ಯಾರಿಗೆ ಕಾಯಿದೆ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯಿದೆಯೋ ಅವರೇ ಈ ರೀತಿ ಕೃತ್ಯ ನಡೆಸುತ್ತಿದ್ದರೆ, ಆಗ ಸರ್ವಸಾಮಾನ್ಯ ಜನತೆಯು ಯಾರತ್ತ ನೋಡಬೇಕು ?- ಸಂಪಾದಕರು
ಲಖೀಂಪುರ ಖೀರಿ (ಉತ್ತರಪ್ರದೇಶ) – ಸ್ಥಳೀಯ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಕೇಂದ್ರೀಯ ಗೃಹರಾಜ್ಯಮಂತ್ರಿ ಅಜಯ ಮಿಶ್ರಾ ಉಪಾಖ್ಯ ಟೆನೀಯವರು ಅವರಿಗೆ ಲಖೀಂಪುರ ಖೀರಿಯ ಹಿಂಸಾಚಾರದ ಪ್ರಕರಣದಲ್ಲಿ ಪ್ರಶ್ನೆ ವಿಚಾರಿಸಿದ ಪತ್ರಕರ್ತರ ಕಾಲರ್ ಹಿಡಿದುಕೊಂಡು ಹೊಡೆದಾಟ ಮಾಡಿದರು, ಹಾಗೂ ಅಲ್ಲಿ ಉಪಸ್ಥಿತ ಪ್ರಸಾರಮಾಧ್ಯಮಗಳ ಪ್ರತಿನಿಧಿಗಳನ್ನು ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದರು. ಈ ಹಿಂಸಾಚಾರದಲ್ಲಿ ೮ ಜನರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಅಜಯ ಮಿಶ್ರಾರವರ ಮಗ ಆಶೀಷ ಮಿಶ್ರಾರವರನ್ನು ಬಂಧಿಸಲಾಗಿತ್ತು. ಈ ಹಿಂಸಾಚಾರ ಪ್ರಕರಣದ ತನಿಖೆಯನ್ನು ನಡೆಸಲು ಪೊಲೀಸರು ವಿಶೇಷ ತನಿಖಾ ದಳವನ್ನು ನೇಮಿಸಿದ್ದು ಈ ವಿಷಯದಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದ್ದರು.
ಲಖೀಂಪುರ ಘಟನೆ: ಪತ್ರಕರ್ತನ ಜೊತೆ ಅಸಭ್ಯವಾಗಿ ಮಾತನಾಡಿದ ಅಜಯ್ ಮಿಶ್ರಾ#Ajaymishra #Journalists #Lakhimpurkheri #ಒನ್ಇಂಡಿಯಾಕನ್ನಡಸುದ್ದಿhttps://t.co/3cIb3aYv2y
— oneindiakannada (@OneindiaKannada) December 15, 2021
ಅಜಯ ಮಿಶ್ರಾರವರನ್ನು ಪತ್ರಕರ್ತರು, ‘ಪೊಲೀಸರ ಹೊಸ ವರದಿಯಲ್ಲಿ ನಿಮ್ಮ ಮಗ ಆಶೀಷರವರ ವಿರುದ್ಧ ಅಪರಾಧ ದಾಖಲಿಸುವಂತೆ ಶಿಫಾರಸ್ಸು ಮಾಡಲಾಗಿದೆ’, ಎಂದು ಕೇಳುತ್ತಿರುವಾಗ ಅಜಯ ಮಿಶ್ರಾ ‘ನೀವು ಈ ರೀತಿ ಮೂರ್ಖರಂತೆ ಪ್ರಶ್ನಿಸಬೇಡಿ. ನಿಮ್ಮ ತಲೆ ಕೆಟ್ಟಿದೆಯೇ?’, ಎಂದು ಕೂಗಾಡಿದರು. ಅದೇ ರೀತಿ ಪತ್ರಕರ್ತರ ಕೈಯ್ಯಲ್ಲಿದ್ದ ಮೈಕ್ ಕಸಿದುಕೊಂಡು ‘ಮೈಕ್ ಬಂದ್ ಮಾಡು’, ಎಂದು ಉದ್ಧಟತನದಿಂದ ನುಡಿದರು. ಆಗ ಅವರು ಪತ್ರಕರ್ತರನ್ನು ‘ಕಳ್ಳ’ರೆಂದು ಕರೆದರು.
ಏನಿದು ಲಖೀಂಪುರ ಖೀರಿ ಪ್ರಕರಣ ?
ಲಖೀಂಪುರ ಖೀರಿಯಲ್ಲಿ ರೈತರು ಮೂರು ಕೃಷಿ ಕಾಯಿದೆಗಳ ವಿರುದ್ಧ ಆಂದೋಲನ ನಡೆಸುತ್ತಿದ್ದರು. ಆ ಸ್ಥಳದಲ್ಲಿ ಕೇಂದ್ರೀಯ ಗೃಹ ರಾಜ್ಯಮಂತ್ರಿ ಅಜಯ ಮಿಶ್ರಾರವರು ಕಾರ್ಯಕ್ರಮನಿಮಿತ್ತ ಬರುವುದಾಗಿ ಮಾಹಿತಿಯಿಂದ ರೈತರು ಅವರ ಮುಂದೆ ಪ್ರದರ್ಶನೆ ನಡೆಸಲು ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಮಹಿಂದ್ರಾ ಥಾರ ವಾಹನದ ಕೆಳಗೆ ೪ ರೈತರು ಹಾಗೂ ಪತ್ರಕರ್ತರೊಬ್ಬರು ಹೋದರು. ಆ ವಾಹನವು ಅಜಯ ಮಿಶ್ರಾರವರ ಮಗ ಅಶೀಷ ಮಿಶ್ರಾರವರದ್ದಾಗಿತ್ತು ಹಾಗೂ ಅವರೂ ಕೂಡ ವಾಹನದಲ್ಲಿದ್ದರು. ಈ ಘಟನೆಯಿಂದ ಸಂತಪ್ತ ರೈತರು ಮಿಶ್ರಾರವರ ವಾಹನಗಳನ್ನು ನಿಲ್ಲಿಸಿ ಕೆಲವು ಜನರ ಮೇಲೆ ಅಮಾನವೀಯವಾಗಿ ಹೊಡೆದಾಟ ನಡೆಸಿದರು. ಈ ಪ್ರಕರಣದಲ್ಲಿ ೩ ಜನರು ಮೃತಪಟ್ಟಿದ್ದಾರೆ.