‘ಬದಾಯು’ದ ಮೊದಲಿನ ಹೆಸರು ‘ವೇದಾಮವು’ ಎಂದಿತ್ತು ! – ಯೋಗಿ ಆದಿತ್ಯನಾಥ

ಬದಾಯು (ಉತ್ತರಪ್ರದೇಶ) – ಪ್ರಾಚೀನ ಕಾಲದಲ್ಲಿ ‘ಬದಾಯು’ವಿನ ಮೊದಲ ಹೆಸರು ‘ವೇದಾಮವು’ ಎಂದಿತ್ತು. ಅದು ವೇದಗಳ ಅಧ್ಯಯನದ ಸ್ಥಾನವಾಗಿತ್ತು, ಎಂದೂ ಹೇಳಲಾಗುತ್ತದೆ, ಗಂಗಾನದಿಯನ್ನು ಪೃಥ್ವಿಯ ಮೇಲೆ ತರಲು ಮಹಾರಾಜ ಭಗೀರಥ ಇವರು ಇಲ್ಲಿಯೇ ತಪಸ್ಸನ್ನು ಮಾಡಿದ್ದರು, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಪ್ರತಿಪಾದಿಸಿದರು. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅವರ ಹೇಳಿಕೆಯ ನಂತರ ‘ಬದಾಯು’ ಹೆಸರು ಬದಲಾಯಿಸಿ ಇನ್ನು ‘ವೇದಾಮವು’ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಮೊದಲು ರಾಜ್ಯದಲ್ಲಿನ ಅನೇಕ ನಗರಗಳು ಮತ್ತು ಜಿಲ್ಲೆಗಳಿಗೆ ಮೊಗಲರು ನೀಡಿರುವ ಹೆಸರುಗಳನ್ನು ಬದಲಾಯಿಸಲಾಗಿತ್ತು.