ಬರುವ ಜನವರಿ 3 ರಿಂದ 15 ವರ್ಷದಿಂದ 18 ವರ್ಷದ ಮಕ್ಕಳಿಗೆ ಲಸಿಕೆಯ ನೀಡಲಾಗುವುದು ! – ಪ್ರಧಾನಿ ಮೋದಿಯವರಿಂದ ಘೋಷಣೆ

ಪ್ರಧಾನಿ ನರೇಂದ್ರ ಮೋದಿ

ನವದೆಹಲಿ – ಕೊರೋನಾ ಮಹಾಮಾರಿಯಲ್ಲಿ ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ದೊಡ್ಡ ಪ್ರಶ್ನೆ ನಿರ್ಮಾಣವಾಗಿದೆ. ಈ ದಿಕ್ಕಿನತ್ತ ನಾವು ದೊಡ್ಡ ಹೆಜ್ಜೆ ಇಡುತ್ತಿದ್ದೇವೆ. ಹೊಸವರ್ಷದ ಮೊದಲ ಸೋಮವಾರ ಅಂದರೆ ಜನವರಿ 3 ರಿಂದ ನಾವು 15 ವರ್ಷದಿಂದ 18 ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವವರಿದ್ದೇವೆ. ಕೋವಿಡ ಯೋಧರು, `ಹೆಲ್ತಕೇರ್ ವರ್ಕರ್ಸ್’ (ಆಸ್ಪತ್ರೆಯಲ್ಲಿನ ಕೆಲಸ ಮಾಡುವ ಡಾಕ್ಟರ್, ಸಿಬ್ಬಂದಿಗಳು ಇತ್ಯಾದಿ) ಮತ್ತು `ಫ್ರಂಟ್‍ಲೈನ್ ವರ್ಕರ್ಸ್, (ಸಾಮಾಜಿಕ ಆರೋಗ್ಯ, ಆರ್ಥಿಕ ಮತ್ತು ರಾಷ್ಟ್ರೀಯ ಸುರಕ್ಷಾ ಇಂತಹ ಅಗತ್ಯವಾದ ಸೇವೆಯಲ್ಲಿ ಕೆಲಸಮಾಡುವ ಸಿಬ್ಬಂದಿಗಳು) ಇವರನ್ನು ಹೆಚ್ಚು ಸುರಕ್ಷಿತವಾಗಿರಿಸುವುದು ಅವಶ್ಯಕವಾಗಿರುವುದು ಅವರಿಗೆ ಜನವರಿ 10 ರಿಂದ ಬೂಸ್ಟರ್ ಡೋಸ ನೀಡಲಾಗುವುದು, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಮಾಹಿತಿ ನೀಡಿದರು.

ಪ್ರಧಾನಿ ಮೋದಿ ತಮ್ಮ ಮಾತನ್ನು ಮುಂದುವರೆಸುತ್ತಾ, 60 ವರ್ಷಕ್ಕಿಂತ ಮೇಲ್ಪಟ್ಟುನ ರೋಗಪೀಡಿತ ನಾಗರಿಕರಿಗೆ ಇರುವ ಅಪಾಯ ಗಮನದಲ್ಲಿಟ್ಟು ಅವರಿಗೆ ವೈದ್ಯರ ಸಲಹೆಯ ಮೇರೆಗೆ ಮೂರನೇ ಡೋಸ್ ನೀಡಲಾಗುವುದು. ಅದನ್ನು ಜನವರಿ 10 ರಿಂದ ಆರಂಭಿಸಲಾಗುವುದು. `ಒಮಿಕ್ರೋನ್’ನ ಅಪಾಯ ಇದ್ದರೂ, ಯಾರು ಹೆದರುವ ಅವಶ್ಯಕತೆ ಇಲ್ಲ. `ಜಾಗರೂಕತೆಯಿಂದ ಮತ್ತು ಕೊರೋನಾ ತಡೆಗಟ್ಟುವಿಕೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಎಂದು ಅವರು ಕರೆ ನೀಡಿದರು.