ಆಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮ ಅವರ ಹೇಳಿಕೆ
ರಾಂಚಿ (ಜಾರ್ಖಂಡ) – ರಾಜ್ಯದ ಸಂಥಾಲ ಪರಗಣದ ಆದಿವಾಸಿಗಳ ಜನಸಂಖ್ಯೆಯು ಶರವೇಗದಲ್ಲಿ ಕಡಿಮೆಯಾಗುತ್ತಿದೆ, ಆದರೆ ಮುಸ್ಲಿಮರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದಕ್ಕೆ ಎರಡು ಕಾರಣಗಳಿವೆ, ಒಂದು ಪ್ರತಿ ಕುಟುಂಬದಲ್ಲಿ 10 ರಿಂದ 12 ಮಕ್ಕಳನ್ನು ಹೆರುತ್ತಿದ್ದಾರೆ ಅಥವಾ ಬಾಂಗ್ಲಾದೇಶದ ಮುಸ್ಲಿಮರು ಝಾರ್ಖಂಡ್‌ನಲ್ಲಿ ನುಸುಳುತ್ತಿದ್ದಾರೆ ಎಂದು ಆಸ್ಸಾಂನ ಭಾಜಪ ಸರಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮ ಇವರು ಸಂಥಾಲ ಪರಗಣ ಪ್ರದೇಶದಲ್ಲಿ ಒಂದು ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ಮುಖ್ಯಮಂತ್ರಿ ಸರಮ ಇವರು ಮಾತನ್ನು ಮುಂದುವರಿಸಿ,
1. ನಾವು ಝಾರ್ಖಂಡನ ನುಸುಳುಕೋರರ ಲಂಕೆ ದಹಿಸೋಣ !
ವಿಧಾನಸಭಾ ಚುನಾವಣೆಯಲ್ಲಿ ಭಾಜಪ ಖಂಡಿತವಾಗಿಯೂ ಗೆಲ್ಲುವುದು; ಆದರೆ ಕೇವಲ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಏಕೈಕ ಉದ್ದೇಶವಲ್ಲ, ಬದಲಾಗಿ ಜಾರ್ಖಂಡ್ ರಾಜ್ಯದಿಂದ ಮುಸ್ಲಿಂ ನುಸುಳುಕೋರರನ್ನು ಓಡಿಸುವುದು ಮತ್ತು ಮಹಿಳೆಯರಿಗೆ ನ್ಯಾಯ ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಹನುಮಂತನು ರಾವಣನ ಲಂಕೆಯನ್ನು ಸುಟ್ಟು ಹಾಕಿದಂತೆಯೇ ನಾವು ಜಾರ್ಖಂಡ್‌ನ ನುಸುಳುಕೋರರ ಲಂಕೆಯನ್ನು ದಹನ ಮಾಡೋಣ.
2. ರಾಜ್ಯದಲ್ಲಿ ಭಾಜಪ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ತರಲಾಗುವುದು !
ಝಾರ್ಖಂಡನಲ್ಲಿ ನುಸುಳಿರುವ ಮುಸ್ಲಿಮರಿಗೆ ಮದರಸಾದಲ್ಲಿ ತರಬೇತಿ ನೀಡಲಾಗುತ್ತದೆ. ಅದರ ನಂತರ ಅವರ ಆಧಾರಕಾರ್ಡ್ ಅನ್ನು ನೋಂದಾಯಿಸಲಾಗುತ್ತದೆ. ಇಂತಹ ಹಲವು ಸಂಗತಿಗಳು ಬಹಿರಂಗವಾಗುತ್ತಿವೆ. ಹೀಗಾಗಿ ರಾಜ್ಯದಲ್ಲಿ ಭಾಜಪ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ತರುತ್ತೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವುಕೇಂದ್ರದಲ್ಲಿ ಭಾಜಪ ಸರಕಾರವಿರುವುದರಿಂದ, ಅವರು ದೇಶದ ಪ್ರತಿಯೊಬ್ಬ ನುಸುಳುಕೋರರನ್ನು ದೇಶದಿಂದ ಗಡೀಪಾರು ಮಾಡಬೇಕು ಮತ್ತು ಪ್ರತಿದಿನ ಇದರ ಅಂಕಿಅಂಶಗಳನ್ನು ಜನತೆಗೆ ನೀಡಬೇಕು; ಆದರೆ ಇದು ವಾಸ್ತವದಲ್ಲಿ ಸಂಭವಿಸುವಂತೆ ತೋರುವುದಿಲ್ಲ ! |