Himanta Biswas Statement: ಭಾರತದಲ್ಲಿ ಬಾಂಗ್ಲಾದೇಶದ ಹಿಂದೂಗಳಲ್ಲ, ಬದಲಾಗಿ ರೋಹಿಂಗ್ಯಾ ಮುಸ್ಲಿಮರು ನುಸುಳುತ್ತಿದ್ದಾರೆ ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

  • ಅಸ್ಸಾಂನ ಭಾಜಪ ಸರಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರಿಂದ ಮಾಹಿತಿ

  • 138 ನುಸುಳುಕೋರರನ್ನು ಬಂಧಿಸಿ ಮರಳಿ ಕಳುಹಿಸಲಾಯಿತು

ಗೌಹಾಟಿ (ಆಸ್ಸಾಂ) – ಕಳೆದ 2 ತಿಂಗಳಲ್ಲಿ ನಾವು 138 ನುಸುಳುಕೋರರನ್ನು ಪತ್ತೆಹಚ್ಚಿ ಅವರನ್ನು ಮರಳಿ ಕಳುಹಿಸಿದ್ದೇವೆ. ನನಗೆ ಒಂದು ವಿಷಯವನ್ನು ಮತ್ತೆ ಮತ್ತೆ ಹೇಳಬೇಕೆನಿಸುತ್ತಿದೆ, `ಬಾಂಗ್ಲಾದೇಶದಲ್ಲಿ ದೌರ್ಜನ್ಯದಿಂದ ಹಿಂದೂಗಳು ಭಾರತಕ್ಕೆ ಬರುತ್ತಿದ್ದಾರೆ’, ಎಂದು ಹೇಳಲಾಗುತ್ತಿದೆ. ಆದರೆ ನಾವು ನುಸುಳುಕೋರರಲ್ಲಿ ಕೇವಲ ರೋಹಿಂಗ್ಯಾ ಮುಸಲ್ಮಾನರನ್ನೇ ನೋಡುತ್ತಿದ್ದೇವೆ. ಇವರಲ್ಲಿ ಹಿಂದೂಗಳಿಲ್ಲ. ಅವರು ಬಾಂಗ್ಲಾದೇಶದಿಂದ ನಮ್ಮ ದೇಶಕ್ಕೆ ಬರುತ್ತಿಲ್ಲ ಎಂದು ಆಸ್ಸಾಂನ ಭಾಜಪ ಸರಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಮಾಹಿತಿ ನೀಡಿದರು. `ಬಾಂಗ್ಲಾದೇಶದಿಂದ ಯಾರು ಬರುತ್ತಿದ್ದಾರೆ?, ಇದರ ಬಗ್ಗೆ ನನಗೆ ಚಿಂತೆ ಇಲ್ಲ. ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳುವವರನ್ನು ಮರಳಿ ಕಳುಹಿಸಬೇಕಾಗಿದೆ’, ಎಂದು ಅವರು ದೃಢವಾಗಿ ಹೇಳಿದರು. ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ನುಸುಳುಕೋರರನ್ನು ತಡೆಯಲು ತ್ರಿಪುರಾ ರಾಜ್ಯವು ಮಾಡಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.

ಆಸ್ಸಾಂ ತಡೆದಿರುವ ನುಸುಳುಕೋರರು ಬಂಗಾಳದಲ್ಲಿ ನುಸುಳುತ್ತಾರೆ !

ಮುಖ್ಯಮಂತ್ರಿ ಸರಮಾ ಮಾತು ಮುಂದುವರಿಸಿ, ಕೆಲವು ಜನರನ್ನು ಗುರುತಿಸಲಾಗುತ್ತಿದೆ. ಅವರು ಭಾರತದಲ್ಲಿ ನುಸುಳಿದ ಬಳಿಕ ಬಾಂಗ್ಲಾದೇಶಕ್ಕೆ ಮರಳಿ ಹೋಗುತ್ತಾರೆ ಮತ್ತು ಹೊಸ ನುಸುಳುಕೋರರನ್ನು ಕರೆತರುತ್ತಾರೆ. ಆಸ್ಸಾಂ ರಾಜ್ಯ ತಡೆದಿರುವ ಬಾಂಗ್ಲಾದೇಶದಿಂದ ಬರುವ ನುಸುಳುಕೋರರು ಮತ್ತೆ ಬಂಗಾಳದ ಮೂಲಕ ಪ್ರವೇಶಿಸುತ್ತಾರೆ. ಬಂಗಾಳ ಸಹಕರಿಸಿದರೆ ನುಸುಳುಕೋರರು ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು. (ಬಂಗಾಳದಲ್ಲಿ ನುಸುಳುಕೋರರು ಮುಸ್ಲಿಂಪ್ರೇಮಿ ತೃಣಮೂಲ ಕಾಂಗ್ರೆಸ್ ಆಗಿರುವುದರಿಂದ, ಅವರಿಗೆ ಭಾರತದೊಳಗೆ ರಾಜಾರೋಷವಾಗಿ ನುಸುಳುತ್ತಾರೆ ಮತ್ತು ನುಸುಳಿದ ಬಳಿಕ ಎಲ್ಲ ಸೌಲಭ್ಯಗಳೂ ಸಿಗುತ್ತದೆ. ಇದರಿಂದಲೇ ಅಲ್ಲಿ ಹೆಚ್ಚು ನುಸುಳುವಿಕೆಯಾಗುತ್ತಿದೆ. ಈ ಸ್ಥಿತಿಯನ್ನು ಬದಲಾಯಿಸಲು ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದು ಆವಶ್ಯಕವಾಗಿದೆ ! -ಸಂಪಾದಕರು)