ಲಕ್ಷ್ಮಣಪುರಿ (ಉತ್ತರಪ್ರದೇಶ) – ಶಿಯಾ ವಕ್ಫ್ ಬೋರ್ಡನ ಮಾಜಿ ಅಧ್ಯಕ್ಷರಾದ ವಸೀಮ ರಿಝವೀರವರು ತಮ್ಮ ಮೃತ್ಯುಪತ್ರದಲ್ಲಿ `ನನ್ನ ಮೃತ್ಯುವಿನ ಬಳಿಕ, ನನ್ನ ಮೃತದೇಹವನ್ನು ಹೂಳುವ ಬದಲು ಅದನ್ನು ಹಿಂದೂ ಪದ್ಧತಿಯಂತೆ ದಹನ ಮಾಡಿರಿ’, ಎಂದು ಹೇಳಿದ್ದಾರೆ. `ಅಂತಿಮಸಂಸ್ಕಾರ ಮಾಡುವಾಗ ಗಾಝಿಯಾಬಾದನಲ್ಲಿರುವ ಡಾಸನಾ ದೇವಾಲಯದ ಮಹಂತ ಯತಿ ನರಸಿಂಹಾನಂದರವರ ಹಸ್ತದಿಂದ ಮುಖಾಗ್ನಿ ನೀಡುವಂತಾಗಲಿ’, ಎಂದು ಕೂಡ ಅವರು ಹೇಳಿದ್ದಾರೆ.
‘मेरी गर्दन काटने की साजिश… हिंदू रीति से हो अंतिम संस्कार, नरसिंहानंद दें मुखाग्नि’: वसीम रिजवी ने हत्या की जताई आशंका#WasimRizvi https://t.co/R9Ply79XHZ
— ऑपइंडिया (@OpIndia_in) November 15, 2021
ವಸೀಮ ರಿಝವೀರವರು ಒಂದು ವಿಡಿಯೋಅನ್ನು ಪ್ರಸಾರ ಮಾಡಿ ಅದರಲ್ಲಿ ಅವರು, `ನನ್ನ ಶಿರಚ್ಛೇದ ಮಾಡಿ ಕೊಲೆ ಮಾಡುವ ಕುತಂತ್ರವನ್ನು ದೇಶದಲ್ಲಿ ಮತ್ತು ಜಗತ್ತಿನಾದ್ಯಂತ ರೂಪಿಸಲಾಗುತ್ತಿದೆ. ಆ ರೀತಿ ಮಾಡುವವರಿಗೆ ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿದೆ; ಏಕೆಂದರೆ ನಾನು ಕುರಾನಿನಲ್ಲಿರುವ 26 ಆಯತಗಳನ್ನು ತೆಗೆದುಹಾಕಲು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆನು. ಈ ಆಯತಗಳ ಮೂಲಕ ಮಾನವತೆಯ ವಿಷಯವಾಗಿ ದ್ವೇಷವನ್ನು ಹಬ್ಬಿಸಲಾಗುತ್ತಿದೆ. ನನ್ನ ಅಪರಾಧವೆಂದರೆ ನಾನು ಮೊಹಮ್ಮದ ಪೈಗಂಬರರವರ ಬಗ್ಗೆ ಒಂದು ಪುಸ್ತಕವನ್ನು ಬರೆದಿದ್ದೇನೆ. ಅದರಿಂದ ಮುಸಲ್ಮಾನರು ನನ್ನನ್ನು ಕೊಲ್ಲಲು ಬಯಸುತ್ತಿದ್ದಾರೆ. ಅವರು ಯಾವುದೇ ಸ್ಮಶಾನದಲ್ಲಿ ನನಗೆ ಹೂಳಲು ಸ್ಥಳ ನೀಡಬಾರದು’, ಎಂದು ಸಹ ಘೋಷಿಸಿದ್ದಾರೆ. ಆದ್ದರಿಂದ ನಾನು ನನ್ನ ಮೃತ್ಯುಪತ್ರವನ್ನು ಬರೆದು ಅದನ್ನು ಆಡಳಿತಕ್ಕೆ ಕಳುಹಿಸಿದ್ದೇನೆ” ಎಂದಿದ್ದಾರೆ.