ಯುವತಿಯರ ವಿವಾಹದ ವಯಸ್ಸನ್ನು 18 ರಿಂದ 21  ವರ್ಷಕ್ಕೇರಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟದ ಸಮ್ಮತಿ

ಮತದಾರರ ಗುರುತಿನ ಚೀಟಿಯನ್ನು ಆಧಾರ ಕಾರ್ಡನೊಂದಿಗೆ ಜೋಡಿಸುವುದಕ್ಕೂ ಅನುಮೋದನೆ

ನವದೆಹಲಿ- ಕೇಂದ್ರೀಯ ಸಚಿವ ಸಂಪುಟ ಯುವಕ ಮತ್ತು ಯುವತಿಯರ ವಿವಾಹದ ಕನಿಷ್ಟ ವಯಸ್ಸು ಒಂದೇ ರೀತಿ ಅಂದರೆ 21 ವರ್ಷ ಮಾಡಲು ಅನುಮತಿ ನೀಡಿದೆ. ಇದರೊಂದಿಗೆ ಚುನಾವಣೆಯಲ್ಲಿ ಸುಧಾರಣೆ ತರುವ ವಿಧೇಯಕಕ್ಕೆ ಕೂಡ ಅನುಮತಿ ನೀಡಲಾಗಿದೆ. ಅದು ಸಂಸತ್ತಿನಲ್ಲಿ ಅನುಮೋದನೆಗೊಂಡ ಬಳಿಕ ಮತದಾನ ಗುರುತಿನ ಚೀಟಿಯನ್ನು ಆಧಾರ ಕಾರ್ಡನೊಂದಿಗೆ ಜೋಡಿಸುವುದರೊಂದಿಗೆ ಹೊಸ ಮತದಾರರಿಗೆ ನೋಂದಣಿಗಾಗಿ ಹೆಚ್ಚಿನ ಅವಕಾಶ ಸಿಗಲಿದೆ. ಈ ಎರಡೂ ವಿಧೇಯಕಗಳು ಸಂಸತ್ತಿನಲ್ಲಿ ಇದೇ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ.

ಯುವತಿಯರ ವಿವಾಹದ ಕನಿಷ್ಟ ವಯಸ್ಸನ್ನು ವಿಚಾರ ಮಾಡಲು  ಜಯಾ ಜೇಟ್ಲಿಯವರ ಅಧ್ಯಕ್ಷತೆಯಡಿಯಲ್ಲಿ  ಒಂದು ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿತ್ತು. 10 ಸದಸ್ಯರ ಸಮಿತಿಯು ದೇಶದ ವಿಚಾರವಂತ, ಕಾನೂನು ತಜ್ಞರು ಮತ್ತು ನಾಗರಿಕ ಸಂಘಟನೆಗಳ ಮುಖಂಡರೊಂದಿಗೆ ವಿಚಾರ ವಿನಿಮಯವನ್ನು ನಡೆಸಲಾಗಿತ್ತು. ಈ ವಿಷಯದ ವರದಿ ಕಳೆದ ವರ್ಷ ಡಿಸೆಂಬರನಲ್ಲಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಕಾರ್ಯಕಾರಿ ಸಮಿತಿಯು ವಿವಾಹದ ವಯಸ್ಸು 21 ವರ್ಷಕ್ಕೇರಿಸಲು 4 ಕಾನೂನುಗಳಲ್ಲಿ ಸುಧಾರಣೆ ಮಾಡಲು ಶಿಫಾರಸ್ಸು ಮಾಡಿದೆ.

ಚುನಾವಣೆಯ ಗುರುತಿನ ಚೀಟಿಯನ್ನು ಆಧಾರಕಾರ್ಡನೊಂದಿಗೆ  ಜೋಡಿಸಲಾಗುವುದು

ಚುನಾವಣೆ ಆಯೋಗವು ‘ಮತದಾರ ಕಾರ್ಡ’ ‘ಆಧಾರ ಕಾರ್ಡ’ನೊಂದಿಗೆ ಜೋಡಿಸುವ ಶಿಫಾರಸ್ಸು ಮಾಡಿದೆ. ಒಟ್ಟಾರೆ ಮತದಾರರ ಪಟ್ಟಿ ಪಾರದರ್ಶಕ ಮತ್ತು ತಪ್ಪುಗಳಿಲ್ಲದಂತೆ ಮಾಡಬಹುದು. ನಕಲಿ ಮತದಾರರ ಅಥವಾ ಒಂದಕ್ಕಿಂತ ಅಧಿಕ ಸ್ಥಳಗಳಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡುವ ಮತದಾರರನ್ನು ಕೂಡ ಇದರಿಂದ ಕೈಬಿಡಬಹುದಾಗಿದೆ. ಸ್ಥಳಾಂತರಿತ  ಕಾರ್ಮಿಕರಿಗೆ ಅವರ ವಾಸಿಸುವ ನಗರದಲ್ಲಿ  ಮತವನ್ನು ಹಾಕಲು  ಅವಕಾಶ ಒದಗಿಸುವ ಆಯೋಗದ ಇಚ್ಛೆಯು ಹೊಸ ವಿಧೇಯಕದಿಂದ ಸಾಕಾರಗೊಳ್ಳಲಿದೆ. 1 ಜನವರಿಯಿಂದ 18 ವರ್ಷಗಳು ಪೂರ್ಣಗೊಳ್ಳುವ ಯುವಕರಿಗೆ ವರ್ಷದಲ್ಲಿ 4 ಸಲ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಅವಕಾಶವನ್ನು ಈ ವಿಧೇಯಕದಲ್ಲಿ ನೀಡಲಾಗಿದೆ. ಸದ್ಯಕ್ಕೆ ಅವರಿಗೆ ವರ್ಷದಲ್ಲಿ ಒಮ್ಮೆ ಮಾತ್ರ ಈ ಅವಕಾಶ ಸಿಗುತ್ತಿದೆ.