ಧರ್ಮ ಸಂಸದ್ ಸಂಚಾಲಕ ನೀಲಕಂಠ ಮಹಾರಾಜರಿಂದ ಮುಖ್ಯಮಂತ್ರಿ ಬಳಿ ಬೇಡಿಕೆ
ರಾಯಪುರ – ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸಲ್ಮಾನ ನುಸುಳುಕೋರರನ್ನು ಛತ್ತೀಸ್‌ಗಢದಿಂದ ಗಡಿಪಾರು ಮಾಡುವಂತೆ ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯರವರಿಗೆ ಧರ್ಮ ಸಂಸದ್ ಸಂಚಾಲಕ ನೀಲಕಂಠ ಮಹಾರಾಜ್ ಒತ್ತಾಯಿಸಿದ್ದಾರೆ. ಛತ್ತೀಸ್‌ಘಡದಲ್ಲಿ ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ನುಸುಳುಕೋರರ ಬಗ್ಗೆ ಸರಕಾರವು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೀಲಕಂಠ ಮಹಾರಾಜ ಮಾತನಾಡುತ್ತಾ, ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸಲ್ಮಾನರು ಛತ್ತೀಸ್‌ಘಡದ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಅವರು ರೈಲ್ವೆ ಹಳಿಗಳ ಸುತ್ತಲಿನ ಬಡಾವಣೆಗಳಲ್ಲಿ ನೆಲೆಸಿದ್ದಾರೆ. ಅವರು ಮಾದಕವಸ್ತುಗಳ ವ್ಯಾಪಾರ, ಕಳ್ಳತನ ಮತ್ತು ಹಿಂಸಾಚಾರದಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದಷ್ಟು ಬೇಗ ತನಿಖೆ ನಡೆಸಿ ಅವರನ್ನು ಕೂಡಲೇ ಹೊರ ಹಾಕಬೇಕು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುನೀಲಕಂಠ ಮಹಾರಾಜರು ಏಕೆ ಇಂತಹ ಬೇಡಿಕೆಯನ್ನು ಮಾಡಬೇಕು ? ಸರಕಾರ ತಾವಾಗಿ ನುಸುಳುಕೋರರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ ! |