`ಹಿಂದುತ್ವ’ ಎನ್ನುವುದು ರಾಜಕೀಯವಾಗಿದೆ !(ಅಂತೆ) – ಕಾಂಗ್ರೆಸ್ಸಿನ ಮಾಜಿ ಶಾಸಕಿ ಮತ್ತು ನಟಿ ರಮ್ಯಾ

ಕಾಂಗ್ರೆಸ್ ನವರಿಗೆ ಹಿಂದುತ್ವದ ಕಾಮಾಲೆ ಆಗಿರುವುದರಿಂದ ಅವರಿಗೆ ಇನ್ನೇನು ಅನ್ನಿಸಬಹುದು ? ಕಾಂಗ್ರೆಸ್ಸಿನ ಜೀವಮಾನವೇ ಮುಸಲ್ಮಾನರ ಓಲೈಕೆಯಲ್ಲಿ ಮತ್ತು ಹಿಂದೂದ್ವೇಷದಲ್ಲಿ ಕಳೆದು ಹೋಗಿದೆ ಮತ್ತು ಈಗ ಭವಿಷ್ಯದಲ್ಲಿ ಹಿಂದೂಗಳು ಕಾಂಗ್ರೆಸ್ಸಅನ್ನು ರಾಜಕೀಯ ದೃಷ್ಟಿಯಿಂದ ಮುಗಿಸಿದೆ ಇರಲಾರದು !- ಸಂಪಾದಕರು 

ಕಾಂಗ್ರೆಸ್ಸಿನ ಮಾಜಿ ಶಾಸಕಿ ಮತ್ತು ನಟಿ ರಮ್ಯಾ

ಬೆಂಗಳೂರು – ಹಿಂದೂ ಧರ್ಮ ಎನ್ನುವುದು ರಾಜಕೀಯವಲ್ಲ, `ಹಿಂದುತ್ವ’ ಎನ್ನುವುದು ರಾಜಕೀಯವಾಗಿದೆ, ಹಿಂದೂ ಧರ್ಮ ಮತ್ತು ಹಿಂದುತ್ವ ಇವು ಬೇರೆ ಬೇರೆಯಾಗಿದೆ. ಹಿಂದೂ ಧರ್ಮ ಎಂದರೆ ಎಲ್ಲದರ ಒಳಗೊಳ್ಳುವಿಕೆ ಮತ್ತು ಎಲ್ಲರ ಬಗ್ಗೆಯೂ ಇರುವ ಪ್ರೀತಿ. (ರಮ್ಯಾ ಇವರು ಈ ರೀತಿಯಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಬಗ್ಗೆ ಹೇಳಲು ಸಾಧ್ಯವೇ ? – ಸಂಪಾದಕರು) ಇದಕ್ಕೆ ವಿರುದ್ಧವಾಗಿದ್ದು ಹಿಂದುತ್ವ. ನಿಜವಾದ ಹಿಂದೂಗಳಿಗೆ ಈ ವ್ಯತ್ಯಾಸ ತಿಳಿದಿರಲಿ, ಎಂದು ಕಾಂಗ್ರೆಸ್ಸಿನ ಮಾಜಿ ಶಾಸಕಿ ಮತ್ತು ನಟಿ ರಮ್ಯಾ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದ್ದಾರೆ.