ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್ ಇವರಿಂದ ಸಾಧು-ಸಂತರನ್ನು `ಚಿಲುಮೆಜೀವಿಗಳು’ (ಹುಕ್ಕಾ ಸೇದುವವರು) ಎಂದು ಖೇದಕರ ಉಲ್ಲೇಖ !

ಇದರ ವಿರುದ್ಧ ಅಖಿಲ ಭಾರತೀಯ ಸಂತ ಸಮಿತಿಯು ಉತ್ತರಪ್ರದೇಶದ ಮನೆಗಳಲ್ಲಿ ಜನಜಾಗರಣ ಅಭಿಯಾನ ನಡೆಸಲಿದೆ !

ಹಿಂದೂಗಳ ಸಾಧುಸಂತರನ್ನು ಈ ರೀತಿಯಲ್ಲಿ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲೇಶ ಯಾದವ್ ಅವರ ಮೇಲೆ ದೂರು ದಾಖಲಿಸಿ ಉತ್ತರಪ್ರದೇಶ ಪೊಲೀಸರು ಬಂಧಿಸಬೇಕಿತ್ತು !- ಸಂಪಾದಕರು 

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್

ಲಕ್ಷ್ಮಣಪುರಿ (ಉತ್ತರಪ್ರದೇಶ) – ಕೆಂಪು, ಹಳದಿ, ಹಸಿರು ಮತ್ತು ನೀಲಿ ಬಣ್ಣಗಳು ಎಲ್ಲೆಡೆ ಕಂಡುಬರುತ್ತವೆ. ಒಂದು ಬಣ್ಣದ `ಚಿಲುಮಜೀವಿ’ ಜನರ ಜೀವನದಲ್ಲಿ ಸಂತೋಷವನ್ನು ತರಲು ಸಾಧ್ಯವಿಲ್ಲ. ನಾವು ಸಮಾಜವಾದಿಗಳು ಎಲ್ಲ ಬಣ್ಣಗಳಿಂದ ಪರಿಪೂರ್ಣರಾಗಿದ್ದೇವೆ, ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಅಖಿಲೇಶ ಯಾದವ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಖೇದಕರವಾಗಿ ಟೀಕಿಸಿದರು. ಅವರು ಗಾಜಿಪುರದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಯಾದವ್ ಅವರ ಈ ಹೇಳಿಕೆಗೆ ಟೀಕೆಯಾಗುತ್ತಿದೆ. ಈ ಹೇಳಿಕೆಗೆ ಅಖಿಲೇಶ ಯಾದವ್ ಇವರು ಅಖಿಲ ಭಾರತಿಯ ಸಂತ ಸಮಿತಿಯಲ್ಲಿ ಕ್ಷಮೆ ಯಾಚಿಸಬೇಕು ಎಂದು ಹೇಳಿದೆ.

(ಸೌಜನ್ಯ : India Today)

ಅಖಿಲ ಭಾರತೀಯ ಸಂತ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿಯವರು ಮಾತನಾಡುತ್ತಾ, ಉತ್ತರಪ್ರದೇಶದಾದ್ಯಂತ ಸಂತ ಸಮಾಜವು ಮನೆಮನೆಗೆ ತೆರಳಿ ಹಿಂದೂಗಳ ಮತ್ತು ಅವರ ಪರಂಪರೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವ ಕಪಟ ಸಮಾಜವಾದಿಗಳು ಮತ್ತು ಕಾಂಗ್ರೆಸ್ ವಿರುದ್ಧ ಜನಜಾಗರಣ ಅಭಿಯಾನವನ್ನು ಹಮ್ಮಿಕೊಳ್ಳಲಿದೆ.