* ದೇವಸ್ಥಾನದ ಪುನರ್‌ನಿರ್ಮಾಣಕ್ಕೆ ತೊಂದರೆ ನೀಡುತ್ತಿರುವುದರಿಂದ ದಂಡ ತುಂಬಿಸಲಾಯಿತು !* ಈಗ ಇತರ ೧೨೩ ಮತಾಂಧ ಆರೋಪಿಗಳ ದಂಡವನ್ನೂ ತುಂಬಿಸುವಂತೆ ಒತ್ತಾಯ |
|
ಕರಕ (ಪಾಕಿಸ್ತಾನ) – ಇಲ್ಲಿ ಡಿಸೆಂಬರ ೨೦೨೦ ರಲ್ಲಿ ಮತಾಂಧರು ಹಿಂದೂಗಳ ದೇವಸ್ಥಾನದ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸ ಪಡಿಸಿದ್ದರು. ನಂತರ ನ್ಯಾಯಾಲಯವು ಈ ದಾಳಿ ಮಾಡುವವರ ಪೈಕಿ ೧೧ ಮೌಲ್ವಿ(ಇಸ್ಲಾಂನ ಧಾರ್ಮಿಕ ನಾಯಕ)ಗಳಿಗೆ ದಂಡ ವಿಧಿಸಿತ್ತು.
Pakistan: Hindu Council pressurised to pay fines of remaining accused of the Karak temple attackhttps://t.co/KqxOvDTkFx
— OpIndia.com (@OpIndia_com) November 24, 2021
ಮೌಲ್ವಿಗಳು ನೀಡಿದ ಒತ್ತಡದಿಂದ ಈ ದಂಡವನ್ನು ಇಲ್ಲಿಯ ಹಿಂದೂ ಕೌನ್ಸಿಲ್ ತುಂಬಿಸಬೇಕಾಯಿತು, ಎಂದು ವಾರ್ತೆ ಬೆಳಕಿಗೆ ಬಂದಿದೆ. ಆದಕಾರಣ ಈ ಪ್ರಕರಣದಲ್ಲಿಯ ಇತರ ೧೨೩ ಆರೋಪಿಗಳಿಗೂ ನೀಡಿರುವ ದಂಡ ಹಿಂದೂ ಕೌನ್ಸಿಲ್ ಭರಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಆದರೆ ಕೌನ್ಸಿಲ್ ಇದಕ್ಕೆ ನಿರಾಕರಿಸಿದೆ. ಹಿಂದೂ ಕೌನ್ಸಿಲ್ ಪ್ರತಿಯೊಬ್ಬ ಮೌಲ್ವಿಯ ೨ ಲಕ್ಷ ೬೮ ಸಾವಿರ ರೂಪಾಯಿಗಳ ದಂಡವನ್ನು ಭರಿಸಿದೆ.
ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಈ ಆರೋಪಿಗಳಿಂದ ೩ ಕೋಟಿ ೩೦ ಲಕ್ಷ ರೂಪಾಯಿ ವಸೂಲಿ ಮಾಡುವಂತೆ ಆದೇಶ ನೀಡಿತ್ತು. ತದನಂತರ ಇದರಲ್ಲಿ ೧೦ ಮೌಲ್ವಿಗಳು ಈ ದೇವಸ್ಥಾನದ ಪುನರ್‌ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸುತ್ತಿದ್ದರು. ಸ್ಥಳಿಯ ಆಡಳಿತವೂ ಹಿಂದೂಗಳಿಗೆ ಸಹಾಯ ಮಾಡುತ್ತಿರಲಿಲ್ಲ. ಆದ್ದರಿಂದ ಹಿಂದೂ ಕೌನ್ಸಿಲ್ ಈ ದಂಡವನ್ನು ತುಂಬಿಸಿತು.