‘ವೀರ ಸಾವರಕರ – ದ ಮೆನ್ ಹು ಕುಡ್ ಹೆವ್ ಪ್ರಿವೆಂಟೆಡ್ ಪಾರ್ಟಿಶನ್’ ಎಂಬ ಪುಸ್ತಕ 9 ಜನವರಿಯಂದು ಗೋವಾದಲ್ಲಿ ಪ್ರಕಾಶನ !

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ (ಮಧ್ಯದಲ್ಲಿ) ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ್ ಶಿಂದೆ, ಎಡದಿಂದ ಶ್ರೀ. ಗೋವಿಂದ ಚೊಡಣಕರ ಮತ್ತು ಶ್ರೀ. ಪ್ರಶಾಂತ ವಾಳಕೆ.

ಭಾರತೀಯ ಇತಿಹಾಸದಲ್ಲಿ ವೀರ ಸಾವರಕರ ಮತ್ತು ಅವರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಸಹಭಾಗವು ಅವಿಸ್ಮರಣೀಯವಾಗಿದೆ. ಅಂಡಮಾನನ ಕತ್ತಲೆ ಕೋಣೆಯ ಹಿಂಸೆ-ಯಾತನೆಯನ್ನು ಸಹಿಸಿ ಮಾತೃಭೂಮಿಗಾಗಿ ಕಾರ್ಯ ಮಾಡಿದಂತಹ ವೀರ ಸಾವರಕರರ ಅದೃಷ್ಟದಲ್ಲಿ ಮಾತ್ರ ಉಪೇಕ್ಷೆಯೇ ಸಿಕ್ಕಿತು. ಇಂದಿಗೂ ನಕಲೀ ಮಾಹಿತಿಯ ಆಧಾರದಲ್ಲಿ ಅಪಪ್ರಚಾರ ಮಾಡಿ ಅವರನ್ನು ಅಪಮಾನಿಸಲು ಪ್ರಯತ್ನಿಸಲಾಗುತ್ತಿದೆ. ಅದನ್ನು ತಡೆಗಟ್ಟಲು ಆ ಮಾಹಿತಿಗಳಿಗೆ ಐತಿಹಾಸಿಕ ಪುರಾವೆಗಳ ಸಹಿತ ಯೋಗ್ಯ ಪ್ರತ್ಯುತ್ತರ ನೀಡುವುದು ಅವಶ್ಯಕವಾಗಿತ್ತು, ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ದೂರಗೊಳಿಸಿ ಸಾವರಕರರಿಗೆ ಲಭಿಸಿದ ದೂರದೃಷ್ಟಿಯ ಲಾಭವನ್ನು ಪಡೆದುಕೊಂಡಿದ್ದೇ ಆದರೆ ಭಾರತದ ವಿಭಜನೆಯನ್ನು ತಡೆಗಟ್ಟಬಹುದಾಗಿತ್ತು. ಈ ದೃಷ್ಟಿಯಿಂದ ಸಂಶೋಧನೆಯನ್ನು ಮಾಡಿ ಕೇಂದ್ರೀಯ ಮಾಹಿತಿ ಆಯುಕ್ತರು ಮತ್ತು ಪ್ರಖ್ಯಾತ ಲೇಖಕ ಶ್ರೀ. ಉದಯ ಮಾಹುರಕರ ಮತ್ತು ಸಹ ಲೇಖಕ ಚಿರಾಯು ಪಂಡಿತ ಇವರು ಐತಿಹಾಸಿಕ ಪುರಾವೆಗಳ ಸಹಿತ ಸಾವರಕರರ ಜೀವನದ ಮೇಲೆ ಹೊಸ ಪ್ರಕಾಶವನ್ನು ಬೀರುವ ‘ವೀರ ಸಾವರಕರ – ದ ಮೆನ್ ಹು ಕುಡ್ ಹೆವ್ ಪ್ರಿವೆಂಟೆಡ್ ಪಾರ್ಟಿಶನ್’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕವು ರವಿವಾರ 9 ಜನವರಿ 2022ರಂದು ಗೋವಾದಲ್ಲಿ ಪ್ರಕಾಶವಾಗಲಿದೆ ಎಂಬ ಮಾಹಿತಿಯನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಪಣಜಿಯಲ್ಲಿ ಒಂದು ಪತ್ರಕರ್ತ ಪರಿಷತ್ತಿನಲ್ಲಿ ನೀಡಿದರು. ಈ ಪತ್ರಕರ್ತ ಪರಿಷತ್ತಿಗೆ ಗೋವಾದ ಸ್ವರಾಜ್ಯ ಸಂಘಟನೆಯ ಅಧ್ಯಕ್ಷ ಶ್ರೀ. ಪ್ರಶಾಂತ ವಾಳಕೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗೋವಿಂದ ಚೊಡಣಕರ ಇವರೂ ಉಪಸ್ಥಿತರಿದ್ದರು.

ಶ್ರೀ. ರಮೇಶ ಶಿಂದೆಯವರು ಮಾತನಾಡುತ್ತಾ, ‘ಈ ಪ್ರಕಾಶನ ಮಹೋತ್ಸವಕ್ಕೆ ಲೇಖಕರು ಮತ್ತು ಕೇಂದ್ರಿಯ ಮಾಹಿತಿ ಆಯುಕ್ತರಾದ ಶ್ರೀ. ಉದಯ ಮಾಹುರಕರ, ತಪೋಭೂಮಿ, ಕುಂಡೈಯ ಪ. ಪೂ. ಬ್ರಹ್ಮೇಶಾನಂದ ಸ್ವಾಮಿ, ಮುಖ್ಯ ಅತಿಥಿಯಾಗಿ ಮುಂಬೈಯ ಸ್ವಾ. ಸಾವರಕರ ರಾಷ್ಟ್ರೀಯ ಸ್ಮಾರಕದ ಅಧ್ಯಕ್ಷರಾದ ಶ್ರೀ. ಪ್ರವೀಣ ದೀಕ್ಷಿತ (ನಿವೃತ್ತ ಪೊಲೀಸ್ ಮಹಾಸಂಚಾಲಕ, ಮಹಾರಾಷ್ಟ್ರ) ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಉಪಸ್ಥಿತರಿರುವರು. ಗೋಮಾಂತಕದ ಸಾವರಕರ ಪ್ರೇಮಿಗಳು ಮತ್ತು ರಾಷ್ಟ್ರಭಕ್ತ ನಾಗರಿಕರು ಈ ಪುಸ್ತಕ ಪ್ರಕಾಶನ ಕಾರ್ಯಕ್ರಮಕ್ಕೆ ಅವಶ್ಯವಾಗಿ ಉಪಸ್ಥಿತರಿರಬೇಕು ಎಂದು ವಿನಂತಿಸುತ್ತಿದ್ದೇನೆ’ ಎಂದರು.

ಪತ್ರಕರ್ತ ಪರಿಷತ್ತಿನಲ್ಲಿ ‘ಸ್ವರಾಜ್ಯ ಸಂಘಟನೆಯ’ ಅಧ್ಯಕ್ಷ ಶ್ರೀ. ಪ್ರಶಾಂತ ವಾಳಕೆ ಇವರು ಕೇಂದ್ರಿಯ ಮಾಹಿತಿ ಆಯುಕ್ತರು ಮತ್ತು ಲೇಖಕ ಶ್ರೀ. ಉದಯ ಮಾಹುರಕರ ಇವರ ಕಾರ್ಯದ ವಿಷಯದಲ್ಲಿ ಮಾಹಿತಿಯನ್ನು ನೀಡಿದರು.

ನಮ್ರ ಸೂಚನೆ : ಕಾರ್ಯಕ್ರಮದ ಸ್ಥಳದಲ್ಲಿ ಕೊವಿಡ್ ಸಂದರ್ಭದ ಕಾಳಜಿಯನ್ನು ತೆಗೆದುಕೊಳ್ಳುವ ದೃಷ್ಟಿಯಿಂದ ಸರಕಾರವು ಘೋಷಿಸಿದ ಎಲ್ಲ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಕಾರ್ಯಕ್ರಮದ ಸ್ಥಳ : ಗೋವಾ, ವಿದ್ಯಾಪೀಠ, ‘ಕೆಮಿಕಲ್ ಸಾಯನ್ಸ್’ ನ ಸಭಾಗೃಹ, ತಾಲಿಗಾವ, ಗೋವಾ.
ದಿನಾಂಕ : ರವಿವಾರ, 9 ಜನವರಿ, 2022
ಸಮಯ : ಮಧ್ಯಾಹ್ನ 4.30ಕ್ಕೆ