ಇಸ್ಲಾಮಿಕ್ ಆಕ್ರಮಣದ ಮೊದಲು ಕಾಶ್ಮೀರವು ಪ್ರಪಂಚದ `ಸಿಲಿಕಾನ್ ವ್ಯಾಲಿ’ ಆಗಿತ್ತು ! – ಚಲನಚಿತ್ರ ನಿರ್ದೇಶಕ ವಿವೇಕ್ ರಂಜನ ಅಗ್ನಿಹೋತ್ರಿ

(ಅಮೇರಿಕಾದ `ಸಿಲಿಕಾನ್ ವ್ಯಾಲಿ’ಯು ಪ್ರಸ್ತುತ ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರ ಎಂದು ಗುರುತಿಸಲ್ಪಡುತ್ತದೆ.)

ಕಾಶ್ಮೀರಿ ಹಿಂದೂಗಳ ನರಮೇಧದ ಮೇಲೆ ಬೆಳಕು ಚೆಲ್ಲುವ ಮುಂಬರುವ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ಗಾಗಿ ಅಮೇರಿಕಾದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆ

ನವ ದೆಹಲಿ : ಕಾಶ್ಮೀರದಲ್ಲಿ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತಿತ್ತು. ಕಾಶ್ಮೀರದ ಮೇಲೆ ಇಸ್ಲಾಮಿ ಆಕ್ರಮಣಕಾರರು ಬರುವ ಮೊದಲು ಈ ಭೂಮಿ ಜಗತ್ತಿನ `ಸಿಲಿಕಾನ್ ವ್ಯಾಲಿ’ಯಾಗಿತ್ತು. ಇಲ್ಲಿ ಜ್ಞಾನಗಂಗಾ ಹರಿಯುತ್ತಿತ್ತು. ಅದಕ್ಕಾಗಿಯೇ ಭಾರತದ ಮೇಲೆ ಆಕ್ರಮಣ ಮಾಡಲಾಯಿತು. ಧಾರ್ಮಿಕ ಕಟ್ಟರವಾದಿಗಳು ನೂರಾರು ವರ್ಷಗಳಿಂದ ಭಾರತವನ್ನು ಲೂಟಿ ಮಾಡಿದ್ದಾರೆ. ಕಾಶ್ಮೀರದ ರೂಪದಲ್ಲಿ ಜಗತ್ತಿನ ಎಲ್ಲಕ್ಕಿಂತ ಪ್ರಾಚೀನ ಮತ್ತು ಮಹಾನ ವಿದ್ವಾನರ ಭೂಮಿಯನ್ನು ನಿರ್ನಾಮಗೊಳಿಸಲಾಯಿತು. ಎಂದು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ವಿವೇಕ ರಂಜನ ಅಗ್ನಿಹೋತ್ರಿ ಇವರು `ಕಾಶ್ಮೀರ ಮತ್ತು ಸೈದ್ಧಾಂತಿಕ ಭಯೋತ್ಪಾದನೆ’ ಈ ಕುರಿತು ಮಾರ್ಗದರ್ಶನ ಮಾಡಿದರು. ಅವರು ತಮ್ಮ ಮುಂಬರುವ ಚಲನಚಿತ್ರ `ದಿ ಕಾಶ್ಮೀರ್ ಫೈಲ್ಸ್’ ಪ್ರಚಾರಕ್ಕಾಗಿ ಡಿಸೆಂಬರ್ 16 ರಂದು ಅಮೇರಿಕಾದ ಡೆನ್ವರ್ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತಿದ್ದರು. ಕಾಶ್ಮೀರಿ ಹಿಂದೂಗಳ ಮೇಲಾದ್ದ ಅಸಂಖ್ಯಾತ ಅತ್ಯಾಚಾರಗಳ ಮೇಲೆ ಬೆಳಕು ಚೆಲ್ಲುವ `ದಿ ಕಾಶ್ಮೀರ್ ಫೈಲ್ಸ್’ ಈ ಚಲನಚಿತ್ರ ಮುಂದಿನ ವರ್ಷ ಅಂದರೆ ಜನವರಿ 26, 2022 ರಂದು ವಿಶ್ವ ಮಟ್ಟದಲ್ಲಿ ಪ್ರದರ್ಶನಗೊಳ್ಳಲಿದೆ. ಅದರ ಪ್ರಚಾರಕ್ಕಾಗಿ ವಿವೇಕ ಅಗ್ನಿಹೋತ್ರಿ ಇವರು ಕೆಲವು ವಾರಗಳಿಂದ ಅಮೇರಿಕಾದ ಪ್ರವಾಸದಲ್ಲಿದ್ದಾರೆ. ಡಿಸೆಂಬರ 4 ರಂದು ಕ್ಯಾಪಿಟಲ್ ಹಿಲ್ ಇಲ್ಲಿಯೂ ಭಾಷಣವಾಗಿತ್ತು.

ಡೆನ್ವರ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಗ್ನಿಹೋತ್ರಿಯವರು ಮುಂದಿನಂತೆ ಹೇಳಿದರು,

1. ಅಫ್ಘಾನಿಸ್ತಾನ ಒಂದು ಕಾಲದಲ್ಲಿ ಸಾಂಸ್ಕೃತಿಕ ಭೂಮಿಗಳಲ್ಲಿ ಒಂದಾಗಿತ್ತು. ಹಿಂದೂ ಧರ್ಮದ ಹಿರಿಮೆಯಿಂದಾಗಿ ಅಫ್ಘಾನಿಸ್ತಾನಕ್ಕೆ ಶ್ರೇಷ್ಠ ಇತಿಹಾಸ ಲಭಿಸಿದೆ. ಇಂದು ಜಿಹಾದಿ ಭಯೋತ್ಪಾದನೆಯಿಂದ ಅಫ್ಘಾನಿಸ್ತಾನದಲ್ಲಿ ಏನು ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ.

2. ಯೋಗ ಹುಟ್ಟಿದ್ದು ಕಾಶ್ಮೀರದಲ್ಲಿ. ಯೋಗವು ರೋಗಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತದೆ, ಆದರೆ ಆಧುನಿಕ ವೈದ್ಯಕೀಯ ಶಾಸ್ತ್ರಗಳು ರೋಗ ಬಂದನಂತರ ಅದರ ಮೇಲೆ ಚಿಕಿತ್ಸೆ ನೀಡಲು ಕೆಲಸ ಮಾಡುತ್ತವೆ. ಉಪನಿಷತ್ತುಗಳು ಕಾಶ್ಮೀರದಲ್ಲಿ ಹುಟ್ಟಿಕೊಂಡಿವೆ. ಜರ್ಮನ್ ಮತ್ತು ಇತರ ಪಾಶ್ಚಾತ್ಯ ವಿಚಾರವಂತರು ಮುಖ್ಯವಾಗಿ ಉಪನಿಷತ್ತುಗಳನ್ನು ಅಧ್ಯಯನ ಮಾಡಿದರು.

3. ಇಡೀ ಜಗತ್ತನ್ನು ‘ಎಡ ವಿರುದ್ಧ ಬಲ’ ಸಿದ್ಧಾಂತ, `ಪೂರ್ವ ವಿರುದ್ಧ ಪಾಶ್ಚಿಮಾತ್ಯ’ ಎಂದು ವಿಂಗಡಿಸಲಾಗಿದೆ. ಈ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದಾಗಿ ಜಿಹಾದಿ ಭಯೋತ್ಪಾದಕರು ಇದರ ದುರುಪಯೋಗಿಸಿಕೊಳ್ಳುತ್ತಿದ್ದಾರೆ. ಭಗವಾನ ಶಿವನು ಸಾವಿರಾರು ವರ್ಷಗಳ ಹಿಂದೆ, ತನ್ನ ಮೂರನೇ ಕಣ್ಣು ಎಲ್ಲಾ ಸಿದ್ಧಾಂತಗಳನ್ನು ಏಕೀಕರಣಗೊಳಿಸುವ ಪ್ರತೀಕವಾಗಿದೆ ಎಂದು ಹೇಳಿದ್ದಾನೆ. ಹೀಗೆ ಇಡೀ ಜಗತ್ತನ್ನು ಒಟ್ಟುಗೂಡಿಸಲು ಕಲಿಸುವ ಭೂಮಿಯಿಂದ ನಾನು ಬಂದಿದ್ದೇನೆ, ಜಗತ್ತು ಭಾರತದಿಂದ ಕರುಣೆ, ಸಮಗ್ರತೆ ಇತ್ಯಾದಿ ದೈವಿ ಗುಣಗಳನ್ನು ಪಡೆದುಕೊಂಡಿದೆ. ಹಿಂದೂ ಧರ್ಮ ಎಲ್ಲರಿಗೂ ಗೌರವವನ್ನು ನೀಡುವುದನ್ನು ಕಲಿಸುತ್ತದೆ. ನಮ್ಮ ಧರ್ಮವು ನಮಗೆ ಅನೇಕದಿಂದ ಏಕತೆಗೆ ಬರಲು ಕಲಿಸುತ್ತದೆ.

4. ಬದುಕಿನ ರಹಸ್ಯ, ಕೌಟುಂಬಿಕವ್ಯವಸ್ಥೆ, ಶ್ರದ್ಧೆಯ ಮಹತ್ವ, `ನಾನು ಎಲ್ಲಿಂದ ಬಂದೆ ?’, `ನನ್ನ ಜೀವನದ ಉದ್ದೇಶವೇನು ?’ ಎಂಬುದಕ್ಕೆ ಉತ್ತರ ಹುಡುಕಲು ವಿದೇಶಿಯರು ನನ್ನ ಭಾರತ ಭೂಮಿಗೆ ಬರಬೇಕಾಗುತ್ತದೆ. ನಿಮಗೆ ಹಣ ಗಳಿಸುವುದಿದ್ದರೆ ಅಮೆರಿಕಕ್ಕೆ ಹೋಗಬೇಕಾಗುತ್ತದೆ.

5. ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಪಾಠವನ್ನು ಭಾರತವು ಜಗತ್ತಿಗೆ ಕಲಿಸಿದೆ. ನಾವು ಅತ್ಯಂತ ತಾಳ್ಮೆಯಿಂದ ಇದ್ದೇವೆ. ನಮ್ಮ ತಾಳ್ಮೆಯಿಂದಾಗಿಯೇ ನಮ್ಮ ಸಂಸ್ಕೃತಿ ಇಂದೂ ಕೂಡ ಉಳಿದುಕೊಂಡಿದೆ. ನಾವು ಮುಂದಿನ 5,000 ವರ್ಷಗಳವರೆಗೆ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆ. `ಜಗತ್ತು ಒಂದೇ ಆಗಿದೆ’, ಎಂಬುದನ್ನು ನಾವು ಭಾವಿಸುತ್ತೇವೆ. ಅದಕ್ಕಾಗಿಯೇ ನಮಗೆ ಶಕ್ತಿ ಸಿಗುತ್ತದೆ.

6. ಫ್ರಾನ್ಸ್‍ನ `ಚಾರ್ಲಿ ಹೆಬ್ದೋ’ ಮೇಲಿನ ದಾಳಿ ಮತ್ತು ಮುಂಬಯಿಯನಲ್ಲಿ 26/11 ದಾಳಿಗಳು ಧಾರ್ಮಿಕ ಕಟ್ಟರವಾದದ ಫಲಗಳಾಗಿವೆ. ಹಿಂದೆ ಶೇ. 100 ರಷ್ಟು ಹಿಂದುವಾಗಿದ್ದ ಕಾಶ್ಮೀರವು ಇಂದು ಹಿಂದೂರಹಿತವಾಗಿದೆ. ಜನವರಿ 19, 1990 ರಂದು, ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರು ಹಿಂದೂಗಳ ಮೇಲೆ ದಾಳಿ ಮಾಡಿದರು. ಆ ಸಮಯದಲ್ಲಿ, ರಷ್ಯಾದಿಂದ ಮತ್ತು ಸ್ವಲ್ಪ ಮಟ್ಟಿಗೆ ಅಮೇರಿಕಾದಿಂದ ಪಡೆದ ಆರ್ಥಿಕ ಬೆಂಬಲದಿಂದ, ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ಬಳಸಿ ಹಿಂದೂಗಳ ಮೇಲೆ ದಾಳಿ ಮಾಡಿದರು. 5 ಲಕ್ಷ ಹಿಂದೂಗಳು ಪಲಾಯನ ಮಾಡಬೇಕಾಯಿತು. ಇಷ್ಟೆಲ್ಲ ಆದರೂ ಕಾಶ್ಮೀರಿ ಹಿಂದೂಗಳು ಎಂದಿಗೂ ಅದರ ಸೇಡು ತೀರಿಸಿಕೊಂಡಿಲ್ಲ, ಭಾವನೆಗಳನ್ನು ಕೆರಳಿಸುವ ಭಾಷಣವನ್ನೂ ಮಾಡಿಲ್ಲ ! ಎಂದು ಹೇಳಿದರು.

ಮಾನವೀಯತೆಯನ್ನೇ ನೋಡದ ಭಯೋತ್ಪಾದನೆಯ ಮೇಲೆ ಬೆಳಕು ಚೆಲ್ಲುವ `ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ !

‘ಕಾಶ್ಮೀರಿ ಹಿಂದೂಗಳ ನರಮೇಧವನ್ನು ಬೆಳಕು ಚೆಲ್ಲುವ ಚಲನಚಿತ್ರ ನಿರ್ಮಿಸುತ್ತಿದ್ದರಿಂದ ನನ್ನ ವಿರುದ್ಧ ಫತ್ವಾ ಹೊರಡಿಸಲಾಯಿತು. ಭಯೋತ್ಪಾದನೆಯನ್ನು ಎದುರಿಸಲು ಅದು ತಿಳಿಯುವುದು ಅಗತ್ಯವಾಗಿದೆ. `ಮಾನವೀಯತೆಯಿಂದ ಯಾವುದನ್ನು ನೋಡಲಾಗಿಲ್ಲವೋ ಅದುತಿಳಿಯಬೇಕೆಂದೇ `ದಿ ಕಾಶ್ಮೀರ ಫೈಲ್ಸ್’ ಈ ಚಲನಚಿತ್ರವಿದೆ. ಇಂದು ಲಕ್ಷಾಂತರ ಕಾಶ್ಮೀರಿ ಹಿಂದೂಗಳನ್ನು 32 ವರ್ಷಗಳಿಂದ ನಿರಾಶ್ರಿತರಾಗಿ ಬದುಕಬೇಕಾಗುತ್ತಿದೆ. ಜರ್ಮನಿಯಲ್ಲಿ ಹಿಟ್ಲರ್‍ನೊಂದಿಗೆ `ಹಾಲೊಕಾಸ್ಟ'(ಹಳೆಯ ನರಮೇಧ) ಕೊನೆಗೊಂಡಿತು, ಆದರೆ ಕಾಶ್ಮೀರವು ಅನುಭವಿಸುವ ಭಯೋತ್ಪಾದನೆ ಇದು ಒಸಾಮಾ ಬಿನ್ ಲಾಡೆನ್ ಹತ್ಯೆಯ ನಂತರ ಮುಂದುವರೆದಿದೆ. ಹಾಗಾಗಿ ಈ ಚಲನಚಿತ್ರ ಕೇವಲ ದುಃಖ, ಅತ್ಯಾಚಾರ ಇತ್ಯಾದಿಗಳ ಮೇಲೆ ಬೆಳಕು ಚೆಲ್ಲುವುದಲ್ಲದೆ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ.