‘ಮಹಾರಾಷ್ಟ್ರದ ಗಲಭೆಯು ರಝಾ ಅಕಾಡಮಿಯ ಪಿತೂರಿ ?’ ಈ ಕುರಿತು ‘ಆನ್‌ಲೈನ್’ ವಿಶೇಷ ಚರ್ಚಾಕೂಟ
2012 ರಲ್ಲಿ ಮುಂಬಯಿನಲ್ಲಿ ರಝಾ ಅಕಾಡೆಮಿಯು ನಡೆಸಿದ ಗಲಭೆಯಲ್ಲಿ ರಾಷ್ಟ್ರೀಯ ಸಂಪತ್ತಿಗೆ ಕೋಟ್ಯಂತರ ರೂಪಾಯಿ ಹಾನಿ ಮಾಡಲಾಗಿತ್ತು. ಅದರ ವಸೂಲಿ ಇನ್ನೂ ಬಾಕಿ ಇದೆ. ಹೀಗಿರುವಾಗ ಇದೀಗ ಮತ್ತೊಮ್ಮೆ ತ್ರಿಪುರಾದ ಘಟನೆಯ ಕಾರಣ ನೀಡಿ ಮಹಾರಾಷ್ಟ್ರದ ಅಮರಾವತಿ, ಮಾಲೆಗಾಂವ್, ನಾಂದೇಡ್ ಮತ್ತಿತರ ಕಡೆಗಳಲ್ಲಿ ಅನುಮತಿ ಇಲ್ಲದೆ ಮೆರವಣಿಗೆಯನ್ನು ಮಾಡಿ ಹಿಂದೂಗಳ ಮೇಲೆ ದಾಳಿ ಮಾಡಲಾಯಿತು. ಹಿಂದೂಗಳಿಗೆ ಮತ್ತು ರಾಷ್ಟ್ರೀಯ ಸಂಪತ್ತಿಗೆ ಹಾನಿಯನ್ನುಂಟು ಮಾಡಿದರು. ಗಲಭೆಕೋರರಿಂದ ನಷ್ಟಪರಿಹಾರವನ್ನು ವಸೂಲಿ ಮಾಡಬೇಕು. ರಝಾ ಅಕಾಡೆಮಿಯ ಇತಿಹಾಸವನ್ನು ಗಮನಿಸಿ ಗಲಭೆಯಲ್ಲಿ ತೊಡಗಿದ್ದವರ ಕೂಲಂಕುಷವಾಗಿ ತನಿಖೆ ನಡೆಸಿ ಅದರ ಮೇಲೆ ನಿಷೇಧ ಹೇರಬೇಕು, ಎಂದು ನ್ಯಾಯವಾದಿ ಸತೀಶ ದೇಶಪಾಂಡೆ ಆಗ್ರಹಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಮಹಾರಾಷ್ಟ್ರದಲ್ಲಿ ಗಲಭೆ-ರಜಾ ಅಕಾಡೆಮಿಯ ಪಿತೂರಿ ?’ ಈ ಕುರಿತು ಆಯೋಜಿಸಲಾಗಿದ್ದ ‘ಆನ್‌ಲೈನ್’ ವಿಶೇಷ ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು.
ಚರ್ಚೆಯಲ್ಲಿ ಅಮರಾವತಿಯಲ್ಲಿನ ದೈನಿಕ ನವಭಾರತದ ಉಪಸಂಪಾದಕ ಶ್ರೀ. ಅಮೋಲ ಖೋಡೆ ಇವರು ಮಾತನಾಡುತ್ತಾ, ಅಮರಾವತಿಯಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನಡೆಸಿದ ಮೆರವಣಿಗೆಯಲ್ಲಿ ಮತಾಂಧರು ಕತ್ತಿ ಮತ್ತು ಆಯುಧಗಳಿಂದ ಹಿಂದೂ ವ್ಯಾಪಾರಿಗಳನ್ನು ಗುರಿಯಾಗಿಸಿದರು. ಇಡೀ ನಗರದಲ್ಲೇ ಅಲ್ಲೋಲಕಲ್ಲೋಲವಾಗಿತ್ತು. ಈ ಉಗ್ರ ಗುಂಪನ್ನು ತಡೆಯುವಲ್ಲಿ ಪೊಲೀಸ್ ಆಡಳಿತ ಸಂಪೂರ್ಣ ವಿಫಲವಾಗಿದೆ. ಈ ಗಲಭೆಗಳಿಂದ ಹಿಂದೂಗಳಿಗಾದ ಗಾಯಗಳು ಎಂದಿಗೂ ವಾಸಿಯಾಗುವುದಿಲ್ಲ. ಮತಾಂಧರ ಈ ಮೆರವಣಿಗೆಗೆ ರಾಜಕೀಯ ಬೆಂಬಲವೂ ಇತ್ತು, ಎಂದು ಹೇಳಿದರು.
ತ್ರಿಪುರಾದ ‘ಹಿಂದೂ ಜಾಗರಣ ಮಂಚ್’ ಪ್ರದೇಶಾಧ್ಯಕ್ಷರಾದ ಶ್ರೀ. ಉತ್ತಮ್ ದೇ ಅವರು ಮಾತನಾಡುತ್ತಾ, ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ದೇವಾಲಯಗಳ ಮೇಲೆ ನಡೆಸುತ್ತಿರುವ ಹಲ್ಲೆಗಳ ವಿರುದ್ಧ ತ್ರಿಪುರಾದಲ್ಲಿ ವಿವಿಧ ಸ್ಥಳಗಳಲ್ಲಿ ಶಿಸ್ತುಬದ್ಧ ಮೆರವಣಿಗೆ ನಡೆಸಲಾಯಿತು; ಆದರೆ, ದೇಶವಿರೋಧಿ ಶಕ್ತಿಗಳು ಕೆಲವು ಮಾಧ್ಯಮಗಳನ್ನು ಹತೋಟಿಯಲ್ಲಿಟ್ಟುಕೊಂಡು ಮುಸಲ್ಮಾನರ ಮೇಲಿನ ದೌರ್ಜನ್ಯದ ಸುಳ್ಳು ಚಿತ್ರಣವನ್ನು ಸೃಷ್ಟಿಸಿವೆ. ತ್ರಿಪುರಾದಲ್ಲಿ ಇಂತಹದ್ದೇನೂ ನಡೆಯದಿರುವಾಗ ಮಹಾರಾಷ್ಟ್ರದಲ್ಲಿ ವದಂತಿಗಳ ಆಧಾರದಲ್ಲಿ ಉದ್ರೇಕ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ’ ಎಂದು ಹೇಳಿದರು.
ಹಿಂದೂಗಳಿಗೆ ಅವರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಮಾತನಾಡಲೂ ಬಿಡುವುದಿಲ್ಲ !
ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕರಾದ ಶ್ರೀ. ಸುನಿಲ ಘನವಟ ಇವರು ಮಾತನಾಡುತ್ತಾ, ಮಹಾರಾಷ್ಟ್ರದ ಅಮರಾವತಿ ಮತ್ತು ನಾಂದೇಡ್‌ನಲ್ಲಿ ಗಲಭೆಯಿಂದ ಮತಾಂಧರಿಗೆ ತಮ್ಮ ಆತಂಕವನ್ನು ಸೃಷ್ಟಿಸುವ ಉದ್ದೇಶವಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು. ಈ ಗಲಭೆಯಲ್ಲಿ ಹಿಂದೂ ಸಹೋದರರೊಂದಿಗೆ ಪೊಲೀಸರನ್ನೂ ಗಾಯಗೊಳಿಸಿದ್ದಾರೆ. ಹಿಂದೂಗಳು ಭವಿಷ್ಯದಲ್ಲಿ ಇಂತಹ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ವಸಂರಕ್ಷಣಾ ತರಬೇತಿಯನ್ನು ತೆಗೆದುಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಈ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿವಿಧ ಸ್ಥಳಗಳಲ್ಲಿ ಪೊಲೀಸ್ ಆಡಳಿತಕ್ಕೆ ಮನವಿಗಳನ್ನು ನೀಡಲಾಗಿದೆ; ಆದರೆ ಕೆಲವೆಡೆ ಪೊಲೀಸರು ಮನವಿ ನೀಡುವ ಮುನ್ನ ನಮ್ಮ ಅನುಮತಿ ಪಡೆಯಬೇಕಾಗುತ್ತದೆ. ಮನವಿಯ ನೀಡಿರುವ ಬಗ್ಗೆ ಪ್ರಸಾರ ಮಾಧ್ಯಮಗಳಿಗೆ ನೀಡಬೇಡಿ’, ಎಂದು ಹೇಳಿ ಹಿಂದೂ ಸಂಘಟನೆಗಳ ಮೇಲೆ ಒತ್ತಡ ಹೇರಿದರು. ಹಿಂದೂಗಳಿಗೆ ತಮ್ಮ ಮೇಲೆ ಆಗುವ ದೌರ್ಜನ್ಯದ ವಿರುದ್ಧ ಸಾಂವಿಧಾನಿಕ ರೀತಿಯಲ್ಲಿ ಧ್ವನಿ ಎತ್ತುವ ಸಾಂವಿಧಾನಿಕ ಹಕ್ಕನ್ನೂ ಕೂಡಾ ‘ಜಾತ್ಯತೀತ’ ಭಾರತದಲ್ಲಿ ಉಳಿದಿಲ್ಲವೇ ?’ ಎಂದೂ ಪ್ರಶ್ನಿಸಿದ್ದಾರೆ.