ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರದಿಂದ ಅಮೆರಿಕನ್ ಡಾಲರ್ ಮೇಲೆ ನಿರ್ಬಂಧ

ಕಾಬುಲ (ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ನಿಯಂತ್ರಣ ಪಡೆದ ನಂತರ ಜಾಗತಿಕ ಸಂಘಟನೆಗಳು ಅಫ್ಘಾನಿಸ್ತಾನದ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಿದೆ. ಅಂತಾರಾಷ್ಟ್ರೀಯ ಬ್ಯಾಂಕ್ ಹಾಗೂ ಅಮೆರಿಕ ಮತ್ತು ಯುರೋಪಿನಲ್ಲಿನ ಬ್ಯಾಂಕ್‍ಗಳಲ್ಲಿ ಅಫ್ಘಾನಿಸ್ತಾನ ಸರಕಾರವು ಇಟ್ಟಿರುವ ಹಣವನ್ನು ಮುಟ್ಟುಗೋಲು ಹಾಕಲಾಗಿದೆ. ಇದಕ್ಕೆ ಪ್ರತ್ಯುತ್ತರವೆಂದು ತಾಲಿಬಾನ್ ಸರಕಾರವು ಅಫ್ಘಾನಿಸ್ತಾನದಲ್ಲಿ ಅಮೆರಿಕನ್ ಡಾಲರ್ ಉಪಯೋಗಿಸಲು ಸಂಪೂರ್ಣವಾಗಿ ನಿರ್ಬಂಧ ಹೇರಿದೆ. ಜನರಿಗೆ ವ್ಯವಹಾರ ಮಾಡಲು ಅಫ್ಘಾನಿಸ್ತಾನದ ಚಲನನ್ನು ಉಪಯೋಗಿಸಲು ಕಡ್ಡಾಯಗೊಳಿಸಲಾಗಿದೆ.