ಮಸೀದಿಯ ಇಮಾಮನ ಬೋಧನೆಯಿಂದ ಕ್ರೈಸ್ತ ಮತ್ತು ಜ್ಯೂ ಇವರನ್ನು ಗುರಿ ಮಾಡುತ್ತಿರುವುದರಿಂದ ಕ್ರಮ
ಭಾರತಕ್ಕಿಂತ ಚಿಕ್ಕದಾಗಿರುವ ಫ್ರಾನ್ಸ್ ಏನು ಮಾಡಬಲ್ಲದೋ ಅದನ್ನು ಭಾರತ ಏಕೆ ಮಾಡಲು ಸಾಧ್ಯವಿಲ್ಲ ?
ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್ ಸರಕಾರವು ಪ್ಯಾರಿಸಿನ ಉತ್ತರಕ್ಕೆ ಸರಿಸುಮಾರು ೧೦೦ ಕಿಲೋಮೀಟರ್ ದೂರದಲ್ಲಿರುವ ೫೦ ಸಾವಿರ ಜನಸಂಖ್ಯೆ ಇರುವ ಬೋವಯಿ ನಗರದ ಒಂದು ಮಸೀದಿಯನ್ನು ಮುಚ್ಚುವಂತೆ ಆದೇಶ ನೀಡಿದೆ. ‘ಜಗತ್ತಿನಾದ್ಯಂತ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ನೋಡುತ್ತಾ, ಈ ಮಸೀದಿಯನ್ನು ಮುಂದಿನ ಆರು ತಿಂಗಳಿಗೆ ಮುಚ್ಚುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಮಸೀದಿಯ ಇಮಾಮ್ (ಇಸ್ಲಾಮೀ ಧಾರ್ಮಿಕ ನಾಯಕ) ಮೂಲಭೂತವಾದಿ ವಿಚಾರಧಾರೆಯ ಪ್ರಚಾರ ಮಾಡುತ್ತಿದ್ದ, ಎಂದು ಸರಕಾರವು ಹೇಳಿದೆ. ಕೆಲವು ದಿನಗಳ ಹಿಂದೆ ಫ್ರಾನ್ಸ್ ಸರಕಾರವು ಇದೇ ಕಾರಣಕ್ಕಾಗಿ ಒಂದು ಮಸೀದಿಯನ್ನು ಆರು ತಿಂಗಳಿಗೆ ಮುಚ್ಚಿತ್ತು ಎಂದು ಹೇಳಿದೆ.
ಮಸೀದಿಯಲ್ಲಿ ಸರಿಸುಮಾರು ೪೦೦ ಜನರು ಇಮಾಮ್‌ನ ಅನುಯಾಯಿಗಳಿದ್ದಾರೆ. ಈ ಇಮಾಮ ಅವರ ವ್ಯಾಖ್ಯಾನದಲ್ಲಿ ಕ್ರೈಸ್ತ, ಸಲಿಂಗಕಾಮ ಮತ್ತು ಜ್ಯೂ ಇವರನ್ನು ಗುರಿಯಾಗಿಸುತ್ತಿದ್ದನು ಎಂದು ಫ್ರಾನ್ಸಿನ ಗೃಹ ಸಚಿವರು ಹೇಳಿದ್ದಾರೆ. ಈ ಇಮಾಮ್‌ನ ಮೇಲೆ ದ್ವೇಷ, ಹಿಂಸಾಚಾರ ಮತ್ತು ಜಿಹಾದ್ (ಇಸ್ಲಾಮಿನ ಶತ್ರುಗಳ ವಿರುದ್ಧ ಯುದ್ಧದ) ಬೋಧಿಸುತ್ತಿರುವ ಆರೋಪವಿದೆ.
फ्रांस की इमैनुएल मैक्रों सरकार ने उत्तरी हिस्से में स्थित एक मस्जिद को बंद करने का आदेश जारी किया है.#EmmanuelMacron #Mosque #Francehttps://t.co/fGGTEa9qu7
— ABP News (@ABPNews) December 29, 2021
೧. ಮಸೀದಿ ಮುಚ್ಚುವ ಅಧಿಕೃತ ಕಾಗದಪತ್ರಗಳಲ್ಲಿ, ಇಮಾಮನು ಜಿಹಾದನ್ನು ಒಂದು ‘ಕರ್ತವ್ಯ’ ಎಂದಿದ್ದಾನೆ ಮತ್ತು ಜಿಹಾದಿಗಳನ್ನು ಇಸ್ಲಾಮಿನ ‘ಹೀರೋ’ ಎಂದು ತೋರಿಸಿದ್ದಾನೆ ಹಾಗೂ ಇಮಾಮನು ಮುಸಲ್ಮಾನನೆತರರನ್ನು ಶತ್ರುವೆಂದು ಕರೆದಿದ್ದಾನೆ.
೨. ಕೆಲವು ದಿನಗಳ ಹಿಂದೆ ಫ್ರಾನ್ಸಿನ ಗೃಹ ಸಚಿವಾಲಯವು ದೇಶದಲ್ಲಿನ ೨ ಸಾವಿರದ ೬೦೦ ಕ್ಕೂ ಹೆಚ್ಚು ಮಸೀದಿ ಮತ್ತು ಮುಸಲ್ಮಾನರ ಪ್ರಾರ್ಥನಾಸ್ಥಳಗಳಲ್ಲಿ ೧೦೦ ಸ್ಥಳಗಳ ವಿಚಾರಣೆ ನಡೆಸುವ ಆದೇಶ ನೀಡಿತ್ತು. ಈ ಸ್ಥಳಗಳಿಂದ ಮೂಲಭೂತವಾದಿ ವಿಚಾರಧಾರೆ ಹರಡಿರುವ ಸಂಶಯ ಸರಕಾರಕ್ಕೆ ಇತ್ತು.