ನವದೆಹಲಿ – ಭಾರತದ ನೆರೆಯ ದೇಶದ ತುಲನೆಯಲ್ಲಿ ಚೀನಾದ ಮೇಲೆ ಎಲ್ಲಕ್ಕಿಂತ ಹೆಚ್ಚು, ಹಾಗೂ ಬಾಂಗ್ಲಾ ದೇಶದ ಮೇಲೆ ಎಲ್ಲಕ್ಕಿಂತ ಕಡಿಮೆ ಸಾಲ ಇದೆ. ಪಾಕಿಸ್ತಾನವಂತೂ ಸಾಲದಿಂದ ದಿವಾಳಿಯ ಹೊಸ್ತಿಲಲ್ಲಿ ನಿಂತಿದೆ. ಚೀನಾದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 6 ಲಕ್ಷ 80 ಸಾವಿರದ 696 ರೂಪಾಯಿಯಷ್ಟು ಸಾಲವಿದೆ. ಚೀನಾದ ಜನಸಂಖ್ಯೆ 144 ಕೋಟಿ 47 ಲಕ್ಷ ಇದೆ. ಚೀನಾ ಪ್ರಗತಿ ಮಾಡಿದೆ, ಎಂದು ಹೇಳಲಾಗುತ್ತಿದ್ದರೂ, ಅದು ದೊಡ್ಡ ಪ್ರಮಾಣದಲ್ಲಿ ವಿದೇಶಿ ಸಾಲ ಪಡೆದಿದೆ. ಬಾಂಗ್ಲಾದೇಶದಲ್ಲಿ ಪ್ರತಿಯೊಬ್ಬ ನಾಗರಿಕರ ಮೇಲೆ 20 ಸಾವಿರ ರೂಪಾಯಿಯ ಸಾಲವಿದೆ. ಚೀನಾ ಮತ್ತು ಪಾಕಿಸ್ತಾನ ಇವರ ತುಲನೆಯಲ್ಲಿ ಅದು ಬಹಳ ಕಡಿಮೆ ಇದೆ. ಭಾರತದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 32 ಸಾವಿರ ರೂಪಾಯಿಯಷ್ಟು ವಿದೇಶಿ ಸಾಲವಿದೆ.