ಅಲಪ್ಪುಳಾ (ಕೇರಳ) ಇಲ್ಲಿ ೧೨ ಗಂಟೆಗಳಲ್ಲಿ ಭಾಜಪ ಹಾಗೂ ಎಸ್.ಡಿ.ಪಿ.ಐ.ನ ಮುಖಂಡರ ಕೊಲೆ

ಕೇರಳದ ಮಾಕಪ ಸರಕಾರವನ್ನು ವಿಸರ್ಜಿತಗೊಳಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ !

ಅಲಪ್ಪುಳಾ(ಕೇರಳ) – ಅಲಪ್ಪುಳಾ ಜಿಲ್ಲೆಯಲ್ಲಿ ಕೇವಲ ೧೨ ಗಂಟೆಗಳಲ್ಲಿ ಇಬ್ಬರು ಮುಖಂಡರ ಹತ್ಯೆಯಾಗಿದೆ. ಇಲ್ಲಿ ಡಿಸೆಂಬರ ೧೮ ರಂದು ರಾತ್ರಿ ಜಿಹಾದಿ ಸಂಘಟನೆ ಪಾಪ್ಯುಲರ ಫ್ರಂಟ ಆಫ ಇಂಡಿಯಾದ ರಾಜಕೀಯ ಪಕ್ಷವಾಗಿರುವ ‘ಸೋಷಲ ಡೆಮೊಕ್ರಟಿಕ ಪಾರ್ಟೀ ಆಫ ಇಂಡಿಯಾ’ದ (‘ಎಸ್.ಡಿ.ಪಿ.ಐ.’ಯ)ದ ರಾಜ್ಯ ಸಚಿವ ಕೆ.ಎಸ್.ಶಾನ ಎಂಬ ನಾಯಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಹಾಗೂ ಮರುದಿನ ಅಂದರೆ ಡಿಸಂಬರ ೧೯ ರಂದು ಬೆಳಿಗ್ಗೆ ಭಾಜಪದ ಒ.ಬಿ.ಸಿ ಮೋರ್ಚಾದ ರಾಜ್ಯ ಸಚಿವ ಹಾಗೂ ನ್ಯಾಯವಾದಿ ರಣಜಿತ ಶ್ರೀನಿವಾಸರ ಹತ್ಯೆ ಮಾಡಲಾಗಿದೆ. ಅವರು ಬೆಳಿಗ್ಗೆ ‘ಮಾರ್ನಿಂಗ ವಾಕ’ಗೆ ಹೋಗಲು ಸಿದ್ಧತೆ ನಡೆಸುತ್ತಿರುವಾಗ ಅವರ ಮನೆಯಲ್ಲಿಯೇ ಅವರ ಹತ್ಯೆ ಮಾಡಲಾಯಿತು. ರಾಜ್ಯದಲ್ಲಿ ಈ ವರ್ಷ ಏಪ್ರಿಲ್ ತಿಂಗಳಿನಲ್ಲಾದ ವಿಧಾನಸಭೆ ಚುನಾವಣೆಯಲ್ಲಿ ರಣಜಿತರವರು ಭಾಜಪದ ಅಭ್ಯರ್ಥಿ ಎಂದು ಸ್ಪರ್ಧಿಸಿದ್ದರು.

೧. ಕೆ.ಎಸ್. ಶಾನರವರು ದ್ವಿಚಕ್ರ ವಾಹನದಿಂದ ಮನೆಗೆ ಹೋಗುತ್ತಿರುವಾಗ ಒಂದು ಚತುಷ್ಚಕ್ರ ವಾಹನವು ಅವರಿಗೆ ಡಿಕ್ಕಿ ಹೊಡೆಯಿತು. ಅನಂತರ ಅವರ ಮೇಲೆ ಚೂರಿಯಿಂದ ಹಲವಾರು ಬಾರಿ ಇರಿದು ದಾಳಿ ನಡೆಸಲಾಯಿತು. ಅದರಲ್ಲಿ ಅವರು ಗಾಯಗೊಂಡನಂತರ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಅವರು ಸಾವನ್ನಪ್ಪಿದರು

೨. ಈ ಹತ್ಯೆಯ ನಂತರ ಪೊಲೀಸರು ಜಿಲ್ಲೆಯಲ್ಲಿ ಸೆಕ್ಷನ್ ೧೪೪ (ಗುಂಪು ನಿಶೇಧಾಜ್ಞೆಯನ್ನು) ಜಾರಿಗೊಳಿಸಿದ್ದಾರೆ. ವಾಹನಗಳ ತಪಾಸಣೆಯನ್ನು ಹೆಚ್ಚಿಸಲಾಗಿದೆ.

೩. ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿಯವರು ರಾಜ್ಯದಲ್ಲಿ ಮಾಕಪ ಸರಕಾರವನ್ನು ಟೀಕಿಸಿದರು. ಅವರು, ‘ಕೇರಳ ಸರಕಾರದ ಮೇಲೆ ದೇವಭೂಮಿಯನ್ನು ದೇಶವನ್ನು ಜಿಹಾದಿಗಳ ‘ಸ್ವರ್ಗ’ವನ್ನಾಗಿ ಮಾರ್ಪಡಿಸಲು ಪ್ರಯತ್ನಿಸುತ್ತಿದ್ದಾರೆ.’ ಎಂದು ಹೇಳಿದರು. ಕೇಂದ್ರ ಸಚಿವ ವಿ. ಮುರಳೀಧರನರವರು ಈ ಕೊಲೆಗಳನ್ನು ನಿಷೇಧಿಸಿದ್ದಾರೆ. ಕೇರಳದಲ್ಲಿ ಗುಂಡಾಗಳರಾಜ್ಯವಿರುವುದಾಗಿ ಅವರು ಆರೋಪಿಸಿದರು.

೪. ಎಸ್.ಡಿ.ಪಿ.ಐ.ನ ಪ್ರಮುಖರಾದ ಎಮ್.ಕೆ. ಫೈಝೀಯವರು, ‘ಈ ಘಟನೆಗಳು ಜಾತಿಯ ಹಿಂಸಾಚಾರವನ್ನು ನಿರ್ಮಿಸಲು ಹಾಗೂ ರಾಜ್ಯದಲ್ಲಿ ಸಾಮರಸ್ಯವನ್ನು ಕೆಡಿಸಲು ಸಂಘ ಪರಿವಾರದ ಧೋರಣೆಯ ಒಂದು ಭಾಗವಾಗಿದೆ. ನಾವು ಸಂಘದ ಭಯೋತ್ಪಾದನೆಯನ್ನು ನಿಶೇಧಿಸುತ್ತೇವೆ ಎಂದು ಹೇಳಿದರು.

ತಪ್ಪಿತಸ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ! – ಮುಖ್ಯಮಂತ್ರಿ ಪಿನರಾಯಿ ವಿಜಯನ್

ರಾಜ್ಯದ ಮುಖ್ಯಮಂತ್ರಿಗಳಾದ ಪಿನರಾಯಿ ವಿಜಯನರವರು ಈ ಕೊಲೆಯನ್ನು ನಿಷೇಧಿಸಿದ್ದಾರೆ. ಅವರು, “ಇಂತಹ ಭೀಕರ ಹಿಂಸೆ ಹಾಗೂ ಅಮಾನವೀಯ ಕೃತ್ಯಗಳು ರಾಜ್ಯಕ್ಕಾಗಿ ಅಪಾಯಕರವಾಗಿದೆ. ಎಲ್ಲಾ ಕೊಲೆಗಾರರನ್ನು ಶೀಘ್ರದಲ್ಲಿಯೇ ಹಿಡಿಯಲಾಗುವುದು, ಎಂಬ ಬಗ್ಗೆ ನನಗೆ ಖಾತ್ರಿಯಿದೆ.” ಎಂದು ಹೇಳಿದರು.