ಗೋರಖಪುರ (ಉತ್ತರಪ್ರದೇಶ) – ಬರುವ ಮೂರುವರೆ ವರ್ಷದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಲಿದೆ, ಎಂದು ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು. ಸದ್ಯ ಅವರು ಗೋರಖಪುರದಲ್ಲಿ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾರೆ. ಆ ಸಮಯದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
तीन से चार वर्षों में भारत बन जाएगा हिन्दू राष्ट्र : शंकराचार्य स्वामी निश्चलानंद सरस्वतीhttps://t.co/aEs6p285n5
— ETV Bharat Jharkhand (@ETVBharatJH) October 29, 2021
ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ ಹೀಗೆಂದರು,
೧. ಭಾರತದ ವಿಭಜನೆಯ ನಂತರ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿರುವುದು ಇದು ಆಡಳಿತ ಮತ್ತು ರಾಜಕೀಯ ಪಕ್ಷಗಳು ದಾರಿತಪ್ಪಿವೆ ಎಂಬುದನ್ನೇ ತೋರಿಸುತ್ತದೆ. ಈಗ ಸ್ಥಾಪನೆಯಾಗಲಿರುವ ಹಿಂದೂ ರಾಷ್ಟ್ರದ ಸಮೀಕ್ಷೆಯನ್ನು ನೀವು ಮಾಡಬಹುದು, ಅದನ್ನು ನೋಡುತ್ತಿರಬಹುದು ಅಥವಾ ಅದರಲ್ಲಿ ಭಾಗವಹಿಸಬಹುದು.
೨. ಭಾರತದ ನಾಯಕರಿಗೆ ಧರ್ಮ ಮತ್ತು ನೀತಿ ತಿಳಿಯುವುದಿಲ್ಲ, ದೇಶದಲ್ಲಿ ರಾಜಕೀಯ ನಾಯಕರ ಕೊರತೆ ಇದೆ; ಆದರೆ ರಾಜಕೀಯ ವ್ಯಾಖ್ಯೆಯ ಬಗ್ಗೆ ಅವರು ಅಜ್ಞಾನಿಗಳಾಗಿದ್ದಾರೆ. ಇಂತಹ ನಾಯಕರಿಂದ ನಾವು ದೇಶದ ಘನತೆ, ಭದ್ರತೆ, ಸಮೃದ್ಧಿ ಹಾಗೂ ಉತ್ತಮ ಸಮಾಜ ನಿರ್ಮಾಣದ ಬಗ್ಗೆ ಏನು ಅಪೇಕ್ಷೆ ಇಡಲು ಸಾಧ್ಯ ? ಉದ್ರೇಕ, ‘ಒಡೆದು ರಾಜ್ಯವಾಳಿ’ ಈ ನೀತಿಯನ್ನು ಅವಲಂಬಿಸಿ ಅಧಿಕಾರವನ್ನು ಗಿಟ್ಟ್ಟಿಸುವುದು ಎಂದರೆ ರಾಜಕೀಯ ಅಲ್ಲ, ಬದಲಾಗಿ ವ್ಯಕ್ತಿ ಮತ್ತು ಸಮಾಜವನ್ನು ಸ್ವಾವಲಂಬಿ ಮತ್ತು ಸುಸಂಸ್ಕೃತವನ್ನಾಗಿಸಲು ಯಾವ ನೀತಿಗಳನ್ನು ಅವಲಂಬಿಸಲಾಗುತ್ತದೆಯೋ, ಅದಕ್ಕೆ ರಾಜಕೀಯ ಎನ್ನುತ್ತಾರೆ.
೩. ಮಹಾಭಾರತ, ಮತ್ಸ್ಯಪುರಾಣ, ಅಗ್ನಿ ಪುರಾಣ ಇತ್ಯಾದಿಗಳಲ್ಲಿ, ರಾಜಕೀಯದ ಇನ್ನೊಂದು ಹೆಸರು ರಾಜಧರ್ಮ ಎಂದು ಹೇಳಿದೆ. ನೀತಿ ಮತ್ತು ಧರ್ಮ ಇವು ಅದರ ಪರ್ಯಾಯ ಶಬ್ದಗಳಾಗಿವೆ.
೪. ‘ಹಿಂದೂ ಧರ್ಮಕ್ಕೆ ಪರ್ಯಾಯ ಶಬ್ದ ಯಾವುದು ?’, ಎಂದು ಪ್ರಶ್ನೆಯನ್ನು ವಿಚಾರಿಸಲಾಗಿತ್ತು. ಅದಕ್ಕೆ ಶಂಕರಾಚಾರ್ಯರು, ಅದಕ್ಕಾಗಿ ಸನಾತನ, ವೈದಿಕ, ಆರ್ಯ ಮತ್ತು ಹಿಂದೂ ಈ ನಾಲ್ಕೂ ಶಬ್ದಗಳನ್ನು ಉಪಯೋಗಿಸಬಹುದು. ಹಿಂದ ಮಹಾಸಾಗರ, ಹಿಂದುಕುಶ, ಹಿಂದಿ, ಹಿಂದೂ ಇವೆಲ್ಲವೂ ಕೂಡ ಪ್ರಾಚೀನ ಶಬ್ದಗಳಾಗಿವೆ. ಪುರಾಣ ಮತ್ತು ಋಗ್ವೇದ ಇವುಗಳಲ್ಲಿ ಹಿಂದೂ ಶಬ್ದವನ್ನು ಉಪಯೋಗಿಸಲಾಗಿದೆ. ಎಂದು ಹೇಳಿದರು.