ಆಗ್ರಾ (ಉತ್ತರಪ್ರದೇಶ) ಇಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ `ಸಾಂತಾ ಕ್ಲಾಸ್’ನ ಪುತ್ತಳಿಯ ದಹನ !

ಆಗ್ರಾ (ಉತ್ತರಪ್ರದೇಶ) – ಇಲ್ಲಿಯ ಸೆಂಟ್ ಜಾನ್ಸ್ ಮಹಾವಿದ್ಯಾಲಯದ ಹೊರಗೆ ಮತ್ತು ನಗರದ ವಿವಿಧ ಶಾಲೆಗಳ ಹೊರಗೆ ರಾಷ್ಟ್ರೀಯ ಬಜರಂಗದಳ ಮತ್ತು ಅಂತರರಾಷ್ಟ್ರೀಯ ಹಿಂದೂ ಪರಿಷತ್ತು ಈ ಸಂಘಟನೆಯ ಕಾರ್ಯಕರ್ತರು `ಸಾಂತಾ ಕ್ಲಾಸ್’ನ ಪುತ್ತಳಿಯನ್ನು ದಹಿಸಿದರು. `ಸಾಂತಾಕ್ಲಾಸ್’ನನ್ನು `ಫಾದರ್ ಕ್ರಿಸ್ಮಸ್’ ಅಥವಾ `ಸೆಂಟ್ ನಿಕೋಲಸ್’, ಎಂದು ಸಹ ಕರೆಯುತ್ತಾರೆ.

1. ರಾಷ್ಟ್ರೀಯ ಬಜರಂಗದಳದ ಪ್ರದೇಶದ ಕಾರ್ಯದರ್ಶಿ ಅಜ್ಜು ಚೌಹಾಣ್ ಇವರ, ಡಿಸೆಂಬರ್ ತಿಂಗಳಿನಲ್ಲಿ ಕ್ರೈಸ್ತ ಮಿಷನರಿ ಕ್ರಿಸ್ಮಸ್, ಸಂತಾಕ್ಲಾಸ್ ಮತ್ತು ಕ್ರೈಸ್ತ ಹೊಸವರ್ಷದ ಹೆಸರಿನಲ್ಲಿ ಸಕ್ರಿಯರಾಗುತ್ತಾರೆ. ಮಕ್ಕಳಿಗೆ ಸಾಂತಾ ಕ್ಲಾಸ್‍ನ ಮೂಲಕ ಉಡುಗೊರೆಗಳನ್ನು ನೀಡಿ ಅವರನ್ನು ಕ್ರೈಸ್ತ ಧರ್ಮದೆಡೆಗೆ ಆಕರ್ಷಿಸುತ್ತಾರೆ ಎಂದು ಆರೋಪಿಸಿದರು.

2. ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತ ಅವತಾರ ಸಿಂಹ ಗಿಲ ಇವರು, ನಾವು ಇಂತಹ ಕ್ರೈಸ್ತ ಮಿಷನರಿಗಳ ಮೇಲೆ ನಿಗಾ ಇಟ್ಟಿದ್ದೇವೆ, ಅವರು ಕೊಳಗೇರಿಗಳಿಗೆ ಹೋಗಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು.