‘ಕ್ರೈಸ್ತ ಧರ್ಮ ಸ್ವೀಕರಿಸಿದರೆ ಗಂಡು ಮಗುವಾಗುವುದು’, ಎಂದು ಆಮಿಷವೊಡ್ಡಿ ಕ್ರೈಸ್ತ ಮಿಶನರಿಯವರಿಂದ ಹಿಂದೂ ಕುಟುಂಬವನ್ನು ಮತಾಂತರಿಸುವ ಪ್ರಯತ್ನ

ಗ್ರಾಮಸ್ಥರು ಕ್ರೈಸ್ತ ಮಿಶನರಿಯವರನ್ನು ಹಿಡಿದಿಟ್ಟಿದ್ದರು; ಆದರೆ ಪೊಲೀಸರು ಬಿಟ್ಟುಬಿಟ್ಟರು !

* ಕ್ರೈಸ್ತ ಮಿಶನರಿಗಳ ವಿರುದ್ಧ ಜಾಗೃತ ಮತ್ತು ಸಂಘಟಿತವಾಗಿರುವ ಗ್ರಾಮಸ್ಥರಿಗೆ ಅಭಿನಂದನೆಗಳು ! ದೇಶದಲ್ಲಿ ಮತಾಂತರ ವಿರೋಧಿ ಕಾನೂನು ಇಲ್ಲದಿರುವುದರಿಂದ ಇಂದಿಗೂ ಮಿಷನರಿಗಳು ತಮ್ಮ ಬಾಲ ಬಿಚ್ಚುತ್ತಿದ್ದಾರೆ,(ಜಾಲವನ್ನು ಹರಡುತ್ತಿದ್ದಾರೆ) ಇದನ್ನು ನೋಡಿದರೆ ಕೇಂದ್ರ ಸರಕಾರವು ಆದಷ್ಟು ಬೇಗ ಈ ಕಾನೂನು ತರುವುದು ಅವಶ್ಯಕವಾಗಿದೆ !- ಸಂಪಾದಕರು

* ಹಿಂದೂಗಳಿಗೆ ಮೋಸ ಮಾಡಿ ಅವರನ್ನು ಮತಾಂತರಿಸುವವರ ಮೇಲೆ ತಾವಾಗಿಯೇ ಕ್ರಮಕೈಗೊಳ್ಳುವುದಿಲ್ಲ ಮತ್ತು ಗ್ರಾಮಸ್ಥರು ಹಿಡಿದಿಟ್ಟುಕೊಂಡರೆ ಅವರನ್ನು ಬಿಡುಗಡೆಗೊಳಿಸುತ್ತಾರೆ, ಇದು ಪೊಲೀಸರ ಹಿಂದೂ ದ್ವೇಷ ಮತ್ತು ಕ್ರೈಸ್ತ ಪ್ರೇಮವಾಗಿದೆ, ಎಂದು ತಿಳಿಯಬೇಕೆ ?- ಸಂಪಾದಕರು

ರಾಮಗಡ (ಜಾರ್ಖಂಡ) – `ಕ್ರೈಸ್ತ ಧರ್ಮ ಸ್ವೀಕರಿಸಿದರೆ ಗಂಡು ಮಗು ಆಗುವುದು’, ಎಂದು ಆಮಿಷವೊಡ್ಡಿ ಕ್ರೈಸ್ತ ಮಿಶನರಿಗಳು ಹಿಂದೂ ಕುಟುಂಬವನ್ನು ಮತಾಂತರಿಸಲು ಪ್ರಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿಯ ಗಂಜುಡಿಹ ಟೋಲಾ ಗ್ರಾಮದಲ್ಲಿ ವಾಸಿಸುವ ಕರಮಾ ಕರಮಾಲಿ ಇವರಿಗೆ ನಾಲ್ಕು ಹೆಣ್ಣು ಮಕ್ಕಳು ಇದ್ದಾರೆ ಮತ್ತು ಅವರಿಗೆ ‘ಗಂಡು ಮಗು ಹುಟ್ಟಬೇಕೆಂದು’, ಅಪೇಕ್ಷೆಯಿತ್ತು. ಕ್ರೈಸ್ತ ಮಿಶನರಿಗಳು ಅವರಿಗೆ `ನೀವು ಕ್ರೈಸ್ತರಾದರೆ ಗಂಡು ಮಗು ಹುಟ್ಟುವುದು’, ಎಂದು ಹೇಳಿ ಅವರನ್ನು ಮತಾಂತರವಾಗಲು ಹೇಳಿದರು. ಅವರ ಕುಟುಂಬದವರನ್ನು ಮತಾಂತರಿಸಲು 6 ಕ್ರೈಸ್ತ ಮಿಶನರಿಗಳು ಗ್ರಾಮಕ್ಕೆ ಬಂದಿದ್ದರು. ಈ ಮಾಹಿತಿ ತಿಳಿದಾಕ್ಷಣ ಗ್ರಾಮಸ್ಥರು ಈ ಮಿಶನರಿಗಳನ್ನು ಹಿಡಿದಿಟ್ಟುಕೊಂಡರು. ಪೊಲೀಸರಿಗೆ ಈ ಮಾಹಿತಿ ಸಿಕ್ಕಿದ ನಂತರ ಪೊಲೀಸರು ಬಂದು ಅವರನ್ನು ಬಿಡುಗಡೆ ಮಾಡಿದರು.