|
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಕೆಲವು ದಿನಗಳ ಹಿಂದೆ ಧರ್ಮನಿಂದನೆಯ ಆರೋಪದ ಮೇರೆಗೆ ಶ್ರೀಲಂಕಾದ ನಾಗರಿಕ ಪ್ರಿಯಾಂಥಾ ಕುಮಾರ ಇವರನ್ನು ಮತಾಂಧರ ಗುಂಪು ಕೈಕಾಲು ಮುರಿದು ಜೀವಂತವಾಗಿ ಸುಟ್ಟಿದ್ದರು. ಈಗ ಧರ್ಮನಿಂದನೆ ಮಾಡುವವರನ್ನು ಯಾವ ರೀತಿ ಕೊಲ್ಲಬೇಕು, ಎಂಬ ತರಬೇತಿಯನ್ನು ಒಂದು ಮಸೀದಿಯಲ್ಲಿ ಹೆಣ್ಣುಮಕ್ಕಳಿಗೆ ನೀಡಲಾಗುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರವಾಗುತ್ತಿದೆ. ಪಾಕಿಸ್ತಾನದ ಪತ್ರಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ ಗುಲ ಬುಖಾರೀಯವರು ಆ ವಿಡಿಯೋಅನ್ನು ಟ್ವಿಟ್ ಮಾಡಿದ್ದಾರೆ.
Pak के मस्जिद में लड़कियों को दी जा रही ‘सिर कलम करने’ की ट्रेनिंग, इस्लाम के अपमान पर ‘बदला लेने’ का तरीका: Video आया सामने#Pakistan #Mosquehttps://t.co/kP0VdULmmO
— ऑपइंडिया (@OpIndia_in) December 11, 2021
ಗುಲ ಬುಖಾರೀಯವರು, ‘ಇಸ್ಲಾಮಾಬಾದನ ಲಾಲ ಮಸೀದಿಯ ವಿದ್ಯಾರ್ಥಿನಿಯರು ಧರ್ಮನಿಂದನೆ ಮಾಡುವ ವ್ಯಕ್ತಿಯನ್ನು ಕೊಲ್ಲುವ ಅಭ್ಯಾಸ ಮಾಡುತ್ತಿದ್ದಾರೆ.’ ಎಂದು ಹೇಳಿದರು. ಈ ವಿಡಿಯೋದಲ್ಲಿ ನೂರಾರು ಹುಡುಗಿಯರು ಹಾಗೂ ಮಹಿಳೆಯರು ಧಾರ್ಮಿಕ ಬಟ್ಟೆ ತೊಟ್ಟು ನಿಂತಿರುವುದು ಕಾಣಿಸುತ್ತದೆ. ಹುಡುಗಿಯರ ಮುಂದೆ ಮಹಿಳೆಯರು ಖಡ್ಗ ಹಿಡಿದುಕೊಂಡು ಬಂದು ಪುತ್ಥಳಿಯ ಶಿರಚ್ಛೇದ ಮಾಡುತ್ತಿದ್ದಾರೆ.