಧಿಸಬೇಕು !

ಮುಜಾಫರನಗರ (ಉತ್ತರಪ್ರದೇಶ) – ಇಲ್ಲಿ ಪ್ರಸಿದ್ಧ ಕೇಶ ವಿನ್ಯಾಸಕ (ಹೇರ್ ಸ್ಟೈಲಿಸ್ಟ್) ಜಾವೇದ್ ಹಬೀಬ್ ಇವನ ಕಾರ್ಯಾಗಾಋವನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಓರ್ವ ಮಹಿಳೆಯ ತಲೆಯ ಮೇಲೆ ಉಗುಳಿದ್ದರಿಂದ ವಿವಾದ ನಿರ್ಮಾಣವಾಯಿತು. ಜನವರಿ ೩ ರಂದು ನಡೆದ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ಬಗ್ಗೆ ಹಬಿಬನಿಂದ ಯಾವುದೇ ಸ್ಪಷ್ಟೀಕರಣ ಬಂದಿಲ್ಲ.

೧. ‘ಕೂದಲನ್ನು ಹೇಗೆ ಸರಿ ಮಾಡಬೇಕು’ ಇದರ ಪ್ರಾತ್ಯಕ್ಷಿಕೆಯನ್ನು ತೋರಿಸುವಾಗ ಹಬಿಬನು ಬಾಗಪತ ಇಲ್ಲಿಯ ಬಡೌತನಲ್ಲಿ ವಾಸವಾಗಿರುವ ಓರ್ವ ಮಹಿಳೆಯ ತಲೆ ಹಿಡಿದು ಮತ್ತು ಜೋರಾಗಿ ಅಲುಗಾಡಿಸಿದ ಆಕೆಯ ತಲೆ ಮೇಲೆ ಉಗುಳಿದ ನಂತರ ಕೂದಲನ್ನು ಕತ್ತರಿಸಿದನು. ಈ ಘಟನೆಯಿಂದ ನೊಂದ ಮಹಿಳೆಯು ಮಾತನಾಡಿ, ‘ನನ್ನ ಹೆಸರು ಪೂಜಾ ಗುಪ್ತಾ ಮತ್ತು ನನ್ನದು ‘ವಂಶಿಕಾ ಬ್ಯೂಟಿ ಪಾರ್ಲರ್’ ಇದೆ. ನಾನು ಜಾವೇದ್ ಹಬೀಬ್ ಇವನ ಕಾರ್ಯಾಗಾರಕ್ಕೆ ಹೋಗಿದ್ದೆ. ಅವನು ನನಗೆ ಕೂದಲು ಕತ್ತರಿಸುವುದಕ್ಕೆ ಸ್ಟೇಜ್ ಮೇಲೆ ಕರೆದನು. ಅವನು ನನ್ನ ಜೊತೆ ತುಂಬಾ ಕೆಟ್ಟದಾಗಿ ವರ್ತಿಸಿದನು, ನನಗೆ ತುಂಬಾ ದುಃಖವಾಯಿತು, ‘ನಿಮ್ಮ ಹತ್ತಿರ ನೀರು ಇರದಿದ್ದರೆ, ನೀವು ಸ್ವಂತ ಉಗುಳಿನಿಂದ ಕೂದಲನ್ನು ಕತ್ತರಿಸಬಹುದು’, ಎಂಬುದನ್ನು ಅವನು ತೋರಿಸಿದನು ಎಂದು ಹೇಳಿದಳು, ಅವನ ಈ ವರ್ತನೆಯಿಂದ ನಾನು, ನಾನು ರಸ್ತೆಯ ಬದಿಯಲ್ಲಿರುವ ಕ್ಷೌರಿಕನಿಂದ ಕೂದಲನ್ನು ಕತ್ತರಿಸಿಕೊಳ್ಳುವೆ, ಆದರೆ ಜಾವೇದ್ ಹಬೀಬ್‌ನಿಂದ ಕೂದಲನ್ನು ಕತ್ತರಿಸಿ ಕೊಳ್ಳುವುದಿಲ್ಲ ಎಂದು ನಿರ್ಧರಿಸಿದೆ.

೨. ಜಾವೇದ್ ಹಬೀಬ್ ಇವನು ಮಹಿಳೆಯರ ಕೂದಲ ಮೇಲೆ ಉಗುಳುವಾಗ ‘ಈ ಉಗುಳಿನಲ್ಲಿ ಶಕ್ತಿ ಇದೆ !’ ಎಂದು ಹೇಳಿದ. ಹಬಿಬನು, ‘ಈಕೆಯ ಕೂದಲು ಸರಿಯಿಲ್ಲದ ಕಾರಣ, ಆಕೆ ಶಾಂಪು ಹಾಕಿಲ್ಲ, ಕೂದಲಿಗೆ ನೀರಿನ ಕೊರತೆ ಇದ್ದರೆ ಉಗುಳಿನಿಂದ ಕೆಲಸ ಮಾಡಿ ಎಂದು ಹೇಳಿದ.