ಆಕ್ರಮಕ ಹಿಂದುತ್ವ ಎಂದರೆ ಇಸ್ಲಾಮಿಕ್ ಸ್ಟೇಟ್ ಮತ್ತು ಬೋಕೊ ಹರಾಮ (ನೈಜೀರಿಯಾದ ಇಸ್ಲಾಮಿಕ್ ಸಂಘಟನೆ) ಇದರ ಹಾಗೆ

ಕಾಂಗ್ರೆಸ್ಸಿನ ಜೇಷ್ಠ ನಾಯಕ ಸಲ್ಮಾನ್ ಖುರ್ಷಿದರಿಂದ ತಮ್ಮ ಪುಸ್ತಕದಲ್ಲಿ ಹಿಂದೂದ್ವೇಷಿ ಆರೋಪ

* ಹಿಂದುತ್ವ ಆಕ್ರಮಕ ವಾಗಿರುತ್ತದೆ ಮತ್ತು ಇಸ್ಲಾಮಿಕ್ ಸ್ಟೇಟ್ ಹಾಗೂ ಬೋಕೋ ಹಾರಾಮ ಇಂತಹ ಜಿಹಾದಿ ಭಯೋತ್ಪಾದಕ ಸಂಘಟನೆ ಹಾಗೆ ಇರುತ್ತಿದ್ದರೆ, ಈ ದೇಶದಲ್ಲಿ ಒಬ್ಬನಾದರೂ ಮುಸಲ್ಮಾನ್ ಉಳಿಯುತ್ತಿದ್ದನೇನು ? ಸಲ್ಮಾನ್ ಖುರ್ಷಿದರಿಗೆ ಈ ರೀತಿಯಲ್ಲಿ ಪುಸ್ತಕ ಬರೆಯಲು ಸಾಧ್ಯವಾಗುತ್ತಿತ್ತೇನು ?- ಸಂಪಾದಕರು

* ಯಾವುದು ಅವಾಸ್ತವಾಗಿದೆಯೋ ಅದನ್ನು ಆ ರೀತಿ ಆಭಾಸ ಹುಟ್ಟಿಸಿ ಹಿಂದೂಗಳನ್ನು ತುಳಿಯುವ ಕೆಲಸ ಕಾಂಗ್ರೆಸ್ ಕಳೆದ ೭೪ ವರ್ಷದಿಂದ ಈ ದೇಶದಲ್ಲಿ ಮಾಡುತ್ತಾ ಬಂದಿದೆ. ಈಗ ಅದನ್ನು ರಾಜಕೀಯ ದೃಷ್ಟಿಯಿಂದ ಮುಗಿಸುವುದೇ ಯೋಗ್ಯವಾಗಿದೆ . ಸಂಪಾದಕರು

* ಹಿಂದುತ್ವವನ್ನು ಉದ್ದೇಶಪೂರ್ವಕವಾಗಿ ಆಕ್ರಮಕ ಎಂದು ನಿರ್ಧರಿಸುವ  ಖುರ್ಷಿದರು  ಕಾಶ್ಮೀರದಿಂದ ನಾಲ್ಕುವರೆ ಲಕ್ಷ ಹಿಂದುಗಳನ್ನು ಹೊರದಬ್ಬಿದಂತಹ ಕ್ರೂರ ಜಿಹಾದಿ ಭಯೋತ್ಪಾದಕರ ವಿಷಯದಲ್ಲಿ ಒಂದೇ ಒಂದು ಶಬ್ದ ಮಾತನಾಡಲಿಲ್ಲ ಇದನ್ನು ತಿಳಿಯಬೇಕು. ಸಂಪಾದಕರು

* ಒಡೆದು ಆಳುವ ಕಾಂಗ್ರೆಸ್ ನೂರು ಕೋಟಿ ಹಿಂದೂಗಳನ್ನು ಅಪಮಾನಿಸುತ್ತಿದೆಮತ್ತು ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲು ಆಗುತ್ತಿಲ್ಲ ಇದು ಹಿಂದೂಗಳಿಗೆ ಲಜ್ಜಾಸ್ಪದ ವಾಗಿದೆ. ಇಂತಹವರ ಮೇಲೆ ಕಾನೂನುರೀತ್ಯ  ಕ್ರಮಕೈಗೊಳ್ಳುವ ವರೆಗೂ ಹಿಂದೂಗಳು ಪ್ರಯತ್ನಿಸುತ್ತಿರಬೇಕು. –  ಸಂಪಾದಕರು

ಕಾಂಗ್ರೆಸ್ಸಿನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್

ನವದೆಹಲಿ – ಕಾಂಗ್ರೆಸ್ಸಿನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಇವರ ಸನ್ ರೈಸ್ ಓವರ್ ಅಯೋಧ್ಯಾ : ನೇಷನ್ ಹುಡ ಇನ್ ಅವರ್ ಟೈಮ್ಸ್. ಎಂಬ ಹೊಸ ಪುಸ್ತಕದಲ್ಲಿ ಅವರು ಹಿಂದುತ್ವವನ್ನು ಇಸ್ಲಾಮಿಕ್ ಸ್ಟೇಟ್ ಮತ್ತು ಬೋಕೊ ಹರಾಮ ಇಂತಹ ಜಿಹಾದಿ ಭಯೋತ್ಪಾದಕ ಸಂಘಟನೆ ಜೊತೆಗೆ ತುಲನೆ ಮಾಡಿದ್ದಾರೆ. ಆಕ್ರಮಕ ಹಿಂದುತ್ವ ಇದು ಇಸ್ಲಾಮಿಕ್ ಸ್ಟೇಟ್ ಮತ್ತು ಬೋಕೊ ಹರಾಮ ಇದರ ಹಾಗೆ ಇದೆ. ಎಂದು ಅವರು ಈ ಪುಸ್ತಕದಲ್ಲಿ ಆರೋಪಿಸಿದ್ದಾರೆ. ಈ ಪುಸ್ತಕವನ್ನು ೧೦ ನವೆಂಬರ ದಂದು ಪ್ರಕಾಶಿಸಲಾಗಿದೆ.

ಏನಿದೆ ಈ ಪುಸ್ತಕದಲ್ಲಿ?

ಸನ್ರೈಸ್ ಓವರ್ ಅಯೋಧ್ಯಾ : ನೇಶನ್ ಹೂಡ  ಇನ್ ಅವರ್ ಟೈಮ್ಸ್ ಈ ಪುಸ್ತಕದಲ್ಲಿ ದಿ ಸ್ಯಾಫ್ರನ್ ಸ್ಕೈ ಯ ಎಂಬ ಭಾಗದಲ್ಲಿ ಸಲ್ಮಾನ್ ಖುರ್ಷಿದ್ ರು ಹೇಳಿದ್ದಾರೆ, ಕಳೆದ ಕೆಲವು ವರ್ಷಗಳಿಂದ ಹಿಂದುತ್ವದ ಆಕ್ರಮಕ ಸ್ವರೂಪದಿಂದ ಋಷಿಮುನಿ ಮತ್ತು ಸಂತ ಇವರ ಪರಂಪರೆಯಿಂದ ಗುರುತಿಸಲ್ಪಡುವ ಸನಾತನ ಧರ್ಮದ ಹಿಂದುತ್ವ ಅಳಿಸಿಹೋಗಿದೆ. (ಋಷಿಮುನಿ ಮತ್ತು ಸಂತ ಇವರು ಹಿಂದುತ್ವದಿಂದ ಬೇರೆ ಎಂದು ಹೇಳಿ ಹಿಂದುಗಳ ದಿಕ್ಕುತಪ್ಪಿಸುವ ಚಾಲಾಕಿತನದ ಕಾಂಗ್ರೆಸ್ ನವರು ಸಂಪಾದಕರು) ಇದು ಆಕ್ರಮಕ ಹಿಂದುತ್ವವು ಇಸ್ಲಾಮಿಕ್ ಸ್ಟೇಟ್ ಮತ್ತು ಬೋಕೊ ಹರಾಮ ಇದರಂತಹ ಜಿಹಾದಿ ಇಸ್ಲಾಮಿಕ್ ಗುಂಪಿನ ರಾಜಕೀಯ ಸ್ವರೂಪದ ಹಾಗೆ ಇದೆ. ಪುಸ್ತಕದ ಪೃಷ್ಠ ಕ್ರಮಾಂಕ ೧೧೩ ರಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ.

ಖುರ್ಷಿದ್ ಇವರ ವಿರುದ್ಧ ಆರೋಪ ದಾಖಲು

ಈ ಪ್ರಕರಣದಲ್ಲಿ ದೆಹಲಿಯ ನ್ಯಾಯವಾದಿ ವಿವೇಕ ಗರ್ಗ ಇವರು ಸಲ್ಮಾನ್ ಖುರ್ಷಿದ್ ಇವರ ವಿರುದ್ಧ ದೆಹಲಿಯಲ್ಲಿ ದೂರನ್ನು ದಾಖಲಿಸಿದ್ದಾರೆ. ಹಿಂದುತ್ವವನ್ನು ಭಯೋತ್ಪಾದಕರ ಜೊತೆ  ತುಲನೆ ಮಾಡಿ ಖುರ್ಷಿದ್ ರು ದೇವರು ಹಿಂದುತ್ವದ ಪ್ರತಿಮೆ ಮಲಿನ ಗೊಳಿಸಿದ್ದಾರೆ ಅವರ ವಿರುದ್ಧ ಆರೋಪ ದಾಖಲು ಮಾಡಬೇಕು ಎಂದು ಬೇಡಿಕೆಯನ್ನು ಮನವಿಯಲ್ಲಿ ನೀಡಲಾಗಿದೆ.

ಯಾರಾದರೂ ಹಿಂದೂ ಧರ್ಮವನ್ನು ಅವಮಾನಿಸಿದರೆ  ನಾನು ಅದನ್ನು ವಿರೋಧಿಸುತ್ತೇನೆ ಸಲ್ಮಾನ್ ಖುರ್ಷಿದ್

ಇಲ್ಲಿಯವರೆಗೆ ಕಾಂಗ್ರೆಸ್ ನವರೇ ಅತ್ಯಧಿಕ ಪ್ರಮಾಣದಲ್ಲಿ ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ. ಹಾಗಾದರೆ ಖುರ್ಷಿದ್ ಇವರು ಯಾವಾತ್ತಾದರೂ ಕಾಂಗ್ರೆಸಗೆ ವಿರೋಧ ಮಾಡಿದ್ದಾರೆ ಯೆ? ರಾಮಸೇತು ಅಸ್ತಿತ್ವದಲ್ಲಿಲ್ಲ, ಭಗವಂತ ಶ್ರೀಕೃಷ್ಣ ಮತ್ತು ಶ್ರೀರಾಮ ಕಾಲ್ಪನಿಕವಾಗಿದ್ದಾರೆ, ಎಂದು ಹೇಳುವ ಕಾಂಗ್ರೆಸ ಪಕ್ಷವು, ಏನಾದರೂ ಹಿಂದೂ ಧರ್ಮಕ್ಕೆ ಗೌರವ ನೀಡಿದೆಯೇನು? ಆ ಸಮಯದಲ್ಲಿ ಖುರ್ಷಿದ್ ರು ಯಾಕೆ ಮೌನವಾಗಿದ್ದರು ?

ಪುಸ್ತಕದ ಬಗ್ಗೆ ನಡೆಯುತ್ತಿರುವ ಟೀಕೆಗಳ ನಂತರ ಖುರ್ಷಿದ್ ಇವರು ಮುಂದಿನಂತೆ  ಹೇಳಿದರು, ‘ಹಿಂದೂಧರ್ಮವು ಅತ್ಯಂತ ಉಚ್ಚ ದರ್ಜೆಯ ಧರ್ಮವಾಗಿದೆ. ಯಾರಾದರೂ ಹಿಂದೂ ಧರ್ಮವನ್ನು ಅವಮಾನಿಸಿದರೆ, ನಾನು ಅವರಿಗೆ ಅದರ ವಿರುದ್ಧ ಮಾತನಾಡುತ್ತೇನೆ. ನಾನು ಹೇಳಿದ್ದೇನೆಂದರೆ, ಯಾರು ಹಿಂದುತ್ವದ ರಾಜಕಾರಣ ಮಾಡುತ್ತಾರೆಯೋ, ಅದು ಅನುಚಿತವಾಗಿದೆ ಮತ್ತು ಇಸ್ಲಾಮಿಕ್ ಸ್ಟೇಟ ಸಹ ಅನುಚಿತವಾಗಿದೆ. ಅಯೋಧ್ಯೆಯ ವಿವಾದದಿಂದ ಸಮಾಜದಲ್ಲಿ ಬಿರುಕು ಬಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಸರ್ವೋಚ್ಚ ನ್ಯಾಯಾಲಯವು ಉಪಾಯ ಹುಡುಕಿದೆ, ಆ ನಿರ್ಣಯ ಹೇಗಿದೆ ನಾವು ಸೋತೆವು ನೀವು ಗೆದ್ದಿರಿ ಎಂದೆನಿಸುವುದಿಲ್ಲ. ಪ್ರಸ್ತುತ ಅಯೋಧ್ಯೆಯಲ್ಲಿ ನಡೆಯುತ್ತಿರುವ ಉತ್ಸವವು ಏಕಪಕ್ಷೀಯ ಉತ್ಸವ ಇರುವ ಹಾಗೆ ಕಾಣುತ್ತದೆ.

ಕೇಸರಿ ಭಯೋತ್ಪಾದನೆ, ಅನ್ನುವ ಪಕ್ಷದ ಸದಸ್ಯರಿಂದ ಇನ್ನೇನು ಅಪೇಕ್ಷಿಸಬಹುದು ? ಭಾಜಪ

ಈ ಸಂದರ್ಭದಲ್ಲಿ ಭಾಜಪಾ ನಾಯಕ ಅಮಿತ್ ಮಾಳವೀಯ ಇವರು ಟ್ವೀಟ್ ಮಾಡಿ ಖುರ್ಷಿದ್ ಅವರನ್ನು ಟೀಕಿಸಿದ್ದಾರೆ, ಮುಸಲ್ಮಾನ ಓಟಿಗಾಗಿ ಕೇಸರಿ ಭಯೋತ್ಪಾದನೆ ಅನ್ನುವಂತಹ ಕಲ್ಪನೆ ಮಂಡಿಸುವ ಪಕ್ಷದ ಸದಸ್ಯರಿಂದ ಇದನ್ನು ಬಿಟ್ಟು ಬೇರೇನು ಅಪೇಕ್ಷೆ ಮಾಡಲಾದಿತು ? ಎಂದು ಮಾಲವೀಯರು ಪ್ರಶ್ನಿಸಿದ್ದಾರೆ.