‘ಮುಸಲ್ಮಾನರ ವಿರುದ್ಧದ ಹಿಂಸಾಚಾರವನ್ನು ತಡೆಯಬೇಕು !'(ಅಂತೆ)

ಗುರುಗ್ರಾಮ್ (ಹರಿಯಾಣಾ) ಇಲ್ಲಿಯ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಿಸಲು ನೀಡಲಾಗಿದ್ದ ಅನುಮತಿಯನ್ನು ರದ್ದುಪಡಿಸಿದ್ದರಿಂದ ಪಾಕಿಸ್ತಾನದ ಚೀರಾಟ !

* ಭಾರತದಲ್ಲಿ ಎಲ್ಲಿಯೂ ಮುಸಲ್ಮಾನರ ವಿರುದ್ಧ ಹಿಂಸಾಚಾರ ನಡೆಯುವುದಿಲ್ಲ, ತದ್ವಿರುದ್ಧ ಮತಾಂಧರಿಂದಲೇ ದೇಶದಲ್ಲಿ ಅಲ್ಲಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ, ಇದು ನೈಜಸ್ಥಿತಿಯಾಗಿದೆ !- ಸಂಪಾದಕರು 

* ಪಾಕಿಸ್ತಾನವು ತನ್ನ ದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಾಳಿಯ ವಿಷಯವಾಗಿ ಮೊದಲು ನೋಡಬೇಕು ಮತ್ತು ನಂತರ ಭಾರತದೆಡೆಗೆ ಬೊಟ್ಟು ತೋರಿಸಬೇಕು, ಎಂದು ಸರಕಾರವು ಪಾಕಿಸ್ತಾನಕ್ಕೆ ಗದರಿಸಬೇಕು !- ಸಂಪಾದಕರು 


ನವದೆಹಲಿ – ಭಾರತದಲ್ಲಿನ ಅಲ್ಪಸಂಖ್ಯಾತರು, ವಿಶೇಷವಾಗಿ ಮುಸಲ್ಮಾನರ ವಿರುದ್ಧದ ಹಿಂಸಾಚಾರವನ್ನು ತಡೆಯಬೇಕು. ಅವರ ಮತ್ತು ಅವರ ಧಾರ್ಮಿಕ ಸ್ಥಳಗಳ ರಕ್ಷಣೆ ಮಾಡಬೇಕು, ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯಾಲಯವು ಹೇಳಿದೆ. ಹರಿಯಾಣಾದ ಗುರುಗ್ರಾಮದಲ್ಲಿ 37 ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಣಕ್ಕೆ ಹಿಂದೂಗಳು ವಿರೋಧಿಸಿದ ನಂತರ ಸರಕಾರವು ನಮಾಜ ಪಠಣಕ್ಕೆ ಅನುಮತಿಯನ್ನು ರದ್ದುಪಡಿಸಿತು. ಅದಕ್ಕಾಗಿ ಪಾಕಿಸ್ತಾನವು ಈ ಬೇಡಿಕೆಯನ್ನು ಸಲ್ಲಿಸಿದೆ.

ಪಾಕಿಸ್ತಾನವು ಇದರ ಬಗ್ಗೆ ಮುಂದಿನಂತೆ ಹೇಳಿದೆ. ಉತ್ತರಪ್ರದೇಶ ಮತ್ತು ಹರಿಯಾಣಾ ಈ ಭಾಜಪದ ಸರಕಾರ ರಾಜ್ಯಗಳಲ್ಲಿ ಕಟ್ಟರವಾದಿ ಮತ್ತು ಅಧಿಕಾರಿಗಳ ಹೊಂದಾಣಿಕೆಯಿಂದ ಮಸೀದಿಗಳ ಮೇಲಾದ ದಾಳಿಯಿಂದಾಗಿ ನಾವು ಚಿಂತೆಯಲ್ಲಿದ್ದೇವೆ. ನಿರಂತರವಾಗಿ ಮುಸಲ್ಮಾನರ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಯುತ್ತಿದೆ. ತ್ರಿಪುರಾದಲ್ಲಿ ಮುಸಲ್ಮಾನ ಮತ್ತು ಅವರ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಯುತ್ತಿದೆ. ಭಾಜಪ ಆಡಳಿತದ ರಾಜ್ಯಗಳಲ್ಲಿ ಇಂತಹ ಘಟನೆಯ ವಿರುದ್ಧ ಧ್ವನಿಯೆತ್ತುವ ಜನರ ವಿರುದ್ಧ ದೂರು ದಾಖಲಿಸಿ ಅವರನ್ನು ಬಂಧಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ತು, ಮಹಾರಾಷ್ಟ್ರ ನವನಿರ್ಮಾಣ ಸೇನೆ ಮತ್ತು ಭಾಜಪದ ಕಾರ್ಯಕರ್ತರು ಮುಸಲ್ಮಾನರ ಅಂಗಡಿ ಮತ್ತು ಮಸೀದಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ, ಇದರ ಕಡೆಗೆ ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಗಮನಹರಿಸಬೇಕು ಮತ್ತು ದಾಳಿಗಳನ್ನು ತಡೆಯಬೇಕು, ಹಾಗೂ ಇಸ್ಲಾಮ್ ವಿಷಯವಾಗಿ ದ್ವೇಷ ತಡೆಯಬೇಕೆಂದು ಪಾಕಿಸ್ತಾನವು ಒತ್ತಾಯಿಸಿದೆ.