ಖಾರಿವಾಡೋ, ವಾಸ್ಕೋದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಿಂದ ನಾಲ್ಕು ಲಕ್ಷ ರೂಪಾಯಿ ಬೆಲೆಬಾಳುವ ಆಭರಣಗಳ ಕಳವು

ಹಿಂದೂ ದೇವಸ್ಥಾನಗಳಿಗೆ ಹೆಚ್ಚುತ್ತಿರುವ ಅಸುರಕ್ಷಿತತೆ !

ವಾಸ್ಕೋ – ಖಾರಿವಾಡೋ, ವಾಸ್ಕೋದಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನಾಲ್ಕು ಲಕ್ಷ ರೂಪಾಯಿ ಬೆಲೆಬಾಳುವ ಆಭರಣಗಳು ಕಳವಾಗಿರುವ ಘಟನೆಯು ಬೆಳಕಿಗೆ ಬಂದಿದೆ. ದೇವಸ್ಥಾನ ಸಮಿತಿಯು ಈ ಪ್ರಕರಣದ ಬಗ್ಗೆ ವಾಸ್ಕೋ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದೆ.

(ಸೌಜನ್ಯ: Goa News Now)

ಸಿಕ್ಕಿರುವ ಮಾಹಿತಿಯನುಸಾರ `ಮುರಗಾವ ಹಿಂದೂ ಸಮಾಜ’ದ `ಮಹಾಲಕ್ಷ್ಮಿ ಉತ್ಸವ ಸಮಿತಿ’ಯು ಪ್ರತಿವರ್ಷದಂತೆ ಈ ಸಲವೂ ಖಾರಿವಾಡೊದಲ್ಲಿನ ದೇವಸ್ಥಾನದಲ್ಲಿ ಲಕ್ಷ್ಮೀಪೂಜೆಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆ ಸಮಯದಲ್ಲಿ ದೇವಿಯ ಮೂರ್ತಿಗೆ ಹಾಕಲಾಗುವ ಎರಡು ಆಭರಣಗಳು ಕಳುವಾಗಿದೆ ಎಂದು ದೇವಸ್ಥಾನ ಸಮಿತಿಗೆ ನವೆಂಬರ್ 6 ರಂದು ಬೆಳಿಗ್ಗೆ ಗಮನಕ್ಕೆ ಬಂದಿದೆ.

ಕುಂಭವಡೆ ಮತ್ತು ಕರುಳ ಗ್ರಾಮದ ಎರಡು ದೇವಸ್ಥಾನಗಳ ಹುಂಡಿಗಳು ಒಡೆಯಲಾಗಿದೆ

ವೈಭವವಾಡಿ – ತಾಲೂಕಿನ ಕುಂಭವಡೆ ಮತ್ತು ಕರುಳ ಎಂಬ ಎರಡು ಗ್ರಾಮದ ಎರಡು ದೇವಸ್ಥಾನಗಳಲ್ಲಿನ ಹುಂಡಿಗಳನ್ನು ನವೆಂಬರ್ 5 ರಂದು ರಾತ್ರಿ ಒಡೆದು ನಗದು ಹಣವನ್ನು ಕಳವು ಮಾಡಲಾಗಿದೆ. ದೇವಸ್ಥಾನದ ಬಾಗಿಲುಗಳನ್ನು ಒಡೆದು ಕಳ್ಳರು ದೇವಸ್ಥಾನವನ್ನು ಪ್ರವೇಶಿಸಿದ್ದಾರೆ. ಈ ವಿಷಯ ತಿಳಿದ ನಂತರ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.