ಪಟಾಕಿಗಳ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಕೊಲಕಾತಾ ಉಚ್ಚ ನ್ಯಾಯಾಲಯದ ತೀರ್ಪು ಸರ್ವೋಚ್ಚ ನ್ಯಾಯಾಲಯದಿಂದ ರದ್ದು !

ಕೊಲಕಾತಾ (ಬಂಗಾಲ) – ಕೊಲಕಾತಾ ಉಚ್ಚ ನ್ಯಾಯಾಲಯವು ಬಂಗಾಲದಲ್ಲಿ ದೀಪಾವಳಿ ಹಾಗೂ ಇತರ ಹಬ್ಬಗಳಂದು ಪಟಾಕಿಯನ್ನು ಸಿಡಿಸಲು ಹೇರಿದ್ದ ನಿರ್ಬಂಧವನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿದೆ. ಸರ್ವೋಚ್ಚ ನ್ಯಾಯಾಲಯವು, `ದೇಶದಲ್ಲಿ ಪಟಾಕಿಗಳನ್ನು ಸಂಪೂರ್ಣವಾಗಿ ನಿರ್ಬಂಧ ಹೇರಲು ಸಾಧ್ಯವಿಲ್ಲ; ಆದರೆ ಅದರ ದುರುಪಯೋಗವನ್ನು ತಪ್ಪಿಸಲು ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚು ಬಲಿಷ್ಠ ಮಾಡಬೇಕು.’ ಅದರ ಜೊತೆಗೆ ನ್ಯಾಯಾಲಯವು ನಿರ್ಬಂಧ ಹೇರಿರುವ ಪಟಾಕಿ ಮತ್ತು ಅದಕ್ಕೆ ಸಂಬಂಧಪಟ್ಟ ವಸ್ತುಗಳನ್ನು ರಾಜ್ಯಕ್ಕೆ ಆಮದು ಮಾಡದಂತೆ, ರಾಜ್ಯದ ಪ್ರವೇಶದ್ವಾರದಲ್ಲಿಯೇ ಅದನ್ನು ನಿಶ್ಚಿತ ಪಡಿಸಿಕೊಳ್ಳುವಂತೆ ಬಂಗಾಲ ಸರಕಾರಕ್ಕೆ ಆದೇಶಿಸಿದೆ. ಕೊರೊನಾದ ಹಿನ್ನೆಲೆಯಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟಲು ಬಂಗಾಲದಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟ, ಬಳಕೆ ಮತ್ತು ಖರೀದಿಯ ಮೇಲೆ ನಿರ್ಬಂಧ ಹೇರಿದ್ದ ಕೋಲಕತಾ ಉಚ್ಚ ನ್ಯಾಯಾಲಯದ ಅಕ್ಟೋಬರ್ 29 ರ ಆದೇಶದ ವಿರುದ್ಧದ ಮನವಿಯ ಮೇಲಿನ ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಆದೇಶ ನೀಡಿದೆ.

ತಮಿಳುನಾಡಿನಲ್ಲಿ ಪಟಾಕಿ ಸಿಡಿಸಲು ದಿನದಲ್ಲಿ 2 ತಾಸಿನ ಕಾಲಾವಕಾಶ

ತಮಿಳುನಾಡು ಸರಕಾರವು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪಟಾಕಿ ಸಿಡಿಸಲು ಎರಡು ಗಂಟೆಯ ಕಾಲಾವಕಾಶವನ್ನು ಘೋಷಿಸಿದೆ. ಅದಕ್ಕನುಸಾರ ಬೆಳಿಗ್ಗೆ 6 ರಿಂದ 7 ಹಾಗೂ ಸಂಜೆ 7 ರಿಂದ 8 ರ ಸಮಯದಲ್ಲಿಯೇ ಪಟಾಕಿಯನ್ನು ಸಿಡಿಸಬಹುದು ಎಂದು ಪರಿಸರ ಮತ್ತು ವನ ವಿಭಾಗವು ಪ್ರಕಟಣೆಯಲ್ಲಿ ಸ್ಪಷ್ಟ ಪಡಿಸಿದೆ.

ದೆಹಲಿಯಲ್ಲಿ ಪಟಾಕಿಗಳ ಮೇಲೆ ನಿರ್ಬಂಧ ಮುಂದುವರಿಕೆ !

ದೆಹಲಿಯಲ್ಲಿ ಪಟಾಕಿಗಳ ಮೇಲೆ ನಿರ್ಬಂಧವಿರುವಾಗ ಭಾರತ-ಪಾಕ ಆಟದಲ್ಲಿ ಭಾರತವು ಪರಾಭವಗೊಂಡಾಗ ಮತಾಂಧರು ಹೇಗೆ ಪಟಾಕಿಗಳನ್ನು ಸಿಡಿಸಿದರು ? ಹಾಗೂ ಪೊಲೀಸರು ಮತ್ತು ದೆಹಲಿ ಆಡಳಿತವು ಅವರ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ ?, ಎಂಬುದು ಜನರಿಗೆ ತಿಳಿಯಬೇಕು ! – ಸಂಪಾದಕರು

ದೆಹಲಿ – ದೇಶದ ರಾಜಧಾನಿಯಲ್ಲಿ ಪಟಾಕಿ ಸಿಡಿಸಲು ಹೇರಿರುವ ನಿರ್ಬಂಧ ಮುಂದುವರಿಯಲಿದೆ, ಎಂದು ಹಿರಿಯ ಅಧಿಕಾರಿಗಳೊಬ್ಬರು ಸ್ಪಷ್ಟ ಪಡಿಸಿದರು. ದೆಹಲಿಯ ಗಾಳಿಯು ತುಂಬಾ ಕಡಿಮೆ ಗುಣಮಟ್ಟದ್ದಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ಪ್ರಾಧಿಕರಣವು 2 ಡಿಸೆಂಬರ 2020 ರಂದು ಎಲ್ಲಾ ರೀತಿಯ ಪಟಾಕಿಗಳ ಮಾರಾಟ ಮತ್ತು ವ್ಯಾಪಾರದ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರುವಂತೆ ಆದೇಶ ನೀಡಿತ್ತು.