‘ತಪ್ಪುಗಳ ಪ್ರಮಾಣ ಕಡಿಮೆ ಮತ್ತು ಹೆಚ್ಚು ಇರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ಇಟ್ಟ ಲಕೋಟೆಗಳ ಕಡೆ ನೋಡಿ ಮತ್ತು ಆ ಲಕೋಟೆಗಳನ್ನು ಕೈಯಲ್ಲಿ ತೆಗೆದುಕೊಂಡಾಗ ಏನನಿಸುತ್ತದೆ ?’, ಎಂಬ ಬಗ್ಗೆ ಸಾಧಕರು ಮಾಡಿದ ಸೂಕ್ಷ್ಮ ಪ್ರಯೋಗ !

ಶ್ರೀ. ಭೂಷಣ ಕೆರಕರ

‘ಅಧ್ಯಾತ್ಮದಲ್ಲಿ ಪರಿಪೂರ್ಣ ಸೇವೆಗೆ ಮಹತ್ವವಿದೆ. ಪರಿಪೂರ್ಣ ಈಶ್ವರನೊಂದಿಗೆ ಏಕರೂಪವಾಗಬೇಕಾದರೆ ಸಾಧಕರ ಪ್ರತಿಯೊಂದು ಕೃತಿಯು ತಪ್ಪಿಲ್ಲದೇ ಆಗಬೇಕು. ಸಾಧನೆ ಮಾಡಿ ಅವನೊಂದಿಗೆ ಏಕರೂಪವಾಗಲು ಸೇವೆಯನ್ನು ತಪ್ಪುರಹಿತ ಮಾಡುವುದು ಆವಶ್ಯಕವಾಗಿದೆ. ಸೇವೆಗಳಲ್ಲಿ ತಪ್ಪುಗಳಾಗುವುದರಿಂದ ರಜ-ತಮವು ಹೆಚ್ಚಾಗಿ ಸಾತ್ತ್ವಿಕತೆಯು ಕಡಿಮೆಯಾಗುತ್ತದೆ. ಅಧ್ಯಾತ್ಮದ ಈ ಅಂಶವನ್ನು ಒತ್ತು ನೀಡುವ ಸೂಕ್ಷ್ಮದ ಒಂದು ಪ್ರಯೋಗವನ್ನು ಗೋವಾದ, ರಾಮನಾಥಿಯ ಸನಾತನದ ಆಶ್ರಮದಲ್ಲಿ ಮಾಡಲಾಯಿತು. ದೈನಿಕ ‘ಸನಾತನ ಪ್ರಭಾತ’ಕ್ಕೆ ಸಂಬಂಧಪಟ್ಟ ಸೇವೆಯನ್ನು ಮಾಡುವ ೧೩ ಸಾಧಕರು ಮತ್ತು ಇತರ ಸೇವೆಗಳನ್ನು ಮಾಡುವ ಒಬ್ಬರು ಸಾಧಕರು ಹೀಗೆ ಒಟ್ಟು ೧೪ ಸಾಧಕರು ಈ ಸೂಕ್ಷ್ಮದಲ್ಲಿನ ಪ್ರಯೋಗವನ್ನು ಮಾಡಿದರು.

೧. ಪ್ರಯೋಗದ ಸ್ವರೂಪ

ಅ. ೨೨.೫.೨೦೨೧ ಈ ದಿನದ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಯನ್ನು ‘ಅ’ ಎಂದು ಬರೆದ ಮುಚ್ಚಿದ ಲಕೋಟೆಯಲ್ಲಿ ಇಡಲಾಗಿತ್ತು. ಈ ದೈನಿಕದಲ್ಲಿ ೨ ತಪ್ಪುಗಳಾಗಿದ್ದವು. ಅವುಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ಗಮನಕ್ಕೆ ತಂದು ಕೊಟ್ಟಿದ್ದರು.

ಆ. ೨೪.೫.೨೦೨೧ ಈ ದಿನದ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಯನ್ನು ‘ಆ’ ಎಂದು ಬರೆದ ಮುಚ್ಚಿದ ಲಕೋಟೆಯಲ್ಲಿ ಇಡಲಾಗಿತ್ತು. ಈ ದೈನಿಕದಲ್ಲಿ ೧೫ ತಪ್ಪುಗಳಾಗಿದ್ದವು. ಅವುಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ಗಮನಕ್ಕೆ ತಂದು ಕೊಟ್ಟರು.

‘ತಪ್ಪುಗಳಿಂದ ದೈನಿಕದ ಸಾತ್ತ್ವಿಕತೆಯ ಮೇಲೆ ಹೇಗೆ ಪರಿಣಾಮವಾಗುತ್ತದೆ’, ಎಂದು ಸಾಧಕರ ಗಮನಕ್ಕೆ ಬರಲೆಂದು ಪರಾತ್ಪರ ಗುರು ಡಾ. ಆಠವಲೆಯವರು ‘ಮೇಲಿನ ಲಕೋಟೆಗಳ ಕಡೆಗೆ ನೋಡಿ ಮತ್ತು ಅವುಗಳನ್ನು ಕೈಯಲ್ಲಿ ಹಿಡಿದುಕೊಂಡಾಗ ಸಾಧಕರಿಗೆ ಏನೆನಿಸುತ್ತದೆ ?’, ಎಂಬ ಬಗ್ಗೆ ಪ್ರಯೋಗ ಮಾಡಲು ಹೇಳಿದರು. ಸಾಧಕರು ಮಾಡಿದ ಪ್ರಯೋಗದ ಬಗೆಗಿನ ವಿವರಣೆಯನ್ನು ಮುಂದೆ ಕೊಡಲಾಗಿದೆ.

೨. ೨೨.೫.೨೦೨೧ ಈ ದಿನದ ಕಡಿಮೆ ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಯನ್ನು ಇಟ್ಟ ‘ಅ’ ಲಕೋಟೆ

೨ ಅ. ಬಂದ ತೊಂದರೆದಾಯಕ ಅನುಭೂತಿ

೨ ಅ ೧. ಅಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ

೨ ಅ ೧ ಅ. ಲಕೋಟೆಯ ಕಡೆಗೆ ನೋಡಿದಾಗ : ‘ನನ್ನ ಎದೆಯಲ್ಲಿ ಸ್ವಲ್ಪ ಧಡಧಡವಾಯಿತು. ನನ್ನ ಶ್ವಾಸೋಚ್ಛಾಸವು ವೇಗವಾಗಿ ನಡೆಯುತ್ತಿರುವಂತೆ ಅನಿಸಿತು.’ – ಶ್ರೀ. ನೀಲೇಶ

೨ ಆ. ಬಂದ ಒಳ್ಳೆಯ ಅನುಭೂತಿ

೨ ಆ ೧. ಆಧ್ಯಾತ್ಮಿಕ ತೊಂದರೆ ಇರುವ ಸಾಧಕ

೨ ಆ ೧ ಅ. ಲಕೋಟೆಯ ಕಡೆಗೆ ನೋಡಿದಾಗ : ‘ನನಗೆ ಶಾಂತ ಮತ್ತು ಒಳ್ಳೆಯದೆನಿಸಿತು.’ – ಓರ್ವ ಸಾಧಕ

(‘ಸಾಧಕನಿಗೆ ತೀವ್ರ ಆಧ್ಯಾತ್ಮಿಕ ತೊಂದರೆ ಇದ್ದರೂ ಅವನ ಉತ್ತರವು ಯೋಗ್ಯವಾಗಿತ್ತು. ನಾಮಜಪ ಮುಂತಾದ ಉಪಾಯವನ್ನು ಪೂರ್ಣಗೊಳಿಸಿದ ನಂತರ ಅವನು ಈ ಪ್ರಯೋಗವನ್ನು ಮಾಡಿದ್ದನು.’ – ಸಂಕಲನಕಾರರು)

೨ ಆ ೨. ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ

೨ ಆ ೨ ಅ. ಆಧ್ಯಾತ್ಮಿಕ ಸ್ತರದ ಉಪಾಯವಾಗಿರುವುದು ಅರಿವಾಗುವುದು

೨ ಆ ೨ ಅ ೧. ಲಕೋಟೆಯ ಕಡೆಗೆ ನೋಡಿದಾಗ

ಅ. ‘ನನ್ನ ಎದೆಯ ಮೇಲಿನ ಒತ್ತಡ ಕಡಿಮೆಯಾಯಿತು.’ – ಕು. ಸಾಯಲಿ

ಆ. ‘ನನಗೆ ‘ನನ್ನ ತಲೆ ಹಗುರವಾಗಿ ಬಿಳಿ ಪ್ರಕಾಶವು ಶರೀರದಲ್ಲಿ ಹೋಗುತ್ತಿದೆ, ಹಾಗೆಯೇ ತಲೆಯ ಮೇಲಿನ ತೊಂದರೆದಾಯಕ ಆವರಣವು ದೂರವಾಗುತ್ತಿದೆ’, ಎಂದು ಅರಿವಾಯಿತು.’ – ಶ್ರೀ. ಭೂಷಣ

೨ ಆ ೨ ಅ ೨. ಲಕೋಟೆಯನ್ನು ಕೈಯಲ್ಲಿ ಹಿಡಿದುಕೊಂಡಾಗ : ‘ನನಗೆ ನನ್ನ ಕೈಯಲ್ಲಿನ ತೊಂದರೆದಾಯಕ ಸ್ಪಂದನಗಳು ಹೋಗುವುದರ ಅರಿವಾಯಿತು.’ – ಶ್ರೀ. ವಿಕ್ರಮ

೨ ಆ ೨ ಆ. ಇತರ ಒಳ್ಳೆಯ ಅನುಭೂತಿಗಳು

೨ ಆ ೨ ಆ ೧. ಲಕೋಟೆಗಳ ಕಡೆಗೆ ನೋಡಿದಾಗ

ಅ. ‘ನನ್ನ ಗಮನ ಶ್ವಾಸದ ಮೇಲೆ ಕೇಂದ್ರೀಕೃತವಾಯಿತು.’ – ಶ್ರೀ. ಪ್ರಶಾಂತ

ಆ. ‘ನನ್ನ ನಾಮಜಪವು ಒಂದೇ ಲಯದಲ್ಲಿ ನಡೆಯಿತು. ಆ ಸಮಯದಲ್ಲಿ ನನ್ನಿಂದ ದೀರ್ಘ ಶ್ವಾಸವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ಆಗ ಪರಾತ್ಪರ ಗುರು ಡಾ. ಆಠವಲೆಯವರ ನೆನಪಾಗಿ ನನಗೆ ಭಾವಜಾಗೃತಿಯಾಯಿತು.’ – ಶ್ರೀ. ಭೂಷಣ

ಇ. ‘ನಮಗೆ ‘ಲಕೋಟೆಯಿಂದ ಎಲ್ಲೆಡೆ ಚೈತನ್ಯವು ಪ್ರಕ್ಷೇಪಿತವಾಗುತ್ತಿದೆ’, ಎಂದು ಅರಿವಾಯಿತು.’ – ಶ್ರೀ. ಉಮೇಶ, ಶ್ರೀ. ವಿಕ್ರಮ ಮತ್ತು ಸೌ. ಸಮೀಕ್ಷಾ

ಈ. ‘ನನಗೆ ನನ್ನ ಸುತ್ತಲೂ ಟೊಳ್ಳು ಇರುವುದು ಅರಿವಾಯಿತು ಮತ್ತು ನಿರ್ವಿಚಾರ ಅವಸ್ಥೆಯನ್ನು ಅನುಭವಿಸಲು ಸಿಕ್ಕಿತು.’ – ಪ್ರಾ. ಮಹಾವೀರ

೨ ಆ ೨ ಆ ೨. ಲಕೋಟೆಯನ್ನು ಕೈಯಲ್ಲಿ ಹಿಡಿದುಕೊಂಡಾಗ

ಅ. ‘ನಮಗೆ ಸ್ಥಿರತೆಯ ಅರಿವಾಯಿತು.’ – ಸೌ. ವೇದಶ್ರೀ ಮತ್ತು ಕು. ಮಾನಸಿ

ಆ. ‘ನನ್ನ ಕೈಗೆ ತಣ್ಣಗಿನ ಸಂವೇದನೆಯ ಅರಿವಾಯಿತು.’ – ಶ್ರೀ. ಕೆರಕರ

ಇ. ‘ನಮ್ಮ ನಾಮಜಪವು ಆರಂಭವಾಯಿತು.’ – ಸರ್ವಶ್ರೀ ಭೂಷಣ, ಉಮೇಶ, ವಿಕ್ರಮ, ಸಂತೋಷ, ಸೌ. ಸ್ನೇಹಲ್, ಕು. ಸಾಯಲಿ ಮತ್ತು ಕು. ಮಾನಸಿ (ಪ್ರತಿಯೊಬ್ಬ ಸಾಧಕನ ಬೇರೆ ಬೇರೆ ನಾಮಜಪಗಳು ಆರಂಭವಾದವು, ಉದಾ. ಓಂ, ನಿರ್ವಿಚಾರ, ಶ್ರೀಕೃಷ್ಣ.)

೩. ೨೪.೫.೨೦೨೧ ಈ ದಿನದ ಹೆಚ್ಚು ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಯನ್ನು ಇಟ್ಟಿರುವ ‘ಆ’ ಲಕೋಟೆ

೩ ಅ. ಬಂದ ತೊಂದರೆದಾಯಕ ಅನುಭೂತಿ

೩ ಅ ೧. ಆಧ್ಯಾತ್ಮಿಕ ತೊಂದರೆ ಇರುವ ಸಾಧಕ

೩ ಅ ೧ ಅ. ಲಕೋಟೆಯ ಕಡೆಗೆ ನೋಡಿದಾಗ : ‘ನನಗೆ ನನ್ನ ಎದೆಯ ಮೇಲೆ ಒತ್ತಡದ ಅರಿವಾಯಿತು.’ – ಓರ್ವ ಸಾಧಕ (‘ಸಾಧಕನಿಗೆ ತೀವ್ರ ಆಧ್ಯಾತ್ಮಿಕ ತೊಂದರೆ ಇದ್ದರೂ ಅವನ ಉತ್ತರ ಯೋಗ್ಯ ಬಂದಿತು. ನಾಮಜಪಾದಿ ಉಪಾಯಗಳು ಪೂರ್ಣವಾದ ನಂತರ ಅವನು ಈ ಪ್ರಯೋಗವನ್ನು ಮಾಡಿದ್ದನು.’ – ಸಂಕಲನಕಾರರು)

೩ ಅ ೨. ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ

೩ ಅ ೨ ಅ. ಲಕೋಟೆಯ ಕಡೆಗೆ ನೋಡಿದಾಗ

೧. ‘ನಮ್ಮ ತಲೆ ಜಡವಾಯಿತು ಮತ್ತು ನಮಗೆ ಜಡತ್ವದ ಅರಿವಾಯಿತು.’ – ಶ್ರೀ. ಭೂಷಣ, ಸೌ. ಸ್ನೇಹಲ್, ಕು. ಮಾನಸಿ ಮತ್ತು ಶ್ರೀ. ಕೆರಕರ

೨. ‘ನನ್ನ ತಲೆಯ ಮೇಲೆ ಕೆಟ್ಟ ಶಕ್ತಿಯ ಆವರಣ ಬಂದಿರುವುದು ಅರಿವಾಯಿತು.’ – ಶ್ರೀ. ಭೂಷಣ

೩. ‘ನನ್ನ ಕಣ್ಣುಗಳಲ್ಲಿ ಉಷ್ಣತೆಯ ಅರಿವಾಯಿತು.’ – ಸೌ. ವೇದಶ್ರೀ

೪. ‘ನನ್ನ ಹೃದಯದ ಬಡಿತವು ಹೆಚ್ಚಾಯಿತು.’ – ಪ್ರಾ. ಮಹಾವೀರ

೫. ‘ನಮಗೆ ಶ್ವಾಸವನ್ನು ತೆಗೆದುಕೊಳ್ಳಲು ತೊಂದರೆಯಾಗುತ್ತಿತ್ತು.’ – ಶ್ರೀ. ಭೂಷಣ ಮತ್ತು ಕು. ಮಾನಸಿ

೬. ‘ನಮಗೆ ನಮ್ಮ ಎದೆಯ ಮೇಲೆ ಒತ್ತಡದ ಅರಿವಾಯಿತು.’ – ಕು. ಸಾಯಲಿ, ಸೌ. ಸಮೀಕ್ಷಾ, ಸೌ. ಸ್ನೇಹಲ್, ಸೌ. ವೇದಶ್ರೀ ಮತ್ತು ಶ್ರೀ. ಕೇರಕರ

೭. ‘ನನಗೆ ‘ಲಕೋಟೆಯ ಮೇಲೆ ಬಹಳಷ್ಟು ತೊಂದರೆದಾಯಕ ಆವರಣವು ಬಂದಿದೆ’, ಎಂದು ಅರಿವಾಯಿತು.’ – ಕು. ಸಾಯಲಿ

೮. ‘ನಮಗೆ ಪ್ರಯತ್ನಪೂರ್ವಕ ನಾಮಜಪವನ್ನು ಮಾಡಬೇಕಾಯಿತು.’ – ಪ್ರಾ. ಮಹಾವೀರ ಮತ್ತು ಶ್ರೀ. ಭೂಷಣ

೩ ಅ ೨ ಆ. ಲಕೋಟೆಯನ್ನು ಕೈಯಲ್ಲಿ ಹಿಡಿದುಕೊಂಡಾಗ

೧. ‘ನಮಗೆ ಅಸ್ವಸ್ಥತೆಯ ಅರಿವಾಯಿತು.’ – ಕು. ಸಾಯಲಿ ಮತ್ತು ಸೌ. ಸಮೀಕ್ಷಾ

೨. ‘ನನಗೆ ‘ಕೈಯಲ್ಲಿ ತೊಂದರೆದಾಯಕವಾಗಿರುವುದು ಏನೋ ಹೋಗುತ್ತಿದೆ’, ಎಂದು ಅನಿಸಿತು. ನನಗೆ ಲಕೋಟೆಯ ತೂಕವು ಹೆಚ್ಚಾದಂತೆ ಅರಿವಾಯಿತು.’ – ಶ್ರೀ. ವಿಕ್ರಮ

೩ ಆ. ಬಂದ ಒಳ್ಳೆಯ ಅನುಭೂತಿ

೩ ಆ ೧. ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ

೩ ಆ ೧ ಅ. ಲಕೋಟೆಯ ಕಡೆಗೆ ನೋಡಿದಾಗ

೧. ‘ನನ್ನ ನಾಮಜಪವು ವೇಗದಿಂದ ಆಗತೊಡಗಿತು.’ – ಕು. ಸಾಯಲಿ

೨. ‘ನನ್ನ ನಾಮಜಪವು ಆಗುತ್ತಿತ್ತು ಮತ್ತು ನನಗೆ ಶಾಂತವೆನಿಸಿತು.’ – ಶ್ರೀ. ಪ್ರಶಾಂತ

೩. ‘ನನಗೆ ‘ಲಕೋಟೆಯಿಂದ ಒಳ್ಳೆಯ ಶಕ್ತಿಯು ಪ್ರಕ್ಷೇಪಿತವಾಗುತ್ತಿರುವುದು ಅರಿವಾಯಿತು.’ – ಶ್ರೀ. ಉಮೇಶ

೪. ‘ಅ’ ಮತ್ತು ‘ಆ’ ಈ ಎರಡೂ ಲಕೋಟೆಗಳ ಸಂದರ್ಭದಲ್ಲಿ ಅರಿವಾದ ತುಲನಾತ್ಮಕ ಅಂಶಗಳು

೪. ಅ. ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ

೪ ಅ ೧. ಲಕೋಟೆಗಳ ಕಡೆಗೆ ನೋಡಿದಾಗ : ‘ನನಗೆ ‘ಆ’ ಲಕೋಟೆಯ ತುಲನೆಯಲ್ಲಿ ‘ಅ’ ಲಕೋಟೆಯ ಮೇಲೆ ತೊಂದರೆದಾಯಕ ಶಕ್ತಿಯ ಆವರಣವು ಕಡಿಮೆ ಇದೆ’, ಎಂದು ಅರಿವಾಯಿತು.’ – ಕು. ಸಾಯಲಿ

೪ ಆ ೨. ಲಕೋಟೆಗಳನ್ನು ಕೈಗಳಲ್ಲಿ ತೆಗೆದುಕೊಂಡ ನಂತರ : ‘ನಮಗೆ ‘ಆ’ ಲಕೋಟೆಯ ತುಲನೆಯಲ್ಲಿ ‘ಅ’ ಲಕೋಟೆಯು ಹಗುರವೆನಿಸಿತು.’ – ಶ್ರೀ. ಕೆರಕರ, ಕು. ಮಾನಸಿ ಮತ್ತು ಶ್ರೀ. ವಿಕ್ರಮ

ದೈನಿಕ ‘ಸನಾತನ ಪ್ರಭಾತ’ಕ್ಕೆ ಸಂತರ ಆಶೀರ್ವಾದವು ಲಭಿಸಿದುದರಿಂದ ಅದರಲ್ಲಿ ಮೂಲತಃ ಚೈತನ್ಯವಿದೆ. ಆದುದರಿಂದ ಕೆಲವು ಸಾಧಕರಿಗೆ ದೈನಿಕದಲ್ಲಿ ವ್ಯಾಕರಣ, ಹಾಗೆಯೇ ಶುದ್ಧಲೇಖನಗಳಿಗೆ ಸಂಬಂಧಿಸಿದಂತೆ ಆದ ತಪ್ಪುಗಳಿಂದ ತೊಂದರೆಯ ಅರಿವಾದರೂ ಅದರಲ್ಲಿನ ಮೂಲಭೂತ ಚೈತನ್ಯದಿಂದ ಒಳ್ಳೆಯದೆನಿಸಿತು. ಹೀಗಿದ್ದರೂ, ಯಾವುದೇ ಸ್ವರೂಪದ ತಪ್ಪುಗಳಿಂದ ದೈನಿಕ ‘ಸನಾತನ ಪ್ರಭಾತ’ದಲ್ಲಿನ ಚೈತನ್ಯವು ಕಡಿಮೆಯಾಗದಂತೆ ನೋಡಿಕೊಳ್ಳುವುದು ಆವಶ್ಯಕವಾಗಿದೆ. ಇದಕ್ಕಾಗಿ ಅಧ್ಯಯನವೆಂದು ಈ ಪ್ರಯೋಗವನ್ನು ಮಾಡಿಸಿಕೊಳ್ಳಲಾಯಿತು.‘ಸೇವೆಯಲ್ಲಿ ತಪ್ಪುಗಳ ಪ್ರಮಾಣವು ಹೆಚ್ಚಾಗಿದ್ದರೆ ರಜ-ತಮವು ಹೆಚ್ಚಾಗಿ ಸಾತ್ತ್ವಿಕತೆಯು ಕಡಿಮೆಯಾಗುತ್ತದೆ. ತದ್ವಿರುದ್ಧ ತಪ್ಪುಗಳು ಕಡಿಮೆ ಇದ್ದರೆ ಸಾತ್ತ್ವಿಕತೆ ಮತ್ತು ಚೈತನ್ಯದ ಅರಿವಾಗುತ್ತದೆ’, ಈ ಸಿದ್ಧಾಂತಕ್ಕನುಸಾರ ತಪ್ಪುಗಳ ಪ್ರಮಾಣ ಹೆಚ್ಚಿರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆ ಇರುವ ಲಕೋಟೆಯ ಕಡೆಗೆ ನೋಡಿ ಸಾಧಕರಿಗೆ ತೊಂದರೆದಾಯಕವೆನಿಸಿತು ಮತ್ತು ತಪ್ಪುಗಳು ಕಡಿಮೆ ಇರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆ ಇರುವ ಲಕೋಟೆಯ ಕಡೆಗೆ ನೋಡಿ ಬಹಳಷ್ಟು ಸಾಧಕರಿಗೆ ಒಳ್ಳೆಯದೆನಿಸಿತು ಮತ್ತು ಅನುಭೂತಿಯೂ ಬಂದಿತು.

– ಶ್ರೀ. ಭೂಷಣ ಕೇರಕರ (ಆಧ್ಯಾತ್ಮಿಕ ಮಟ್ಟ ಶೇ. ೬೭), ಸಹಸಂಪಾದಕರು, ‘ಸನಾತನ ಪ್ರಭಾತ ನಿಯತಕಾಲಿಕೆ ಸಮೂಹ. (೧೪.೯.೨೦೨೧)

*  ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ.

*  ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.