ಕೋಲಾರ : ದತ್ತಪೀಠಕ್ಕೆ ತೆರಳುತ್ತಿದ್ದ ಬಸ್ ಮೇಲೆ ಮತಾಂಧರಿಂದ ಕಲ್ಲು ತೂರಾಟ : ಮೂವರಿಗೆ ಗಾಯ

ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಹಿಂದೂಗಳ ಧಾರ್ಮಿಕ ಯಾತ್ರೆಯ ಬಸ್ ಮೇಲೆ ದಾಳಿ ಮಾಡಲು ಮತಾಂಧರಿಗೆ ಹೇಗೆ ಧೈರ್ಯ ಬರುತ್ತದೆ ?, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ !- ಸಂಪಾದಕರು 

ಕೋಲಾರ : ಚಿಕ್ಕಮಗಳೂರಿನ ಬಾಬಾ ಬುಡನಗಿರಿಯ ದತ್ತಪೀಠಕ್ಕೆ ಹೊರಟಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು ದತ್ತಮಾಲೆ ಧರಿಸಿ ಒಂದು ‘ಮಿನಿ ಬಸ್’ನಲ್ಲಿ `ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿಕೊಂಡು ದತ್ತಪೀಠದ ಕಡೆ ಹೋಗುತ್ತಿದ್ದರು. ಆಗ ಅವರ ಬಸ್ ಮೇಲೆ ಮತಾಂಧರಿಂದ ಕಲ್ಲು ತೂರಾಟ ಮಾಡಿರುವ ಘಟನೆ 13 ನವೆಂಬರ್ 2021 ರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಕೋಲಾರದ ಕ್ಲಾಕ್ ಟಾವರ್ ಬಳಿ ಇರುವ ವಿಶಾಲ್ ಮಾರ್ಟ್ ಎದುರು ಈ ಕಲ್ಲು ತೂರಾಟ ನಡೆಸಲಾಯಿತು.

1. ವಿಶಾಲ್ ಮಾರ್ಟ್ ಎದುರು ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ವಿವಾದವಾಗಿ ಅಕ್ಬರ್ ಎಜಾಜ್ ಮತ್ತು ಜುಮ್ಮು ಎಂಬುವವರಿಂದ ವಸೀಂ ಬೇಗ್ ಎಂಬುವವರಿಗೆ ಚಾಕುವಿನಿಂದ ದಾಳಿ ಮಾಡಿದ್ದರು. ಈ ಸ್ಥಳದಲ್ಲಿ ಜನರು ಗುಂಪು ಗುಂಪಾಗಿ ಅಲ್ಲಿಯೇ ನಿಂತಿದ್ದರು. ಈ ವೇಳೆ ಘೋಷಣೆಗಳನ್ನು ಕೂಗುತ್ತಾ ದತ್ತಮಾಲಾಧಾರಿ ಕಾರ್ಯಕರ್ತರ ಬಸ್ ಅದೇ ಮಾರ್ಗವಾಗಿ ತೆರಳುತ್ತಿತ್ತು. ಆಗ ಅಲ್ಲಿದ್ದ ಕೆಲವು ಮತಾಂಧರು ಇದ್ದಕ್ಕಿದ್ದಂತೆ ಬಸ್ ಮೇಲೆ ಕಲ್ಲು ತೂರಾಟ ಮಾಡಲು ಆರಂಭಿಸಿದ್ದಾರೆ; ಅಲ್ಲದೇ ಬಸ್‍ಅನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ದತ್ತ ಮಾಲಾಧಾರಿಗಳಿದ್ದ ಬಸ್ ಅಲ್ಲಿಂದ ತಕ್ಷಣ ಹೊರಟಿತ್ತು. ಕಲ್ಲು ತೂರಾಟದಿಂದ ಬಸ್‍ನಲ್ಲಿದ್ದ ಮೂವರಿಗೆ ಗಾಯಗಳಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು.

2. ಶ್ರೀರಾಮ ಸೇನೆ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಮತಾಂಧರನ್ನು ಬಂಧಿಸುವಂತೆ ಒತ್ತಾಯಿಸಿದರು. ಇದಕ್ಕೆ ಪೊಲೀಸರು ‘ಆರೋಪಿಗಳನ್ನು ಬಂಧಿಸಲಾಗುವುದು’, ಎಂದು ಭರವಸೆ ನೀಡಿದ ನಂತರ ಕಾರ್ಯಕರ್ತರು ಅಲ್ಲಿಂದ ತೆರಳಿದರು.