ಹಿಂದುತ್ವನಿಷ್ಠರಿಂದಾಗಿ ರಾಷ್ಟ್ರಮಟ್ಟದ ಆಟಗಾರ್ತಿ ಯುವತಿಗೆ ‘ಲವ್ ಜಿಹಾದ್’ ಬಲೆಯಿಂದ ಬಿಡುಗಡೆ !

ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ‘ಲವ್ ಜಿಹಾದ್’ ಗ್ರಂಥ ಓದಿ ಯುವತಿಯ ಮನಪರಿವರ್ತನೆ

  • ಹಿಂದೂ ಮಹಿಳೆಯರು ಮತ್ತು ಯುವತಿಯರು ‘ಲವ್ ಜಿಹಾದ್’ಗೆ ಬಲಿಯಾಗಬಾರದೆಂದು ಅವರಿಗೆ ಮೊದಲೇ ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ‘ಲವ್ ಜಿಹಾದ್’ ಗ್ರಂಥವನ್ನು ಓದಲು ನೀಡಿ !
  • ‘ಲವ್ ಜಿಹಾದ್’ ವಿರುದ್ಧ ಹಿಂದೂಗಳ ಮೇಲಿನ ಷಡ್ಯಂತ್ರವನ್ನು ಎದುರಿಸಲು, ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವುದರೊಂದಿಗೆ ರಾಷ್ಟ್ರವ್ಯಾಪಿ ‘ಲವ್ ಜಿಹಾದ್ ವಿರೋಧಿ ಕಾಯ್ದೆ’ಯನ್ನು ಜಾರಿಗೊಳಿಸುವುದು ಆವಶ್ಯಕ. ಇದಕ್ಕಾಗಿ ಎಲ್ಲೆಡೆ ಹಿಂದೂಗಳು ನ್ಯಾಯಸಮ್ಮತವಾಗಿ ಧ್ವನಿ ಎತ್ತಬೇಕು !
ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ‘ಲವ್ ಜಿಹಾದ್’ ಗ್ರಂಥ

ಠಾಣೆ(ಮಹಾರಾಷ್ಟ್ರ), ಡಿಸೆಂಬರ್ ೨೩ (ವಾರ್ತಾ.) – ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನೆಲೆಸಿರುವ ರಾಷ್ಟ್ರ ಮಟ್ಟದ ಆಟಗಾರ್ತಿ ಯುವತಿಯೊಬ್ಬಳನ್ನು ಹಿಂದುತ್ವನಿಷ್ಠರು ‘ಲವ್ ಜಿಹಾದ್’ನಿಂದ ರಕ್ಷಿಸಿದ್ದಾರೆ. ‘ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ‘ಲವ್ ಜಿಹಾದ್’ ಹೆಸರಿನ ಗ್ರಂಥದಲ್ಲಿ ‘ಲವ್ ಜಿಹಾದ್’ ತೊಡೆದುಹಾಕಲು ಪರಿಣಾಮಕಾರಿ ಕ್ರಮ ಮತ್ತು ವಿವಿಧ ಉಪಾಯಗಳನ್ನು ಕೈಗೊಂಡ ನಂತರ ಸಂತ್ರಸ್ತೆಯ ಮನಸ್ಸು ಬದಲಾಯಿತು’, ಎಂದು ಆ ಯುವತಿಯನ್ನು ರಕ್ಷಿಸಲು ಹೋಗಿದ್ದ ಹಿಂದುತ್ವನಿಷ್ಠರು ಹೇಳಿದರು.

೧. ಠಾಣೆ ಜಿಲ್ಲೆಯ ಯುವತಿ ಪುಣೆ ಜಿಲ್ಲೆಯಲ್ಲಿ ನೆಲೆಸಿರುವ ಮತಾಂಧನ ಆಮಿಷಗಳಿಗೆ ಆಕರ್ಷಿತಳಾಗಿ ‘ಲವ್ ಜಿಹಾದ್’ಗೆ ಬಲಿಯಾಗಿದ್ದಳು. ಈ ಮಾಹಿತಿಯು ಡಿಸೆಂಬರ್ ೧೧ ರಂದು ಇಲ್ಲಿನ ಹಿಂದುತ್ವನಿಷ್ಠರ ಗಮನಕ್ಕೆ ಬಂದಿತು. ಅವರು ಆಕೆಯ ಕುಟುಂಬವನ್ನು ಸಂಪರ್ಕಿಸಿದಾಗ, ಹುಡುಗಿ ತನ್ನ ಮುಖ್ಯ ದಾಖಲೆಗಳು ಮತ್ತು ದಾಖಲೆಗಳೊಂದಿಗೆ ಪುಣೆಯಲ್ಲಿ ನೆಲೆಸಿರುವ ಮತಾಂಧನೊಂದಿಗೆ ಕೆಲವು ದಿನಗಳ ಹಿಂದೆ ಹೊರಟು ಹೋಗಿದ್ದಾಳೆ ಎಂದು ಗಮನಕ್ಕೆ ಬಂದಿತು. ಹುಡುಗಿಯ ತಾಯಿ, ‘ಹುಡುಗಿ ಮನೆಯಿಂದ ಹೊರ ಹೋಗುತ್ತಿರುವಾಗ ಮತಾಂಧ ಎರಡು ಸೀರೆ ಕೊಟ್ಟು ನಮ್ಮ ‘ನಿಕಾಹ್’ಗೆ ಬರುವಂತೆ ಹೇಳಿದ್ದಾನೆ’. ಎಂದು ಹೇಳಿದ್ದಾರೆ.

೨. ಈ ಎಲ್ಲಾ ಘಟನೆಗಳಿಂದ ಹುಡುಗಿಯನ್ನು ಪಾರು ಮಾಡಲು ಹಿಂದುತ್ವನಿಷ್ಠರು ಹುಡುಗಿಯ ತಾಯಿಯ ಮೂಲಕ ಆಕೆಯನ್ನು ಸಂಪರ್ಕಿಸಿದ್ದಾರೆ. ಆಕೆಯ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಅವಳನ್ನು ಕರೆಸಿಕೊಂಡರು. ಯುವತಿ ಆ ಮತಾಂಧ ಹುಡುಗನೊಂದಿಗೆ ಬಂದಳು. ತಂದೆಗೆ ರಕ್ತ ವಾಂತಿಯಾಗುತ್ತಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಾಯಿ ಹುಡುಗಿಗೆ ತಿಳಿಸಿದ್ದಾರೆ. ಆ ಸಮಯದಲ್ಲಿ ಮತಾಂಧ ತನ್ನ ಸಹಚರರೊಂದಿಗೆ ಯುವತಿಯ ಮನೆಯ ಮೇಲೆ ನಿಗಾ ಇಟ್ಟಿದ್ದ. ಬಳಿಕ ಹಿಂದುತ್ವನಿಷ್ಠರು ಹುಡುಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು.

೩. ಅಲ್ಲಿ ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ‘ಲವ್ ಜಿಹಾದ್’ ಗ್ರಂಥದಲ್ಲಿ ಉಲ್ಲೇಖಿಸಿದಂತೆ ಎಲ್ಲ ಪ್ರಕಾರದ ಆಧ್ಯಾತ್ಮಿಕ ಮಟ್ಟದ ಉಪಾಯಗಳನ್ನು ಆರಂಭಿಸಲಾಯಿತು. ಮೊದಲಿಗೆ ಯುವತಿ ವಿರೋಧಿಸಿದಳು; ಆದರೆ ೭-೮ ಗಂಟೆಗಳ ನಂತರ, ಅವಳು ಕ್ರಮೇಣ ಸಕಾರಾತ್ಮಕವಾಗಲು ಪ್ರಾರಂಭಿಸಿದಳು. (‘ಲವ್ ಜಿಹಾದ್’ನ ಬಲೆಯಲ್ಲಿ ಸಿಲುಕಿರುವ ಯುವತಿಯನ್ನು ಅದರಿಂದ ಹೊರತರಲು ಪ್ರಬೋಧನಪರ ಗ್ರಂಥವನ್ನು ಪ್ರಕಟಿಸಿದ ಹಿಂದೂ ಜನಜಾಗೃತಿ ಸಮಿತಿಗೆ ಧನ್ಯವಾದಗಳು ! – ಸಂಪಾದಕರು)

೪. ಆಕೆಗೆ ‘ಲವ್ ಜಿಹಾದ್’ ಗ್ರಂಥವನ್ನು ಓದಲು ನೀಡಲಾಯಿತು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ‘ಲವ್ ಜಿಹಾದ್’ ಬಗ್ಗೆ ಮಾಹಿತಿ ಮತ್ತು ಚಿತ್ರೀಕರಣವನ್ನು ತೋರಿಸಲಾಯಿತು. ಅದರ ನಂತರ, ಅವಳ ಮನಸ್ಸು ಬದಲಾಯಿತು.

೫. ಯುವತಿ, ‘ಡಿಸೆಂಬರ್ ೨೦ ರಂದು ಮದುವೆ ನಿಶ್ಚಯವಾಗಿದ್ದರಿಂದ ನನಗೆ ಹುಡುಗನ ತಾಯಿ ಕಳುಹಿಸುತ್ತಿರಲಿಲ್ಲ’ ಎಂದು ಹೇಳಿದಳು. ಕೇವಲ ಅಪ್ಪನ ಮುಖ ನೋಡಿ ಬರಲು ಹೇಳಿದರು”, ಎಂದಳು (ಮತಾಂಧರ ಹಿಂದೂದ್ವೇಷಿ ಮಾನಸಿಕತೆ ತಿಳಿಯಿರಿ ! – ಸಂಪಾದಕರು)

೬. ಈ ಸಮಯದಲ್ಲಿ ಯುವತಿಯ ತಾಯಿಗೂ ಆಧ್ಯಾತ್ಮಿಕ ಉಪಾಯಗಳನ್ನು ಮಾಡಲು ಹೇಳಲಾಯಿತು. ಯುವತಿ ಮತ್ತು ಆಕೆಯ ತಾಯಿಗೆ ಮತಾಂಧರು ನೀಡಿದ ಸೀರೆ, ಅದೇ ರೀತಿ ವಸ್ತುಗಳನ್ನು ಸುಟ್ಟು ನಾಶ ಪಡಿಸಿದ ನಂತರ ಇಬ್ಬರಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತಿರುವುದು ಕಂಡುಬಂದಿತು. (ಮತಾಂಧರು ವಿವಿಧ ವಸ್ತುಗಳ ಮೂಲಕ ಹಿಂದೂಗಳನ್ನು ಹೇಗೆ ಮೋಹಿಸುತ್ತಾರೆ ಎಂಬುದು ಈ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು)

೭. ಈಗ ಆ ಯುವತಿ ತನ್ನ ಪೋಷಕರೊಂದಿಗೆ ಮನೆಗೆ ಮರಳಿದ್ದಾಳೆ. ಮತಾಂಧರು ಮಾಡಿದ ವಿವಾಹ ನೋಂದಣಿ ಅರ್ಜಿಯನ್ನು ರದ್ದುಪಡಿಸಲು, ಅದೇ ರೀತಿ ಯುವತಿಯ ಶೈಕ್ಷಣಿಕ ಮತ್ತು ಇತರ ಪ್ರಮಾಣಪತ್ರಗಳು ಮತ್ತು ಮೊಬೈಲ್ ಅವರ ಕೈಯಿಂದ ಹಿಂತಿರುಗಿಸಬೇಕು; ಅದಕ್ಕಾಗಿ ಹಿಂದುತ್ವನಿಷ್ಠ ಕಾರ್ಯಕರ್ತರು ಮುಂದಿನ ಕಾನೂನು ನೆರವು ನೀಡುತ್ತಿದ್ದಾರೆ. (‘ಲವ್ ಜಿಹಾದ್’ನ ಬಲೆಯಲ್ಲಿ ಸಿಲುಕ್ಕಿದ್ದ ಯುವತಿಯ ಬಿಡುಗಡೆಗಾಗಿ ಕೊನೆಯವರೆಗೂ ಅವಿರತವಾಗಿ ಶ್ರಮಿಸುತ್ತಿರುವ ಹಿಂದುತ್ವನಿಷ್ಠರಿಗೆ ಅಭಿನಂದನೆಗಳು ! ಎಲ್ಲಾ ವಸ್ತುಗಳು ಸಿಗುವತನಕ ಈ ಹೋರಾಟ ಮೂಂದುವರೆಸಿ ಯುವತಿಗೆ ನ್ಯಾಯ ಒದಗಿಸಬೇಕು ! – ಸಂಪಾದಕರು)