* ನಾಸ್ತಿಕ ಮತ್ತು ರಾಷ್ಟ್ರಘಾತಕ ಸಿದ್ಧಾಂತಗಳ ಕಮ್ಯುನಿಸ್ಟ್ ಸರಕಾರದ ರಾಜ್ಯದಲ್ಲಿ ಬೇರೆ ಇನ್ನೇನಾಗಬಹುದು ?- ಸಂಪಾದಕರು
* ಹಿಂದೂಗಳು ಇದರ ವಿರುದ್ಧ ಸಂಘಟಿತರಾಗಿ ಪೊಲೀಸರಿಗೆ ದೂರು ನೀಡಿ ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕು !- ಸಂಪಾದಕರು |
ತಿರುವನಂತಪುರಂ (ಕೇರಳ) – ಕೇರಳದ `ಲಲಿತ ಕಲಾ ಅಕಾಡಮಿ’ಯು ಹಿಂದೂ ಧರ್ಮ, ದೇಶ ಮತ್ತು ಗೋವನ್ನು ಅವಮಾನಿಸಿದ ಓರ್ವ ವ್ಯಂಗ್ಯಚಿತ್ರಕಾರನನ್ನು ಪ್ರಶಸ್ತಿ ನೀಡುವ ಮೂಲಕ ಗೌರವಿಸಿದ ಘಟನೆ ನಡೆದಿದೆ. ಈ ವ್ಯಂಗ್ಯಚಿತ್ರದಲ್ಲಿ, ಕೊರೊನಾ ಕುರಿತು ಜಾಗತಿಕ ಸಮ್ಮೇಳನ ನಡೆಯುತ್ತಿದ್ದು ಅದರಲ್ಲಿ ಅಮೇರಿಕ, ಇಂಗ್ಲೆಂಡ್ ಮತ್ತು ಚೀನಾದ ಪ್ರತಿನಿಧಿಗಳು ಹಾಜರಿದ್ದಾರೆ. ಅದರಲ್ಲಿ ಭಾರತದ ಪ್ರತಿನಿಧಿ ಎಂದು ಹಸುವನ್ನು ತೋರಿಸಲಾಗಿದೆ. ಈ ಹಸುವಿಗೆ ಕೇಸರಿ ಬಟ್ಟೆ ತೊಡಿಸಲಾಗಿದೆ. ಇದನ್ನು ಕಂಡ ಇತರ ದೇಶಗಳು ಭಾರತದತ್ತ ಬೆರಗಾಗಿ ನೋಡುತ್ತಿವೆ. ಈ ಚಿತ್ರಕ್ಕೆ `ಕೋವಿಡ್-19 ಇನ್ ಇಂಡಿಯಾ’ ಎಂದು ಹೆಸರಿಸಲಾಗಿದೆ. ಕೇರಳದ ಪೊನ್ನುರುನ್ನಿಯ ನಿವಾಸಿ ಅನೂಪ ರಾಧಾಕೃಷ್ಣನ್ ಇವರು ಈ ವ್ಯಗ್ಯಚಿತ್ರವನ್ನು ಬಿಡಿಸಿದ್ದಾರೆ.
ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು |
1. ಕೇರಳದ ಭಾಜಪ ಪ್ರದೇಶಾಧ್ಯಕ್ಷ ಸುರೇಂದ್ರನ್ ಇವರು ಈ ವ್ಯಂಗ್ಯಚಿತ್ರ ಮತ್ತು ಅದಕ್ಕೆ ನೀಡಿದ ಪ್ರಶಸ್ತಿಯನ್ನು ವಿರೋಧಿಸಿದ್ದಾರೆ. ಅವರು, ಉನ್ನತ ಹುದ್ದೆಯಲ್ಲಿರುವ ಕೆಲವರಿಂದ ಉದ್ದೇಶಪೂರ್ವಕ ವಾಗಿ ಭಾರತ ಮತ್ತು ಹಿಂದೂ ಧರ್ಮದ ಮಾನಹಾನಿಯಾಗುತ್ತಿದೆ ಎಂದು ಹೇಳಿದ್ದಾರೆ.
2. ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ನೆಮೊನ್ ಪುಷ್ಪರಾಜ ಇವರು ಸ್ಪಷ್ಟೀಕರಣ ನೀಡುತ್ತಾ, ಪ್ರಶಸ್ತಿಗಾಗಿ ಪ್ರತಿಷ್ಠಿತ ಚಿತ್ರಕಾರರು ವ್ಯಂಗ್ಯಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ಈ ತಜ್ಞರು 3 ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಅಕಾಡಮಿಯ ಪಾತ್ರವೇನಿಲ್ಲ ಎಂದು ಹೇಳಿದ್ದಾರೆ. (ತಜ್ಞರು ಆಯ್ಕೆ ಮಾಡಿದರೂ ಸಹ, ಪ್ರಶಸ್ತಿಯನ್ನು ಅಕಾಡಮಿಯ ಹೆಸರಿನಲ್ಲಿ ನೀಡಲಾಗುವುದರಿಂದ, ಅವರು ಮಧ್ಯಪ್ರವೇಶಿಸಿ ಅದನ್ನು ರದ್ದು ಪಡಿಸುವುದು ಅಪೇಕ್ಷಿತವಾಗಿದೆ, ಅದೇ ರೀತಿ ಇಂತಹ ತಜ್ಞರನ್ನು ಅನುಚಿತ ಚಿತ್ರ ಆಯ್ಕೆ ಮಾಡಿದ್ದಕ್ಕಾಗಿ ಹಾಗೂ ಇಂತಹ ಚಿತ್ರವನ್ನು ಬಿಡಿಸುವವರನ್ನು ಕಠೋರವಾಗಿ ವಿಚಾರಿಸುವ ಅವಶ್ಯಕತೆಯಿದೆ ! – ಸಂಪಾದಕರು)