ಭಾಜಪದ ಪದಾಧಿಕಾರಿಯ ಹತ್ಯೆಯ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ !
|
* ಕೇರಳದಲ್ಲಿ ಮಾಕಪದ ಸರಕಾರ ಇರುವುದರಿಂದ ಮತಾಂಧರು ಹಿಂದೂ ಸಂಘಟನೆಯ ನೇತಾರರ ಹತ್ಯೆ ಮಾಡಿದ್ದರಿಂದ ಅದರ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿ ಸೋಮಾರಿತನ ಮಾಡಲಾಗುತ್ತಿದೆ, ಎಂದು ಯಾರಾದರೂ ಹೇಳಿದರೆ ಅದರಲ್ಲಿ ಆಶ್ಚರ್ಯವೇನಿದೆ ? – ಸಂಪಾದಕರು * ಹಿಂದೂಗಳಿಗೆ ‘ಮತಾಂಧ ರಾಜಕೀಯ ಪಕ್ಷದ ನೇತಾರನ ಹತ್ಯೆಯ ಪ್ರಕರಣದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗುತ್ತಿದೆ’ ಎಂದು ಅನಿಸುತ್ತಿದೆ ! – ಸಂಪಾದಕರು |

ಅಲಪ್ಪುಝಾ (ಕೇರಳ) – ಇಲ್ಲಿ ಡಿಸೆಂಬರ್ 18 ರಂದು ರಾತ್ರಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್. ಡಿ. ಪಿ. ಐ.)ದ ರಾಜ್ಯ ಸಚಿವರಾದ ಕೆ.ಎಸ್. ಶಾನರವರ ಹತ್ಯೆಯ ಪ್ರಕರಣದಲ್ಲಿ ಕೇರಳ ಪೊಲೀಸರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಸಾದ ಮತ್ತು ರಥೀಶ ಎಂಬ ಇಬ್ಬರು ಸ್ವಯಂಸೇವಕರನ್ನು ಬಂಧಿಸಿದ್ದಾರೆ. ‘ಇವರು ಮನ್ನನಚೇರಿ ಎಂಬ ಊರಿನಲ್ಲಿ ವಾಸಿಸುತ್ತಿದ್ದು ಹತ್ಯೆಯ ಹಿಂದೆ ಅವರ ಕೈವಾಡವಿತ್ತು ಮತ್ತು ಅವರು ಈ ಹತ್ಯೆಗಾಗಿ ವಾಹನದ ವ್ಯವಸ್ಥೆ ಮಾಡಿದ್ದರು’ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಇನ್ನೂ 8 ಜನರನ್ನು ಹುಡುಕುತ್ತಿದ್ದಾರೆ. ಶಾನರವರ ಹತ್ಯೆಯ ಸೇಡು ಎಂದು ಡಿಸೆಂಬರ್ 19 ರಂದು ಭಾಜಪದ ಓಬಿಸಿ ಮೋರ್ಚಾದ ರಾಜ್ಯ ಸಚಿವರಾದ ರಂಜಿತ ಶ್ರೀನಿವಾಸರವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಇಲ್ಲಿಯವರೆಗೂ ಬಂಧಿಸಿಲ್ಲ. (ಮಾಕಪದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಾಳಿಗೆ ತೂರಿರುವುದರಿಂದ ಈ ರೀತಿಯಲ್ಲಿ ಹತ್ಯೆಗಳು ನಡೆಯುತ್ತಿವೆ. ಇದನ್ನು ನೋಡಿ ಈ ಸರಕಾರವನ್ನು ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ! – ಸಂಪಾದಕರು)
Kerala: Two RSS workers arrested in connection with murder of SDPI leader in Alappuzha https://t.co/EilTfPWGZD
— Republic (@republic) December 20, 2021
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.