ಬಾಂಗ್ಲಾದೇಶಿ ನುಸುಳುಕೋರರು : ಭಾರತೀಯ ಭದ್ರತೆಗೆ ಅಪಾಯಕಾರಿ !

ಬಾಂಗ್ಲಾದೇಶಿ ನುಸುಳುಕೋರರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದು ಭಾರತದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಆವಶ್ಯಕ

೧. ಮತಪೆಟ್ಟಿಗೆಯ ರಾಜಕಾರಣಕ್ಕಾಗಿ ಬಾಂಗ್ಲಾದೇಶಿಗಳಿಗೆ ಭಾರತದಲ್ಲಿ ನುಸುಳಲು ಪ್ರೋತ್ಸಾಹಿಸುವ ವಿವಿಧ ಅಧಿಕಾರಾರೂಢರು

‘ಕೆಲವು ದಿನಗಳ ಹಿಂದೆ ಭಾರತ ಸರಕಾರದ ‘ಎನ್.ಆರ್.ಸಿ.’ಯಿಂದ (ನ್ಯಾಶನಲ್ ರಿಜಿಸ್ಟರ್ ಆಫ್ ಸಿಟಿಝನ್‌ ಶಿಪ್-ರಾಷ್ಟ್ರೀಯ ಪೌರತ್ವ ನೋಂದಣಿಗನುಸಾರ) ಅಸ್ಸಾಂನಲ್ಲಿ ಬಾಂಗ್ಲಾದೇಶಿಗಳ ಜನಗಣತಿಯಾಯಿತು. ‘ಅಸ್ಸಾಂನ ಎರಡುವರೆ ಕೋಟಿ ಜನಸಂಖ್ಯೆಯಲ್ಲಿ ೪೦ ಲಕ್ಷಕ್ಕಿಂತಲೂ ಹೆಚ್ಚು ಅನಧಿಕೃತ ಬಾಂಗ್ಲಾದೇಶಿಗಳಿರಬಹುದು’, ಎಂದು ತಿಳಿಯಿತು. ಭಾರತದ ಅಂದಿನ ಗವರ್ನರ್ ಫೀಲ್ಡ್ ಮಾರ್ಶಲ್ ವೆವೆಲ ಇವರು ೧೯೪೬ ರಲ್ಲಿ ಅವರ ‘ವೈಸ್‌ರಾಯ ಜರ್ನಲ್’ ಈ ಪುಸ್ತಕದಲ್ಲಿ ‘ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶದ) ಅಂದಿನ ಪ್ರಧಾನಮಂತ್ರಿಗಳು ತಮ್ಮ ದೇಶದ ಮುಸಲ್ಮಾನರನ್ನು ಅಸ್ಸಾಂಗೆ ಕಳುಹಿಸಿ ಅಸ್ಸಾಂಅನ್ನು ಪಾಕಿಸ್ತಾನವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ’, ಎಂದು ನಮೂದಿಸಿದ್ದರು. ಆಗ ಭಾರತದ ನೇತೃತ್ವವು ಸಾಕಷ್ಟು ಗಮನ ಹರಿಸಲಿಲ್ಲ; ಆದರೆ ಅಂದಿನ ಅಸ್ಸಾಂನ ರಾಷ್ಟ್ರಭಕ್ತ ಮುಖ್ಯಮಂತ್ರಿ ಗೋಪಿನಾಥ ಬೋರದೊಲೋಯಿ ಇವರು ಅಸ್ಸಾಂನ್ನು ಪಾಕಿಸ್ತಾನಕ್ಕೆ ಹೋಗದಂತೆ ತಡೆದರು. ಬ್ಯಾರಿಸ್ಟರ್ ಜಿನ್ನಾರ ಅಂದಿನ ಕಾರ್ಯದರ್ಶಿ ಮೋಯಿನುಲ ಹಕ್ ಚೌಧರಿ ಇವರು ಭಾರತದ ವಿಭಜನೆಯಾದ ನಂತರ ಜಿನ್ನಾರೊಂದಿಗೆ ಪಾಕಿಸ್ತಾನಕ್ಕೆ ಹೋಗದೆ ಭಾರತದಲ್ಲಿಯೇ ಉಳಿದರು. ಆಗ ಅವರು ‘ನಾನು ಅಸ್ಸಾಂಅನ್ನು ಬೆಳ್ಳಿಯ ಹರಿವಾಣದಲ್ಲಿ ತಂದು ಕೊಡುವೆನು’, ಎಂದು ಹೇಳಿದ್ದರು. ಅನಂತರ ಅಸ್ಸಾಂನಲ್ಲಿ ದೊಡ್ಡ ಪ್ರಮಾಣದಲ್ಲಿ ನುಸುಳುವಿಕೆ ನಡೆಯಿತು. ಮತಪೆಟ್ಟಿಗೆಯ ರಾಜಕಾರಣಕ್ಕಾಗಿ ಈ ಬಾಂಗ್ಲಾದೇಶಿ ನುಸುಳುವಿಕೆಯನ್ನು ವಿವಿಧ ರಾಜಕಾರಣಿಗಳು ಪ್ರೋತ್ಸಾಹಿಸಿದರು. ಅದರಲ್ಲಿ ಕೇವಲ ಗೋಪಿನಾಥ ಬೋರದೊಲೋಯಿ, ವಿಮಲಪ್ರಸಾದ ಶಾರಿಯಾ ಮತ್ತು ವಿಷ್ಣುಗೋಪಾಲ ಭೇದಿ ಈ ಮುಖ್ಯಮಂತ್ರಿಗಳು ನುಸುಳುಕೋರರನ್ನು ತಡೆಗಟ್ಟಲು ಪ್ರಯತ್ನಿಸಿದರು. ಅಸ್ಸಾಂನ ಅಂದಿನ ರಾಜ್ಯಪಾಲ ವಿ. ಕೆ. ನೆಹರು ಇವರು ನೆಹರು-ಗಾಂಧಿ ಕುಟುಂಬದ ಮಹತ್ವದ ಸದಸ್ಯರಾಗಿದ್ದರು. ಅವರು ಒಂದು ಪುಸ್ತಕದಲ್ಲಿ ಮುಂದಿನಂತೆ ಹೇಳಿದ್ದಾರೆ, ಬ್ಯಾರಿಸ್ಟರ್ ಜಿನ್ನಾರ ಕಾರ್ಯದರ್ಶಿ ಮೊಯಿನಲ್ ಹಕ್ ಚೌಧರಿ (ಇವರು ವಿಭಜನೆಯ ನಂತರ ಭಾರತದಲ್ಲಿಯೆ ಉಳಿದರು) ಮತ್ತು ಫಕ್ರುದ್ದೀನ ಅಲಿ ಅಹಮ್ಮದ ಇವರು ನುಸುಳುಕೋರರಿಗೆ ಅಸ್ಸಾಂನಲ್ಲಿ ನೆಲೆಸಲು ಸಹಾಯ ಮಾಡಿದರು. ನುಸುಳುಕೋರರ ವಿರುದ್ದ ಅಭಿಯಾನ ನಡೆಯುವಾಗ ಈ ಜನರು ಸರಕಾರಕ್ಕೆ ‘ಒಂದು ವೇಳೆ ನೀವು ನುಸುಳುಕೋರರ ವಿರುದ್ಧ ಕ್ರಮ ತೆಗೆದುಕೊಂಡರೆ, ನಮಗೆ ಇಷ್ಟವಾಗಲಿಕ್ಕಿಲ್ಲ ಹಾಗೂ ಮುಂಬರುವ ಚುನಾವಣೆಯಲ್ಲಿ ನೀವು  ಸೋಲನ್ನು ಎದುರಿಸಬೇಕಾದೀತು’ ಎಂದು ಬೆದರಿಸಿದರು. ಹಾಗಾಗಿ ನುಸುಳುಕೋರರ ವಿರುದ್ಧದ ಕ್ರಮವನ್ನು ಕೈಬಿಡಲಾಯಿತು.

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೨. ಅಸ್ಸಾಂನ ವಿವಿಧ ರಾಜ್ಯಪಾಲರು ಬಾಂಗ್ಲಾದೇಶಿ ನುಸುಳುಕೋರರ ವಿಷಯದಲ್ಲಿ ಪದೇ ಪದೇ ತಿಳಿಸಿದರೂ ಅದನ್ನು ನಿರ್ಲಕ್ಷಿಸಿದ ಅಂದಿನ ಕೇಂದ್ರ ಸರಕಾರ

ಮುಂದಿನ ೧೦ ವರ್ಷ ಲೆಫ್ಟಿನೆಂಟ್ ಜನರಲ್ ಎಸ್. ಕೆ. ಸಿನ್ಹಾ  ಇವರು ಅಸ್ಸಾಂನ ರಾಜ್ಯಪಾಲರಾಗಿದ್ದರು. ಅವರು ಬಾಂಗ್ಲಾದೇಶಿ ನುಸುಳುವಿಕೆ ವಿಷಯದಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಷ್ಟ್ರೀಯ ಭದ್ರತಾ ಸಲಹೆಗಾರ, ಗೃಹಸಚಿವಾಲಯ, ವಿದೇಶಾಂಗ ಸಚಿವಾಲಯ ಮುಂತಾದವರಿಗೆ ಒಂದು ವರದಿಯನ್ನು ಕಳುಹಿಸಿದರು; ಆದರೆ ಅದರ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ತದ್ವಿರುದ್ಧ ಕೆಲವರು ಸಿನ್ಹಾ ಇವರ ವಿರುದ್ಧವೇ ಸಂಚು ರೂಪಿಸಲು ಪ್ರಯತ್ನಿಸಿದರು. ಅನಂತರ ಲೆಫ್ಟಿನೆಂಟ್ ಜನರಲ್ ಅಜಯ ಸಿಂಹ ಇವರು ಅಸ್ಸಾಂನ ರಾಜ್ಯಪಾಲರಾದರು. ಅವರು ಕೂಡ ಈ ನುಸುಳುಕೋರರ ವಿರುದ್ಧ ಸರಕಾರಕ್ಕೆ ಮಾಹಿತಿ ನೀಡಿದರು. ಲೆಫ್ಟಿನೆಂಟ್ ಜನರಲ್ ಜಮೀರ್ ಮಹಮೂದ ಇವರು ಭಾರತದ ‘ಈಸ್ಟರ್ನ್ ಕಮಾಂಡೋ’ದ ಮುಖ್ಯಸ್ಥರಾಗಿದ್ದರು. ಅವರು ಅಂದಿನ ಮುಖ್ಯಮಂತ್ರಿ ಹಿತೇಶ್ವರ ಸೈಕಿಯಾ ಮತ್ತು ಬಂಗಾಲದ ಅಂದಿನ ಮುಖ್ಯಮಂತ್ರಿ ಜ್ಯೋತಿ ಬಸೂ ಇವರಿಗೆ ವರದಿಯನ್ನು ಕಳುಹಿಸಿದರು. ಅದರಲ್ಲಿ ಅವರು “ಅಸ್ಸಾಂ ಕಾಶ್ಮೀರ ಆಗುತ್ತಿದೆ. ಅಷ್ಟೇ ಅಲ್ಲ, ಸಿಲಿಗುರಿ ಕ್ವಾರಿಡೋರ್(ಇದು ಈಶಾನ್ಯ ಭಾರತವನ್ನು ಇತರ ದೇಶಗಳೊಂದಿಗೆ ಜೋಡಿಸುತ್ತದೆ)ನಲ್ಲಿ ನುಸುಳುಕೋರರ ಸಂಖ್ಯೆ ಶೇ. ೯೦ ಕ್ಕೆ ತಲುಪಿದೆ, ಆದ್ದರಿಂದ ಅವರು ಈಶಾನ್ಯ ಭಾರತವನ್ನು ಭಾರತದಿಂದ ಶಾಶ್ವತವಾಗಿ ಬೇರ್ಪಡಿಸಬಹುದು”, ಎಂದು ಸ್ಪಷ್ಟವಾಗಿ ಹೇಳಿದರು. ಈ ವರದಿಗೂ ಸರಕಾರ ಕಿವಿಗೊಡುವ ಗೋಜಿಗೂ ಹೋಗಲಿಲ್ಲ. ಅನಂತರ ಅಸ್ಸಾಂನಲ್ಲಿ ವಿವಿಧ ರೀತಿಯ ಆಂದೋಲನಗಳು ಆರಂಭವಾದವು. ಅದರ ಪರಿಣಾಮದಿಂದ ೧೯೮೬ ರಲ್ಲಿ ರಾಜೀವ ಗಾಂಧಿ ಮತ್ತು ‘ಅಸ್ಸಾಂ ಸ್ಟುಡೆಂಟ್ ಯುನಿಯನ್’ ಇವರ ನಡುವೆ ಒಪ್ಪಂದವಾಯಿತು. ಅದರಲ್ಲಿ ಎಲ್ಲ ನುಸುಳುಕೋರರನ್ನು ಹಿಂದಕ್ಕೆ ಕಳುಹಿಸುವ ನಿರ್ಣಯವಾಯಿತು; ಆದರೆ ಆ ವಿಷಯದಲ್ಲಿ ಮುಂದೆ ಯಾವುದೇ ಕಾರ್ಯಾಚರಣೆಯಾಗಲಿಲ್ಲ.

೩. ಸರ್ವೋಚ್ಚ ನ್ಯಾಯಾಲಯವು ಬಾಂಗ್ಲಾದೇಶಿ ನುಸುಳುಕೋರರನ್ನು ತಡೆಗಟ್ಟುವ ವಿಷಯದಲ್ಲಿ ಕೇಂದ್ರಕ್ಕೆ ಆದೇಶವನ್ನು ನೀಡುವುದು; ಆದರೆ ಅಂದಿನ ಸರಕಾರ ಅದರತ್ತ ನಿರ್ಲಕ್ಷ ಮಾಡುವುದು ಮತ್ತು ಭಾಜಪದ ಸೋನೋವಾಲ ಸರಕಾರ ನುಸುಳುಕೋರರ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸುವುದು

ಸರ್ವೋಚ್ಚ ನ್ಯಾಯಾಲಯ ಮತ್ತು ವಿವಿಧ ಉಚ್ಚ ನ್ಯಾಯಾಲಯಗಳು ಬಾಂಗ್ಲಾದೇಶಿ ನುಸುಳುಕೋರರನ್ನು ತಡೆಗಟ್ಟುವ ವಿಷಯದಲ್ಲಿ ಆಡಳಿತದವರಿಗೆ ಅನೇಕ ಬಾರಿ ಸೂಚನೆ ನೀಡಿದವು; ಆದರೆ ಅವರು ಏನೂ ಮಾಡಲಿಲ್ಲ. ೨೦೦೬ ರಲ್ಲಿ ಸರ್ವೋಚ್ಚ ನ್ಯಾಯಾಲಯವು ನುಸುಳುಕೋರರ ವಿರುದ್ಧ ತಕ್ಷಣ ಕಾರ್ಯಾಚರಣೆ ಮಾಡಬೇಕೆಂದು ಹೇಳಿ ‘ಎನ್.ಆರ್.ಸಿ ಸಿದ್ಧಪಡಿಸಿ ನುಸುಳುಕೋರರನ್ನು ಪತ್ತೆ ಹಚ್ಚಲು ಆದೇಶ ನೀಡಿತು. ೨೦೦೬ ರಿಂದ ೨೦೧೪ ರ ವರೆಗೆ ಅದಕ್ಕೆ ಸಂಬಂಧಿಸಿ ಯಾವುದೇ ಕಾರ್ಯಾಚರಣೆ ಆಗಲಿಲ್ಲ. ಇದರ ಹಿಂದೆ ಮತಪೆಟ್ಟಿಗೆಯ ರಾಜಕಾರಣವೇ ಮುಖ್ಯ ಕಾರಣವಾಗಿತ್ತು. ಕೊನೆಗೆ ೨೦೧೪ ರಲ್ಲಿ ಅಸ್ಸಾಂನಲ್ಲಿ ಭಾಜಪದ ಸರಕಾರ ಬಂತು. ಅವರು ಈ ವಿಷಯದಲ್ಲಿ ಕಾರ್ಯಾಚರಿಸಲು ಪ್ರಾರಂಭಿಸಿದರು. ಇತ್ತೀಚೆಗಷ್ಟೆ ಸಂಸತ್ತಿನಲ್ಲಿ ‘ಎನ್.ಆರ್.ಸಿಯ ಮಸೂದೆಯನ್ನು ಮಂಡಿಸಲಾಗಿದೆ. ಅದರ ಮೂಲಕ ಬಾಂಗ್ಲಾದೇಶಿ ನುಸುಳುಕೋರರನ್ನು ಅವರ ದೇಶಕ್ಕೆ ಕಳುಹಿಸಲು ಸಾಧ್ಯವಾಗ ಬಹುದು. ಅಷ್ಟು ಮಾತ್ರವಲ್ಲ, ಈ ನುಸುಳುಕೋರರನ್ನು ತಡೆಯಲು ಭಾರತ ಬಾಂಗ್ಲಾದೇಶಕ್ಕೆ ಅಪಾರ ಪ್ರಮಾಣದಲ್ಲಿ ಆರ್ಥಿಕ ಸಹಾಯ ಮಾಡುತ್ತಿದೆ. ಆದ್ದರಿಂದ ಅವರಿಗೆ ಅವರ ದೇಶದಲ್ಲಿಯೇ ಉದ್ಯೋಗ ಸಿಗುವುದು ಹಾಗೂ ನುಸುಳುವಿಕೆಯು ಕಡಿಮೆಯಾಗಬಹುದು.

೪. ಕೋಟಿಗಟ್ಟಲೆ ಬಾಂಗ್ಲಾದೇಶಿ ನುಸುಳುಕೋರರಿಗೆ ಬಂಗಾಲದಿಂದ ಭಾರತಕ್ಕೆ ಪ್ರವೇಶ ನೀಡುವುದು ಹಾಗೂ ದಲಾಲರ ಮೂಲಕ ನುಸುಳುಕೋರರಿಗೆ ಎಲ್ಲ ಸೌಲಭ್ಯಗಳನ್ನು ಪೂರೈಸುವುದು

ಬಂಗಾಲದ ೧೨-೧೩ ಕೋಟಿ ಜನಸಂಖ್ಯೆಯಲ್ಲಿ ಶೇ. ೨೫ ರಷ್ಟು ಬಾಂಗ್ಲಾದೇಶಿ ನುಸುಳುಕೋರರಿದ್ದಾರೆ. ಈ ಸಂಖ್ಯೆ ೨೦೧೦ ರದ್ದಾಗಿದೆ. ಈಗ ಈ ಪ್ರಮಾಣವು ಶೇ. ೨೯-೩೦ ರಷ್ಟು ಆಗಿರಬಹುದು. ಇಂದು ಅಸ್ಸಾಂನಲ್ಲಿ ನುಸುಳುಕೋರರಿಗೆ ಪ್ರವೇಶ ಸಿಗುವುದಿಲ್ಲ; ಆದರೆ ಭಾರತ ಮತ್ತು ಬಾಂಗ್ಲಾದೇಶದ ಗಡಿಯ ಶೇ. ೫೦ ರಷ್ಟು ಭಾಗ ಬಂಗಾಲ ರಾಜ್ಯಕ್ಕೆ ಹೊಂದಿಕೊಂಡಿದ್ದರಿಂದ ಅಲ್ಲಿಂದ ದೊಡ್ಡ ಪ್ರಮಾಣದಲ್ಲಿ ಅನಧಿಕೃತ ನುಸುಳುವಿಕೆ ಆಗುತ್ತದೆ. ಬಂಗಾಲಕ್ಕೆ ಬರಲು ಅವರಿಗೆ ಬಾಂಗ್ಲಾದೇಶದ ಅನೇಕ ಸಂಸ್ಥೆಗಳು ಸಹಾಯ ಮಾಡುತ್ತವೆ. ಅವರಿಂದ ನುಸುಳುಕೋರರಿಗೆ ತರಬೇತಿ ನೀಡಿ ಭಾರತಕ್ಕೆ ಕಳುಹಿಸಲಾಗುತ್ತದೆ. ದಲಾಲರ ಮೂಲಕ ಸರಕಾರಿ ಕಾಗದಪತ್ರಗಳನ್ನು ದೊರಕಿಸಿಕೊಡಲಾಗುತ್ತದೆ. ಭಾರತದಲ್ಲಿರುವ ಸಂಬಂಧಿತ ರಾಜ್ಯಗಳ ಭಾಷೆಯನ್ನೂ ಅವರಿಗೆ ಕಲಿಸಲಾಗುತ್ತದೆ. ‘ಪೊಲೀಸರು ಹಿಡಿದರೆ, ಹೇಗೆ ಉತ್ತರ ಕೊಡಬೇಕು, ಎಂಬುದನ್ನೂ ಅವರಿಗೆ ಕಲಿಸಲಾಗುತ್ತದೆ. ಅದಕ್ಕೂ ಮುಂದಿನ ತರಬೇತಿಯನ್ನು ಅವರಿಗೆ ಬಂಗಾಲದಲ್ಲಿ ಕೊಡಲಾಗುತ್ತದೆ. ತರಬೇತಿಯ ನಂತರ ಅವರನ್ನು ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶ, ಉತ್ತರಾಖಂಡ, ಕೇರಳ, ಆಂಧ್ರಪ್ರದೇಶ ಇತ್ಯಾದಿ ರಾಜ್ಯಗಳಿಗೆ ಸಾಗಿಸಲಾಗುತ್ತದೆ. ಮಹಾರಾಷ್ಟ್ರಕ್ಕೆ ಬಂದ ನಂತರ ಅಲ್ಲಿಂದ ಮುಂದೆ ಎಲ್ಲಿಗೆ ಹೋಗಬೇಕು, ಎಂಬುದನ್ನು ದಲಾಲರು ಹೇಳುತ್ತಾರೆ. ಅಲ್ಲಿ ಅನೇಕ ಸ್ಥಳೀಯ ಸಂಸ್ಥೆಗಳು ಅವರ ನಿವಾಸ ಹಾಗೂ ಅವರಿಗೆ ಉದ್ಯೋಗ ವನ್ನು ದೊರಕಿಸಿ ಕೊಡಲು ಸಹಾಯ ಮಾಡುತ್ತವೆ.

೫. ಬಾಂಗ್ಲಾದೇಶಿ ನುಸುಳುಕೋರರಿಂದ ಭಾರತದ ಜನಜೀವನದ ಮೇಲಾಗಿರುವ ಪರಿಣಾಮ

ನೌಕರಿ ಮತ್ತು ಉದ್ಯೋಗದಲ್ಲಿ ಬಾಂಗ್ಲಾದೇಶಿಗಳು ಅಪಾರವಾಗಿ ನುಸುಳಿದ್ದಾರೆ. ಅವರು ಸ್ವಲ್ಪ ಹಣಕ್ಕೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಭಾರತೀಯರ ಜೀವನನಿರ್ವಹಣೆ ಮೇಲೆ ಭಾರಿ ಪರಿಣಾಮವಾಗಿದೆ. ಭಾರತೀಯ ಯುವಕರ ಉದ್ಯೋಗಾವಕಾಶವು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಬಡತನರೇಖೆಯ ಕೆಳಗಿನ ಜನರಿಗಾಗಿ ಕೇಂದ್ರ ಸರಕಾರ ವಿವಿಧ ಸೌಲಭ್ಯಗಳನ್ನು ಕೊಡುತ್ತದೆ. ನುಸುಳುಕೋರರು ಅವೆಲ್ಲವುಗಳ ಲಾಭವನ್ನು ಪಡೆಯುತ್ತಾರೆ.

೬. ಅನಧಿಕೃತ ವ್ಯವಸಾಯಗಳಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಂದ ದೊಡ್ಡ ಪ್ರಮಾಣದಲ್ಲಿ ಸಹಭಾಗ

ಭಾರತದ ನಕಲಿ ನೋಟುಗಳ ವ್ಯವಹಾರದಲ್ಲಿ ಬಂಧಿಸಲ್ಪಟ್ಟ ಜನರಲ್ಲಿ ಹೆಚ್ಚಿನವರು ಬಾಂಗ್ಲಾದೇಶಿಗಳಾಗಿದ್ದಾರೆ. ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆ, ಅವುಗಳ ಮಾರಾಟ, ದರೋಡೆ, ಕಲ್ಲು ತೂರಾಟದಲ್ಲಿ ತೊಡಗುವುದು, ದೇಶವಿರೋಧಿ ಆಂದೋಲನಗಳಲ್ಲಿ ಭಾಗವಹಿಸುವುದು, ಅವಶ್ಯಕತೆಯುಂಟಾದರೆ ಉಗ್ರವಾದಿ ಕೃತ್ಯಗಳನ್ನು ಮಾಡುವುದು ಇವುಗಳಂತಹ ಎಲ್ಲ ಅನಧಿಕೃತ ಚಟುವಟಿಕೆಗಳಲ್ಲಿ ಈ ನುಸುಳುಕೋರರು ಭಾಗವಹಿಸುತ್ತಾರೆ. ‘ಜಮಾತ್-ಎ-ಇಸ್ಲಾಮೀ ಬಾಂಗ್ಲಾದೇಶಿ’ ಈ ಉಗ್ರವಾದಿ ಸಂಘಟನೆಯಲ್ಲಿ ಬಾಂಗ್ಲಾದೇಶಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹೇಗೆ ಅಸ್ಸಾಂನಲ್ಲಿ ‘ಎನ್.ಆರ್.ಸಿ.’ಯ ಮೂಲಕ ನುಸುಳುಕೋರರನ್ನು ಗುರುತಿಸಲಾಯಿತೋ, ಅದೇ ರೀತಿ ಬಂಗಾಲ, ಈಶಾನ್ಯ ಭಾರತದ ರಾಜ್ಯಗಳು, ಮಹಾರಾಷ್ಟ್ರ ಮತ್ತು ಇತರ ಸ್ಥಳಗಳಲ್ಲಿಯೂ ಅಭಿಯಾನವನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ. ‘ಭಾರತದಲ್ಲಿ ಸುಮಾರು ೫-೬ ಕೋಟಿಗಳಷ್ಟು ಬಾಂಗ್ಲಾದೇಶಿಯರು ಇರಬಹುದು’, ಎಂದು ಅಂದಾಜು ಮಾಡಲಾಗಿದೆ. ಸರಕಾರಿ ಗಣನೆಗನುಸಾರ ಅವರ ಜನಸಂಖ್ಯೆ ಎರಡುವರೆಯಿಂದ ಮೂರು ಕೋಟಿಯಷ್ಟಿರಬಹುದು. ವಾಸ್ತವದಲ್ಲಿ ನಿರ್ದಿಷ್ಟ ಸಂಖ್ಯೆಯು ‘ಎನ್.ಆರ್.ಸಿ’ಯ ಮೂಲಕ ಪರಿಶೀಲನೆ ಮಾಡಿದರೆ ತಿಳಿಯಬಹುದು.

೭. ಬಾಂಗ್ಲಾದೇಶಿ ನುಸುಳುಕೋರರನ್ನು ತಡೆಗಟ್ಟುವ ರಾಷ್ಟ್ರ ಕಾರ್ಯದಲ್ಲಿ ಜನಸಾಮಾನ್ಯರು ಕೈಜೋಡಿಸಬೇಕು !

ಈ ಬಗ್ಗೆ ಜನಸಾಮಾನ್ಯರು ಪೊಲೀಸರಿಗೆ ಸಹಕರಿಸಬೇಕು. ತಮ್ಮ ಪರಿಸರದಲ್ಲಿರುವ ನುಸುಳುಕೋರರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡಬೇಕು. ಸಂಶಯಕ್ಕೊಳಗಾದವರಲ್ಲಿ ಬಂಗಾಲ ಮತ್ತು ಈಶಾನ್ಯ ಭಾಗದ ಗುರುತುಪತ್ರಗಳು ಕಂಡು ಬಂದರೆ ಆ ವಿಷಯವನ್ನು ಪೊಲೀಸರಿಗೆ ತಿಳಿಸಬೇಕು. ಪೊಲೀಸರು ಅದನ್ನು ಯೋಗ್ಯ ರೀತಿಯಲ್ಲಿ ಪರಿಶೀಲನೆ ಮಾಡಬಹುದು. ಅನೇಕ ಬಾರಿ ನಮ್ಮ ನ್ಯಾಯವ್ಯವಸ್ಥೆ ಬಾಂಗ್ಲಾದೇಶಿಗಳಿಗೆ ಜಾಮೀನು ನೀಡುತ್ತದೆ. ಅವರ ವಿರುದ್ಧದ ಖಟ್ಲೆಗಳಿಗೆ ತಕ್ಷಣ ನಿರ್ಣಯ ನೀಡಿ ಕಾನೂನು ಪ್ರಕಾರ ಶಿಕ್ಷೆ ವಿಧಿಸಿ ಅವರನ್ನು ಬಾಂಗ್ಲಾದೇಶಕ್ಕೆ ಸಾಗಿಸಬೇಕು. ಅದಕ್ಕಾಗಿ ಗೃಹಸಚಿವಾಲಯ, ರಾಜ್ಯ ಸರಕಾರಗಳು, ಪೊಲೀಸ್, ಗಡಿರಕ್ಷಕ ದಳ, ಜನಸಾಮಾನ್ಯರು ಇವರೆಲ್ಲರೂ ಒಟ್ಟಾಗಿ ಕಾರ್ಯ ಮಾಡುವ ಅವಶ್ಯಕತೆಯಿದೆ. ಬಾಂಗ್ಲಾದೇಶಿ ನುಸುಳುಕೋರರೆಂದರೆ ಭಾರತಕ್ಕೆ ಅಂಟಿಕೊಂಡಿರುವ ಅರ್ಬುದ ರೋಗವಾಗಿದೆ. ನುಸುಳುಕೋರರ ಹೆಚ್ಚುತ್ತಿರುವ ಸಂಖ್ಯೆಯು ಭಾರತದ ಭದ್ರತೆಗೆ ದೊಡ್ಡ ಸವಾಲಾಗಿದೆ. ಆದ್ದರಿಂದ ಯಾವ ರಾಜಕೀಯ ಪಕ್ಷಗಳು ಬಾಂಗ್ಲಾದೇಶಿ ನುಸುಳುಕೋರರನ್ನು ಸಮರ್ಥನೆ ಮಾಡುತ್ತವೆಯೊ, ಅವುಗಳ ವಿರುದ್ಧ ಮತದಾನ ಮಾಡಿ ಮತದಾರರು ಅವರಿಗೆ ಪಾಠ ಕಲಿಸಬೇಕು. ಹೀಗೆ ಮಾಡದಿದ್ದರೆ, ನಮಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು.

– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ

ಹಿಂದೂಗಳಲ್ಲಿ ಕೇವಲ ಅಸ್ತಿತ್ವ ಮತ್ತು ಅರಿವು ಮಾತ್ರ ಉಳಿದಿದೆ; ಆದರೆ ಜಾಗೃತಿ ಇಲ್ಲದಿರುವುದರಿಂದ ಹಿಂದೂ ಧರ್ಮದ ಮೇಲೆ ನಿರಂತರವಾಗಿ ಆಕ್ರಮಣಗಳಾಗುತ್ತಿವೆ’. – ಶ್ರೀ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಕರ್ನಾಟಕ