ಹಲಾಲ್ ಮಾಂಸ ಮಾರಾಟ ಮಾಡುವ ಅಂಗಡಿಯಲ್ಲಿ ರಾಷ್ಟ್ರಧ್ವಜವನ್ನು `ಟವಲ್’ ನಂತೆ ಬಳಕೆ !

ಕೇರಳ ಪೊಲೀಸರ ಮೇಲೆ ತಕ್ಷಣ ಕ್ರಮಕೈಗೊಂಡಿಲ್ಲ ಎಂದು ರಾಷ್ಟ್ರಾಭಿಮಾನಿಗಳ ಆರೋಪ

ಕಮ್ಯುನಿಷ್ಟ ಸರಕಾರ ಇರುವ ಕೇರಳ ರಾಜ್ಯದ ಮತಾಂಧರ ವಿರುದ್ಧ ಪೊಲೀಸರಿಂದ ಕ್ರಮ ಕೈಗೊಳ್ಳದೇ ಇರುವುದರಲ್ಲಿ ಆಶ್ಚರ್ಯವೇನಿಲ್ಲ!- ಸಂಪಾದಕರು 

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು 

ತಿರುವನಂತಪುರಂ – ಇಲ್ಲಿಯ ಕಟ್ಟಾಕಾಡಾ ಕ್ಷೇತ್ರದಲ್ಲಿ ಇರುವ ಒಂದು ಹಲಾಲ ಮಾಂಸ ಮಾರಾಟ ಮಾಡುವ ಅಂಗಡಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು `ಟವಲ್’ (ದೊಡ್ಡ ಪಂಚೆ) ಎಂದು ಉಪಯೋಗಿಸುತ್ತಿರುವ ಖೇದಕರ ಘಟನೆ ಬೆಳಕಿಗೆ ಬಂದಿದೆ. ಇದರ ಛಾಯಾಚಿತ್ರ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರ ವಿರುದ್ಧ ಸ್ಥಳಿಯ ರಾಷ್ಟ್ರಾಭಿಮಾನಿಗಳು ಪೊಲೀಸರಲ್ಲಿ ದೂರನ್ನು ದಾಖಲಿಸಿದ ನಂತರವೂ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳದೆ ಅನೇಕ ಗಂಟೆಗಳ ನಂತರ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಲಾಗುತ್ತದೆ. ಈ ಘಟನೆಗೆು ಕೇರಳ ರಾಜ್ಯದಾದ್ಯಂತ ವ್ಯಾಪಕ ವಿರೋಧವಾಗುತ್ತಿದೆ.

ಸ್ಥಳೀಯ ಸಮಾಜಸೇವಕರಾಗಿರುವ ರಾಜು ಎಂಬ ಹೆಸರಿನ ದೂರುದಾರರು ಕೇರಳ ಪೊಲೀಸರ ವಿರೋಧದಲ್ಲಿ ಆರೋಪಿಸುತ್ತಾ, `ನಾನು ಈ ಘಟನೆಯ ಛಾಯಾಚಿತ್ರ ಮತ್ತು ವಿಡಿಯೋ ಪೋಲೀಸರಿಗೆ ಕಳಿಸಿದ್ದೆ. ಕೆಲವು ಪೊಲೀಸ್ ಅಧಿಕಾರಿಗಳು ಈ ಮಾಹಿತಿಯನ್ನು ಸಂಬಂಧಪಟ್ಟ ಹೋಟೆಲ್ ಮಾಲೀಕರವರೆಗೂ ತಲುಪಿಸಿದ್ದಾರೆ. ಆದ್ದರಿಂದ ಪೊಲೀಸ್ ಘಟನಾಸ್ಥಳಕ್ಕೆ ಬರುವಷ್ಟರಲ್ಲಿ ಅಲ್ಲಿಂದ ರಾಷ್ಟ್ರಧ್ವಜ ತೆಗೆಯಲಾಗಿತ್ತು.’ ಎಂದು ಹೇಳಿದರು.