ಉತ್ತರಪ್ರದೇಶದಲ್ಲಿ ಮತಾಂತರ ಪ್ರಕರಣದಲ್ಲಿ ಬಂಧಿಸಲ್ಪಟ್ಟವನಿಗೆ ಅಲ್ ಕಾಯದಾ ಜೊತೆ ನಂಟು

ಇದರಿಂದ ಮತಾಂತರದ ಮೂಲಕ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಜಿಹಾದಿಗಳ ಸಂಚು ಗಮನಕ್ಕೆ ಬರುತ್ತದೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಮತಾಂತರದ ಪ್ರಕರಣವು ಜಿಹಾದಿ ಭಯೋತ್ಪಾದಕ ಸಂಘಟನೆ ಅಲ್ ಕಾಯಿದಾ ಜೊತೆ ನಂಟಿರು ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಈ ಪ್ರಕರಣದಲ್ಲಿ ಇದು ವರೆಗೆ ದೇಶದಾದ್ಯಂತ 16 ಜನರನ್ನು ಬಂಧಿಸಲಾಗಿದೆ.

ಉತ್ತರಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾಸಂಚಾಲಕ ಪ್ರಶಾಂತ ಕುಮಾರ್ ಇವರು ಈ ಬಗ್ಗೆ ಮಾತನಾಡುತ್ತಾ, ಮಹಾರಾಷ್ಟ್ರದಿಂದ ಬಂಧಿಸಲಾಗಿರುವ ಆಡಮ್ ಮತ್ತು ಕೌಸರ್ ಆಲಂ ಇವರ ವಿಚಾರಣೆಯಿಂದ ಸಿಕ್ಕಿದ ಮಾಹಿತಿಯಿಂದ ಈ ಇವರಿಬ್ಬರೂ ಅಲ್-ಕಾಯದಾ ಸಿದ್ಧಾಂತಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.