ಭಾರತದಲ್ಲಿ ಕೋರೊನಾದ ಮೂರನೇ ಅಲೆಯ ಸಾಧ್ಯತೆ ಅತ್ಯಲ್ಪ ! – ಡಾ. ರವಿ ಗೋಡಸೆ, ಅಮೇರಿಕಾ

ನವ ದೆಹಲಿ – ಭಾರತದಲ್ಲಿ ಕೊರೋನಾದ ಮೂರನೆಯ ಅಲೆ ಬರುವ ಸಾಧ್ಯತೆ ಅತ್ಯಂತ ಕಡಿಮೆ ಇದೆ; ಏಕೆಂದರೆ ಕೊರೋನಾ ಅಥವಾ ‘ಒಮಿಕ್ರೋನ್’ ಇದರ ಸೋಂಕಾಗಿರುವವರ ಸಂಖ್ಯೆ ಹೆಚ್ಚಾಗಿದ್ದರೂ ಆಸ್ಪತ್ರೆಗೆ ದಾಖಲಾಗುವ ಜನರ ಸಂಖ್ಯೆ ಕಡಿಮೆ ಇದೆ. ದೇಶಾದಾದ್ಯಂತ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ಪ್ರಚಂಡವಾಗಿ ಹೆಚ್ಚಾಗುತ್ತದೆ, ಆಗ ‘ಕೊರೋನಾದ ಅಲೆ ಬಂತು’, ಎಂದು ಹೇಳಬಹುದು, ಎಂದು ಅಮೇರಿಕಾದ ಪ್ರಸಿದ್ಧ ಡಾಕ್ಟರ್ ರವಿ ಗೋಡಸೆ ಇವರು ಭರವಸೆ ನೀಡಿದರು. ಡಾ. ರವಿ ಗೊಡಸೆ ಇವರು, ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ಒಂದು ಟ್ವೀಟ್ ಮಾಡಿ ಮಾಹಿತಿ ನೀಡಿದರು.

(ಸೌಜನ್ಯ : लोकमत हिन्दी)

ಡಾ. ಗೋಡಸೆ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಹೆಚ್ಚಿನವರಿಗೆ ಕೋರೋನಾ ಅಥವಾ ‘ಒಮಿಕ್ರೋನ್’ ಸೋಂಕು ತಗಲಿದ್ದರೂ, ಅವರಿಗೆ ಅದರ ಲಕ್ಷಣಗಳು ಕಾಣುವುದಿಲ್ಲ. ಆದ್ದರಿಂದ ಯಾರಲ್ಲಿ ಲಕ್ಷಣಗಳಿಲ್ಲ, ಅವರು ಪರೀಕ್ಷಣೆ ಮಾಡಿಸಲೇಬಾರದು.

೨. ಭಾರತದಲ್ಲಿ ದೊಡ್ಡಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಆದರೂ ಲಸಿಕೆ ನೀಡುವ ಬಗ್ಗೆ ಇನ್ನು ಹೆಚ್ಚು ಒತ್ತು ನೀಡುವುದು ಅಗತ್ಯವಾಗಿದೆ. ಲಸಿಕೆಯ ಎರಡು ಡೋಸ್ ತೆಗೆದುಕೊಂಡಿರುವವರು ಒಮಿಕ್ರೋನ್‌ನಿಂದ ಗಂಭೀರವಾಗಿ ಅನಾರೋಗ್ಯವಾಗುವ ಸಾಧ್ಯತೆ ಶೇ. ೬೦ ಕಡಿಮೆ ಇರುತ್ತದೆ ಹಾಗೂ ಮೂರು ಡೋಸ್ ತೆಗೆದುಕೊಂಡವರಿಗೆ, ಶೇ. ೮೧ ಅಪಾಯ ಕಡಿಮೆ ಇರುತ್ತದೆ.