ರಷ್ಯಾ ಯುಕ್ರೇನ್ ಮೇಲೆ ದಾಳಿ ಮಾಡಿದರೆ ರಷ್ಯಾದ ಅರ್ಥವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಆಗುವುದು ! – ಅಮೆರಿಕ

(ಎಡದಿಂದ)ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆ ಮತ್ತು ರಷ್ಯಾದ ರಾಷ್ಟ್ರಪತಿ ಪುಟಿನ್

ವಾಷಿಂಗ್ಟನ(ಅಮೇರಿಕಾ) – ರಷ್ಯಾವೂ ಒಂದು ವೇಳೆ ಯುಕ್ರೇನ ಮೇಲೆ ದಾಳಿ ಮಾಡಿದರೆ ಅದರ ಗಂಭೀರ ಪರಿಣಾಮ ರಷ್ಯಾದ ಅರ್ಥವ್ಯವಸ್ಥೆಯ ಮೇಲೆ ಆಗುವುದು, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ ಇವರು ರಷ್ಯಾದ ರಾಷ್ಟ್ರಪತಿ ಪುಟಿನ್ ಇವರಿಗೆ ಎಚ್ಚರಿಕೆ ನೀಡಿದ್ದಾರೆ. ಬಾಯಡೆನ ಇವರು ಪತ್ರಕರ್ತರ ಜೊತೆಗೆ ಮಾತನಾಡುವಾಗ ಈ ಮಾಹಿತಿ ನೀಡಿದರು. ರಷ್ಯಾ ಯುಕ್ರೇನ್ ಮೇಲಿನ ದಾಳಿಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲವಾದರೂ ಯುಕ್ರೇನ್‌ನಲ್ಲಿ ಅಮೇರಿಕಾದ ಭೂಸೇನೆ ಕಳಿಸುವ ಸಾಧ್ಯತೆಯನ್ನು ಬಾಯಡೆನ ಇವರು ಹೇಳಿದರು.