ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಭಾಜಪ ಶಾಸಕ ತ್ರಿವೇಂದ್ರಸಿಂಗ್ ರಾವತ್ ಇವರನ್ನು ದರ್ಶನ ಪಡೆಯುವುದನ್ನು ತಡೆದ ಅರ್ಚಕರು !

ಚಾರಧಾಮ್ ತೀರ್ಥಕ್ಷೇತ್ರವನ್ನು ಸರಕಾರೀಕರಣಗೊಳಿಸಲು ಕಾನೂನು ರೂಪಿಸಿದ ಪ್ರಕರಣ

ಇದರಿಂದ ದೇವಸ್ಥಾನ ಸರಕಾರಿಕರಣದ ವಿರುದ್ಧ ಹಿಂದೂಗಳ ಭಾವನೆಗಳು ಎಷ್ಟು ಪ್ರಬಲವಾಗಿವೆ, ಎಂಬುದು ಗಮನಕ್ಕೆ ಬರುತ್ತದೆ ! ಕೇಂದ್ರ ಮತ್ತು ಎಲ್ಲಾ ರಾಜ್ಯ ಸರಕಾರಗಳು ಈಗಲಾದರೂ ದೇವಸ್ಥಾನಗಳನ್ನು ಭಕ್ತರ ವಶಕ್ಕೆ ನೀಡುವುದೇ ? – ಸಂಪಾದಕರು 

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಮತ್ತು ಶಾಸಕ ತ್ರಿವೇಂದ್ರಸಿಂಗ್ ರಾವತ್

ಕೇದಾರನಾಥ (ಉತ್ತರಾಖಂಡ) – ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಮತ್ತು ಭಾಜಪ ಶಾಸಕ ತ್ರಿವೇಂದ್ರಸಿಂಗ್ ರಾವತ್ ಅವರು ಇಲ್ಲಿಗೆ ತಲುಪಿದಾಗ ಅಲ್ಲಿಯ ಪುರೋಹಿತ ಸಮುದಾಯದವರು ಅವರನ್ನು ದರ್ಶನವನ್ನು ಪಡೆಯಲು ತಡೆದರು. ಚಾರಧಾಮ್ ತೀರ್ಥಕ್ಷೇತ್ರದ ಸರಕಾರೀಕರಣಗೊಳಿಸಲು ರಾಜ್ಯದ ಭಾಜಪ ಸರಕಾರವು ಕಾನೂನು ರೂಪಿಸಿದ್ದು ಅದಕ್ಕೆ ಪುರೋಹಿತ್ ಸಮುದಾಯವು ವಿರೋಧಿಸಿದೆ. ಪುರೋಹಿತರು ರಾವತ್ ಇವರನ್ನು ಇಲ್ಲಿಯ ಸಂಗಮ ಬಳಿಯ ಸೇತುವೆಯ ಮುಂದೆ ಬರಲು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಘೋಷಣೆಗಳನ್ನೂ ಕೂಗಲಾಗಿತ್ತು. ಇದರಿಂದಾಗಿ ರಾವತ್ ಅವರು ದೇವಸ್ಥಾನದಲ್ಲಿ ದರ್ಶನ ಪಡೆಯದೆ ಸರಕಾರಿ ವಿಶ್ರಾಂತಿಗೃಹಕ್ಕೆ ತೆರಳಿದ್ದಾರೆ. ಪುರೋಹಿತರ ಪ್ರಕಾರ, ‘ರಾವತ್ ಇವರೇ ಸರಕಾರಿಕರಣದ ಕಾನೂನು ತಂದಿದ್ದಾರೆ’ ಎಂದು ಹೇಳಿದ್ದಾರೆ.

ಈ ಘಟನೆಯ ಒಂದು ದಿನ ಮೊದಲು ಭಾಜಪದ ಪ್ರದೇಶಾಧ್ಯಕ್ಷ ಮದನ್ ಕೌಶಿಕ್ ಮತ್ತು ರಾಜ್ಯ ಸಚಿವ ಧನಸಿಂಗ್ ರಾವತ್ ಕೂಡ ದರ್ಶನಕ್ಕೆ ಬಂದಿದ್ದರು. ಆಗಲೂ ಅವರಿಗೂ ಪುರೋಹಿತರಿಂದ ವಿರೋಧ ವ್ಯಕ್ತವಾಗಿತ್ತು. ಉತ್ತರಾಖಾಂಡ ಸರಕಾರವು ಈ ಸರಕಾರಿಕರಣದ ಕಾನೂನನ್ನು ರದ್ದುಗೊಳಿಸುವುದಾಗಿ ಪುರೋಹಿತರಿಗೆ ಈ ಹಿಂದೆಯೇ ಭರವಸೆ ನೀಡಿತ್ತು; ಆದರೆ ಈ ಆಶ್ವಾಸನೆ ಪಾಲಿಸದ್ದರಿಂದ ಪುರೋಹಿತರಲ್ಲಿ ಭಾಜಪ ಸರಕಾರದ ವಿರುದ್ಧ ಆಕ್ರೋಶವಿದೆ.