ಅಂಬಿಕಾಪುರ (ಛತ್ತಿಸಗಡ) ಇಲ್ಲಿ ಹಿಂದೂಗಳನ್ನು ಮತಾಂತರಿಸುವ ಪ್ರಯತ್ನವನ್ನು ವಿಫಲಗೊಳಿಸಿದ ಹಿಂದೂ ಸಂಘಟನೆ!

ಸಾಲ್ವೇಶನ್ ಮಿಂಜ ಎಂಬ ಕ್ರೈಸ್ತ ಮಿಷನರಿ ಪೊಲೀಸರ ವಶಕ್ಕೆ

* ದೇಶದಲ್ಲಿ ಮತಾಂತರ ವಿರೋಧಿ ಕಾನೂನು ಅಸ್ತಿತ್ವದಲ್ಲಿ ಇಲ್ಲದ್ದರಿಂದ ಕ್ರೈಸ್ತ ಮಿಶನರಿಗಳು ಇಂದಿಗೂ ಹಿಂದೂಗಳನ್ನು ಮತಾಂತರಿಸುತ್ತಿವೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನನ್ನು ಜಾರಿ ಪಡಿಸಬೇಕು !- ಸಂಪಾದಕರು 

ಅಂಬಿಕಾಪುರ (ಛತ್ತೀಸಗಡ) – ಇಲ್ಲಿಯ ಉದಯಪುರದ ಢಾಪ ಗ್ರಾಮದಲ್ಲಿ ಕಾಯಿಲೆಯನ್ನು ವಾಸಿಗೊಳಿಸುವ ನೆಪದಲ್ಲಿ ಮುಗ್ಧ ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತ ಮಿಷನರಿಯ ಪ್ರಯತ್ನವನ್ನು ಹಿಂದೂ ಸಂಘಟನೆಗಳು ವಿಫಲಗೊಳಿಸಿದವು.

ರಾಜ್ಯದ ಬಿಲಾಸಪುರ ಜಿಲ್ಲೆಯ ನಿವಾಸಿಯಾದ ಸಲ್ವೆಶನ ಮಿಂಜ ಎಂಬ ಕ್ರೈಸ್ತ ಮಿಷನರಿಯು ಉದಯಪುರದ ಢಾಪ ಗ್ರಾಮದಲ್ಲಿ ಕಳೆದ ಎರಡು ದಿನದಿಂದ ಅಲ್ಲಿಯೇ ವಾಸವಾಗಿದ್ದನು. ಆತ ಅಲ್ಲಿ ಪ್ರಾರ್ಥನಾ ಸಭೆಯನ್ನು ಆಯೋಜಿಸಿದ್ದನು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಭಾರತೀಯ ಜನತಾ ಯುವ ಮೋರ್ಚಾ, ಬಜರಂಗದಳ, ಮತ್ತು ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಅಲ್ಲಿಗೆ ತಲುಪಿ ಮಿಂಜ ಇವನ ಹುನ್ನಾರವನ್ನು ವಿಫಲಗೊಳಿಸಿದರು. ಅದೇ ಸಮಯದಲ್ಲಿ ಪೊಲೀಸರು ಅಲ್ಲಿಗೆ ತಲುಪಿದರು. ಅವರು ಮಿಂಜನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕೊಂಡೊಯ್ದರು.