ಗ್ರೀಸ್ ದೇಶದಲ್ಲಿ `ಹಲಾಲ್’ ಪದ್ದತಿಯ ಪ್ರಾಣಿ ಹತ್ಯೆಗೆ ನಿಷೇಧ ! – ಸರ್ವೋಚ್ಚ ನ್ಯಾಯಾಲಯದ ತೀರ್ಪು

‘ಹಲಾಲ್’ ಪದ್ಧತಿಯ ಹತ್ಯೆಯು ಅಮಾನವೀಯ ! – ನ್ಯಾಯಾಲಯದ ಅಭಿಪ್ರಾಯ

ಗ್ರೀಸ್ ನ್ಯಾಯಾಲಯವು ಅಂತಹ ನಿರ್ಧಾರವನ್ನು ನೀಡಬಲ್ಲದು, ಹೀಗಿರುವಾಗ ಭಾರತ ಸರಕಾರವೂ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕು ! ಅಲ್ಲದೆ, `ಹಲಾಲ್’ ಪ್ರಮಾಣಪತ್ರಗಳ ಮೇಲೆಯೂ ನಿರ್ಬಂಧ ಹೇರಬೇಕು !-ಸಂಪಾದಕರು 

ಸರ್ವೋಚ್ಚ ನ್ಯಾಯಾಲಯ ಗ್ರೀಸ್

ಅಥೆನ್ಸ್ (ಗ್ರೀಸ್) – ಗ್ರೀಸ್‍ನ ಸರ್ವೋಚ್ಚ ನ್ಯಾಯಾಲಯವು `ಹಲಾಲ್’ ಪದ್ಧತಿಯಿಂದ ಪ್ರಾಣಿಗಳ ಹತ್ಯೆ ಮಾಡುವುದನ್ನು ನಿಷೇಧಿಸಿದೆ. ನ್ಯಾಯಾಲಯ ಇದನ್ನು `ಅಮಾನವೀಯತೆ’ ಎಂದು ಕರೆದಿದೆ. ಪರಿಸರ ಮತ್ತು ಪ್ರಾಣಿ ಪ್ರೇಮಿಗಳ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಈ ಆದೇಶ ನೀಡಿದೆ. ಈ ಸಂಘಟನೆಗಳು ಪ್ರಾಣಿಗಳನ್ನು ಕೊಲ್ಲುವ ಮೊದಲು ಅವುಗಳನ್ನು ಮೂರ್ಛೀತಗೊಳಿಸಬೇಕು ಎಂದು ಒತ್ತಾಯಿಸಿದ್ದವು. ನ್ಯಾಯಾಲಯದ ತೀರ್ಪಿನ ಪ್ರಕಾರ, ಗ್ರೀಸ್‍ನಲ್ಲಿ ಯಾವುದೇ ಪ್ರಾಣಿಯನ್ನು ಕೊಲ್ಲುವ ಮೊದಲು ಮೂರ್ಛೆ ತಪ್ಪಿಸಬೇಕು ಎಂಬ ನಿಯಮವಿದೆ.

1. ನ್ಯಾಯಾಲಯವು ತೀರ್ಪನ್ನು ನೀಡುತ್ತಾ, ಯಾವುದೇ ಧರ್ಮದ ಆಚರಣೆಗಳನ್ನು ನೋಡಿದಾಗ ಪ್ರಾಣಿಗಳ ಹಕ್ಕುಗಳನ್ನು ಕಡೆಗಣಿಸುವಂತಿಲ್ಲ. ಸರಕಾರವು ಪ್ರಾಣಿಗಳ ಹಕ್ಕು ಮತ್ತು ಧಾರ್ಮಿಕ ಆಚರಣೆಗಳ ಸಮನ್ವಯವನ್ನು ಸಾಧ್ಯಗೊಳಿಸಬೇಕು, ಜೊತೆಗೆ ದೇಶದ ಕಸಾಯಿಖಾನೆಗಳ ಮೇಲೆ ನಿಗಾ ಇಡಬೇಕು ಎಂದಿದೆ.

2. ನ್ಯಾಯಾಲಯದ ಈ ತೀರ್ಪನ್ನು ಗ್ರೀಸ್‍ನ ಕೆಲವು ಧಾರ್ಮಿಕ ಸಂಘಟನೆಗಳು ವಿರೋಧಿಸಿವೆ. ಯಹೂದಿಗಳ `ಯುರೋಪಿಯನ್ ಅಸೊಸಿಯೇಶನ್’ನ ಅಧ್ಯಕ್ಷ ರಬ್ಬಿ ಮಾರ್ಗೋಲಿನ್ ಇವರು `ಈ ನಿರ್ಧಾರ’ವನ್ನು ಯಹೂದಿಗಳ ಧಾರ್ಮಿಕ ಸ್ವಾತಂತ್ರ್ಯದಲ್ಲಿ ನ್ಯಾಯಾಲಯದ ಹಸ್ತಕ್ಷೇಪವಾಗಿದೆ’, ಎಂಬ ಪದಗಳಲ್ಲಿ ಟೀಕಿಸಿದ್ದಾರೆ. `ಯುರೋಪಿನಾದ್ಯಂತ ಯಹೂದಿಗಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿದೆ’, ಎಂದು ಅವರು ಹೇಳಿದರು.

3. ಈ ಮೊದಲು ಬೆಲ್ಜಿಯಂ ನ್ಯಾಯಾಲಯವು ಡಿಸೆಂಬರ್ 17, 2020 ರಂದು ಇದೇ ರೀತಿ ನಿರ್ಬಂಧ ಹೇರಿತ್ತು. ಬೆಲ್ಜಿಯಂನ ಫ್ಲೆಮಿಶ್ ನಗರದಲ್ಲಿ, ಪ್ರಾಣಿಗಳನ್ನು ಹತ್ಯೆ ಮಾಡುವ ಮೊದಲು ಪ್ರಜ್ಞಾಹೀನಗೊಳಿಸುವುದು ಕಡ್ಡಾಯಗೊಳಿಸಲಾಗಿತ್ತು.

‘ಹಲಾಲ್ ಮಾಂಸ’ ಎಂದರೇನು ?

ಹಿಂದೂ, ಸಿಖ್ಕ ಮತ್ತು ಇತರ ಭಾರತೀಯ ಧರ್ಮಗಳಲ್ಲಿ, ಪ್ರಾಣಿಗಳನ್ನು `ಜಟಕಾ’ ಪದ್ಧತಿಯಲ್ಲಿ ಪ್ರಾಣಿಗಳನ್ನು ಕೊಲ್ಲಲಾಗುತ್ತದೆ. ಇದರಲ್ಲಿ ಪ್ರಾಣಿಯ ಕುತ್ತಿಗೆಯನ್ನು ಒಂದೇ ಹೊಡೆತದಲ್ಲಿ ಕತ್ತರಿಸಲಾಗುತ್ತದೆ. ಇದರಿಂದ ಪ್ರಾಣಿಗಳಿಗೆ ಸ್ವಲ್ಪ ತೊಂದರೆಯಾಗುತ್ತದೆ. ತದ್ವಿರುದ್ಧವಾಗಿ ಹಲಾಲ್ ವಿಧಾನದಲ್ಲಿ ಪ್ರಾಣಿಗಳ ಕುತ್ತಿಗೆಯ ನರವನ್ನು ಕತ್ತರಿಸಿ ಬಿಡಲಾಗುತ್ತದೆ. ಇದರಿಂದ ಪ್ರಾಣಿಗಳ ರಕ್ತ ಧಾರಾಕಾರವಾಗಿ ಹರಿಯುತ್ತದೆ ಮತ್ತು ನಂತರ ಅದು ನರಳುತ್ತಾ ನರಳುತ್ತಾ ಸಾಯುತ್ತದೆ. ಇಂತಹ ನರಳಿ ಹತ್ಯೆ ಮಾಡಿದ ಪ್ರಾಣಿಗಳ ಮಾಂಸಕ್ಕೆ `ಹಲಾಲ್ ಮಾಂಸ’ ಎಂದು ಕರೆಯಲಾಗುತ್ತದೆ. ಈ ಪ್ರಾಣಿಗಳನ್ನು ಬಲಿ ನೀಡುವಾಗ, ಅವುಗಳ ಮುಖವನ್ನು ಮಕ್ಕಾದ ಕಡೆಗೆ ತಿರುಗಿಸಲಾಗುತ್ತದೆ ಮತ್ತು ಈ ಕೆಲಸವನ್ನು ಮುಸ್ಲಿಮೇತರರಿಗೆ ನೀಡಲಾಗುವುದಿಲ್ಲ.