ಶಬರಿಮಲೆ ದೇವಸ್ಥಾನದ ‘ಆರಾವಣಾ ಪಾಯಿಸಮ್’ ಪ್ರಸಾದಕ್ಕೆ ಅರಬಿ ಹೆಸರು ಮತ್ತು ‘ಹಲಾಲ್’ ಪ್ರಮಾಣಪತ್ರ !

ಪ್ರಸಾದ ತಯಾರಿಸುವ ಗುತ್ತಿಗೆ ಮುಸಲ್ಮಾನ ವ್ಯಕ್ತಿಗೆ

* ಸರಕಾರಿಕರಣಗೊಂಡಿರುವ ಕೇರಳದ ದೇವಸ್ವ ಬೋರ್ಡ್‍ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೀತಿ ಅರಿತುಕೊಳ್ಳಿ !- ಸಂಪಾದಕರು

* ದೇವಸ್ಥಾನಗಳು ಸರಕಾರಿಕರಣಗೊಂಡ ನಂತರ ಏನಾಗಬಹುದು ಇದಕ್ಕೆ ಇದೊಂದು ಜ್ವಲಂತ ಮತ್ತು ಖೇದಕರ ಉದಾಹರಣೆಯಾಗಿದೆ. ಇದಕ್ಕಾಗಿ ದೇಶದಲ್ಲಿನ ಪ್ರತಿಯೊಂದು ಹಿಂದುತ್ವನಿಷ್ಠ ಸಂಘಟನೆಗಳು ಇದನ್ನು ವಿರೋಧಿಸುತ್ತಾ ಈ ಗುತ್ತಿಗೆಯನ್ನು ರದ್ದು ಪಡಿಸಿ ಪ್ರಸಾದದ ಹೆಸರು ಬದಲಾಯಿಸಲು ಸರಕಾರದ ಮೇಲೆ ಒತ್ತಡ ನಿರ್ಮಾಣ ಮಾಡಬೇಕು !- ಸಂಪಾದಕರು

* ನಾಸ್ತಿಕವಾದದ ಹೆಸರಿನಲ್ಲಿ ಹಿಂದೂದ್ವೇಷಿ ಕೃತಿ ಮಾಡುವ ಕೇರಳದ ಆಡಳಿತಾರೂಢ ಮಾಕ್ರ್ಸ್‍ವಾದಿ ಕಮ್ಯುನಿಸ್ಟ್ ಪಕ್ಷದ ಆಡಳಿತದಲ್ಲಿ ಇದಕ್ಕಿಂತ ಇನ್ನೇನಾಗಲು ಸಾಧ್ಯ ?- ಸಂಪಾದಕರು

ಶಬರಿಮಲೆ ದೇವಸ್ಥಾನದ ‘ಆರಾವಣಾ ಪಾಯಿಸಮ್’ ಪ್ರಸಾದಕ್ಕೆ ಅರಬಿ ಹೆಸರು

ತಿರುವನಂತಪುರಂ (ಕೇರಳ) – ಶಬರಿಮಲೆಯ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಮ್’ ಈ ಸಾಂಪ್ರದಾಯಿಕ ಸಿಹಿ ಪ್ರಸಾದವನ್ನು ತಯಾರಿಸುವ ಗುತ್ತಿಗೆಯನ್ನು ಕೇರಳ ದೇವಸ್ವಂ ಮಂಡಳಿಯು ಓರ್ವ ಮುಸಲ್ಮಾನ ವ್ಯಕ್ತಿಗೆ ನೀಡಿದೆ. ಈ ಪ್ರಸಾದಕ್ಕೆ ‘ಅಲ ಝಹಾ’ ಎಂಬ ಅರೇಬಿ ಹೆಸರು ನೀಡಿದೆ ಹಾಗೂ ಅದರ ಮೇಲೆ `ಹಲಾಲ್ ಪ್ರಮಾಣೀಕೃತ’ ಎಂದು ಉಲ್ಲೇಖಿಸಲಾಗಿದೆ.